ಅಪ್ರಾಪ್ತ ಬಾಲಕಿಗೆ ಅತ್ಯಾಚಾರ ಯತ್ನ-ಆರೋಪಿ ಪೋಲೀಸ್ ವಶಕ್ಕೆ

8:25 PM, Monday, December 21st, 2015
Share
1 Star2 Stars3 Stars4 Stars5 Stars
(5 rating, 5 votes)
Loading...
Haneefa

ಉಪ್ಪಳ: ಬಾಡಿಗೆ ಕ್ವಾರ್ಟ್ರಸ್ ನಲ್ಲಿ ವಾಸವಿರುವ ಕರ್ನಾಟಕ ಮೂಲದ ದಂಪತಿಗಳ ಕುರುಡಿ ಅಪ್ರಾಪ್ತ ಬಾಲಕಿಯೋರ್ವೆಯನ್ನು ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಸೋಮವಾರ ಅಪರಾಹ್ನ ಉಪ್ಪಳ ಹಿದಾಯತ್ ನಗರದಲ್ಲಿ ನಡೆದಿದ್ದು, ಪೋಲೀಸರ ಸಕಾಲಿಕ ಕಾರ್ಯಾಚರಣೆಯಿಂದ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಉಪ್ಪಳದ ಹಿದಾಯತ್ ನಗರದ ಬಾಡಿಗೆ ಕೊಠಡಿಯಲ್ಲಿ ವಾಸಿಸುವ ಕರ್ನಾಟಕ ಮೂಲದ ಕಲಂದರ್ ಹಾಗೂ ಅಫ್ರಿದಾಬಾನು ದಂಪತಿಗಳ ಪುತ್ರಿ ಮೂರನೇ ತರಗತಿಯ ವಿದ್ಯಾರ್ಥಿನಿಯನ್ನು ನೆರೆಮನೆಯ ವ್ಯಕ್ತಿಯಾದ ಮೊಹಮ್ಮದ್ ಹನೀಫಾ(50)ಅತ್ಯಾಚಾರಕ್ಕೆ ಯತ್ನಿಸಿರುವುದಾಗಿ ದೂರಲಾಗಿದೆ.

ಸೋಮವಾರ ಅಪರಾಹ್ನ ದಂಪತಿಗಳು ತಮ್ಮ ಇಬ್ಬರ ಮಕ್ಕಳ ಪೈಕಿ ಪುತ್ರನನ್ನು ಕರೆದುಕೊಂಡು ಔಷಧಿಗೆ ತೆರಳಿದ್ದ ವೇಳೆ ಮನೆಯಲ್ಲಿ ಕುರುಡಿಯಾದ ಬಾಲಕಿ ಒಬ್ಬಂಟಿಯಾಗಿ ಇರುವುದನ್ನು ಗಮನಿಸಿ ನೆರೆಯ ಬಾಡಿಗೆ ಕೊಠಡಿಯಲ್ಲಿ ವಾಸಿಸುವ ಮೊಹಮ್ಮದ್ ಹನೀಫಾ ಅತ್ಯಾಚಾರಕ್ಕೆ ಯತ್ನಿಸಿದಾಗ ಬಾಲಕಿ ಬೊಬ್ಬಿರಿದಿದ್ದು,ತಕ್ಷಣ ಧಾವಿಸಿದ ಪರಿಸರವಾಸಿಗಳು ಮೊಹಮ್ಮದ್ ಹನೀಫಾನನ್ನು ಕೈಯಾರೆ ಹಿಡಿದು ಶಾಸ್ತಿಮಾಡಿ ಮಂಜೇಶ್ವರ ಪೋಲೀಸರಿಗೊಪ್ಪಿಸಿದರು.ಆರೋಪಿ ಮೊಹಮ್ಮದ್ ಹನೀಫಾ ಈ ಹಿಂದೆಯೂ ಈ ಬಾಲಕಿಯ ಅತ್ಯಾಚಾರಕ್ಕೆ ಯತ್ನಿಸಿದ್ದನೆಂದು ಬಾಲಕಿಯ ಪೋಷಕರು ತಿಳಿಸಿದ್ದಾರೆ. ಬಾಲಕಿಯನ್ನು ಉನ್ನತ ಮಟ್ಟದ ವೈದ್ಯಕೀಯ ತಪಾಸಣೆಗೊಳಪಡಿಸಲಾಗುವುದೆಂದು ಪೋಲೀಸರು ತಿಳಿಸಿದ್ದಾರೆ.

ಕಳೆದ ಎರಡು ತಿಂಗಳ ಹಿಂದೆ ಉಪ್ಪಳ ಐಲ ಪರಿಸರದಲ್ಲಿ ಅಪ್ರಾಪ್ತ ಮೂಕಿ ಬಾಲಕಿಯೋರ್ವೆಯ ಮೇಲೆ ಅತ್ಯಾಚಾರ ಯತ್ನ ನಡೆದಿದ್ದು,ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿರುವ ಬೆನ್ನಿಗೆ ಇದೀಗ ಮತ್ತೊಂದು ಪ್ರಕರಣ ಘಟಿಸಿರುವುದು ಉಪ್ಪಳ ಪರಿಸರ ಪ್ರದೇಶದ ಜನರನನು ಭೀತಗೊಳಿಸಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English