ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬೋಳ ಚಿತ್ತರಂಜನ್ ದಾಸ್ ಶೆಟ್ಟಿ ನಿಧನ

10:39 AM, Monday, August 8th, 2016
Share
1 Star2 Stars3 Stars4 Stars5 Stars
(No Ratings Yet)
Loading...

Bola-Chittaranjan-Das-Shettyಮಂಗಳೂರು: ಖ್ಯಾತ ಸಾಹಿತಿ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬೋಳ ಚಿತ್ತರಂಜನ್ ದಾಸ್ ಶೆಟ್ಟಿ (72) ಹೃದಯಾಘಾತದಿಂದ ಭಾನುವಾರ ಸಂಜೆ ನಿಧನರಾಗಿದ್ದಾರೆ. ಅವರ ಹಠಾತ್ ನಿಧನ ಆತ್ಮೀಯ ಬಳಗಕ್ಕೆ ಆಘಾತವುಂಟು ಮಾಡಿದೆ.

ಉಡುಪಿ ಜಿಲ್ಲೆಯ ಕಾರ್ಕಳದ ಬೋಳ ಗ್ರಾಮದಲ್ಲಿ ಜನಿಸಿದ ಚಿತ್ತರಂಜನ್ ದಾಸ್ ಶೆಟ್ಟಿ 1973ರಲ್ಲಿ ‘ಪೊಣ್ಣು ಮಣ್ಣು ಬೊಂಬೆ’ ಎಂಬ ತುಳು ನಾಟಕ ರಚಿಸುವ ಮೂಲಕ ಸಾಹಿತ್ಯ ಲೋಕದಲ್ಲಿ ಹೊಸ ಹೆಜ್ಜೆ ಮುಡಿಸಿದ್ದರು.

1983ರಲ್ಲಿ ತುಳುನಾಡಿನ ವಿಶಿಷ್ಟ ಕ್ರೀಡೆ ‘ಕಂಬುಲ’ದ ಕುರಿತು ಪ್ರಬಂಧವನ್ನು ರಚಿಸುವ ಮೂಲಕ ಖ್ಯಾತಿ ಗಳಿಸಿದ್ದರು. ಇದು ಈ ಕ್ರೀಡೆಯ ಕುರಿತ ಪ್ರಥಮ ದಾಖಲೆಯಾಗಿದೆ. ಬಳಿಕ ಮಾತೃ ಪ್ರಧಾನ ಸಮಾಜದ ವೈಶಿಷ್ಟ್ಯವನ್ನು ಹೇಳುವ `ಅಳಿದುಳಿದವರು’ ಇವರಿಗೆ ಖ್ಯಾತಿಯನ್ನು ತಂದುಕೊಟ್ಟಿತು. ದಾಸ್ ಶೆಟ್ಟಿ `ಕುಡಿ’ ಎಂಬ ಕನ್ನಡ ಕಾದಂಬರಿ ಹಾಗೂ `ನೀರ್’ ಎಂಬ ನಾಟಕವನ್ನು ಮಕ್ಕಳಿಗಾಗಿಯೇ ರಚಿಸಿದ್ದರು.

Bola-Chittaranjan-Das-Shettyಬಿನ್ನೆದಿ ತುಳು ಪಾಡ್ದನ, ಅಮರ ಬೀರೆರ ಮಾಮಣ್ಣೆ, ಒಂಟಿ ಒಬ್ಬಂಟಿ-ಕಾದಂಬರಿ, ಬೆನ್ನಿದ ಬೇಲೆ ಕವನ ಸಂಕಲನ ಸೇರಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಇವರು ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದರು. ಬೋಳ ಚಿತ್ತರಂಜನ್ ದಾಸ್ ಶೆಟ್ಟಿ ಅವರು ಪತ್ನಿ, ಇಬ್ಬರು ಮಕ್ಕಳು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English