ಉಡುಪಿಯಲ್ಲಿ ನರ್ಮ್-ಕೆಎಸ್‌ಆರ್‌ಟಿಸಿ ಸಿಟಿ ಬಸ್‌ಗಳ ಓಡಾಟಕ್ಕೆ ಚಾಲನೆ

11:40 AM, Thursday, September 8th, 2016
Share
1 Star2 Stars3 Stars4 Stars5 Stars
(No Ratings Yet)
Loading...

udupi-nurm-busಉಡುಪಿ: ಉಡುಪಿ ನಗರ ಮತ್ತು ಗ್ರಾಮೀಣ ಭಾಗಗಳಿಂದ ಬೇಡಿಕೆ ಬಂದರೆ ಮತ್ತಷ್ಟು ಸರಕಾರಿ ಬಸ್‌ಗಳನ್ನು ಓಡಿಸಲು ಸರಕಾರ ಸಿದ್ಧವಿದೆ ಎಂದು ಸಚಿವ ಪ್ರಮೋದ್‌ ಮಧ್ವರಾಜ್‌ ತಿಳಿಸಿದ್ದಾರೆ.

ಸೆ. 7ರಂದು ಉಡುಪಿಯಲ್ಲಿ ನರ್ಮ್-ಕೆಎಸ್‌ಆರ್‌ಟಿಸಿ ಸಿಟಿ ಬಸ್‌ಗಳ ಓಡಾಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಖಾಸಗಿ ಬಸ್‌ ಮಾಲಕರ ಲಾಬಿಗೆ ಮಣಿಯುವ ಪ್ರಶ್ನೆಯೇ ಇಲ್ಲ. ಉಡುಪಿ ನಗರದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಆರಂಭವಾಗುತ್ತಿರುವುದು ಐತಿಹಾಸಿಕ. ಖಾಸಗಿ ಬಸ್‌ ಮಾಲಕರ ಒತ್ತಡ ಇದ್ದರೂ ಅದನ್ನು ಲೆಕ್ಕಿಸದೆ ಸಾರ್ವಜನಿಕರು, ವಿಶೇಷವಾಗಿ ವಿದ್ಯಾರ್ಥಿಧಿಗಳ ಹಿತದೃಷ್ಟಿಯಿಂದ ನರ್ಮ್ ಬಸ್‌ ಓಡಿಸುವ ನಿರ್ಧಾರ ಕೈಗೊಂಡಿದ್ದೆ. ಯುಪಿಎ ಸರಕಾರದಲ್ಲಿ ಸಚಿವರಾಗಿದ್ದ ಆಸ್ಕರ್‌ ಫೆರ್ನಾಂಡಿಸ್‌ ಅವರು ಉಡುಪಿಗೆ 28 ಬಸ್‌ಗಳನ್ನು ಮಂಜೂರು ಮಾಡಿಸಿದ್ದಾರೆ.

ಈ ಪೈಕಿ ಉಡುಪಿಯಲ್ಲಿ ಮೊದಲ ಹಂತಧಿದಲ್ಲಿ 12 ಬಸ್‌ಗಳು ಓಡಾಡಲಿವೆ. ಸದ್ಯದಲ್ಲಿಯೇ ಉಳಿದವುಗಳ ಓಡಾಟ ಕೂಡ ಆರಂಭವಾಗಲಿದೆ. ಖಾಸಗಿ ಬಸ್‌ಗಳಿಗೆ ಪೈಪೋಟಿ ನೀಡಲು ಕೆಎಸ್‌ಆರ್‌ಟಿಸಿ ಸಮರ್ಥವಿದೆ ಎಂದರು.

ಬೀಡಿನಗುಡ್ಡೆಯ ಮೈದಾನದಲ್ಲಿ ಜರಗಿದ ಈ ಸಮಾರಂಭದಲ್ಲಿ ನಗರದ ವಿವಿಧ ಕಾಲೇಜುಗಳ ಸುಮಾರು 3,000ಕ್ಕೂ ಅಧಿಕ ಮಂದಿ ವಿದ್ಯಾರ್ಥಿಧಿಗಳು ಪಾಲ್ಗೊಂಡಿದ್ದರು.

ನಗರಸಭೆ ಉಪಾಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಉಪಾಧಿಧ್ಯಕ್ಷೆ ಸಂಧ್ಯಾ ತಿಲಕ್‌, ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷೆ ವೆರೋನಿಕಾ ಕರ್ನೇಲಿಯೋ, ಜಿ.ಪಂ. ಸದಸ್ಯ ಜನಾರ್ದನ ತೋನ್ಸೆ, ಕೆಎಸ್‌ಆರ್‌ಟಿಸಿ ವಿಭಾಧಿಗೀಯ ನಿಯಂತ್ರಣಾಧಿಕಾರಿ ವಿವೇಕ್‌ ಐ. ಹೆಗಡೆ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜನಾರ್ದನ ತೋನ್ಸೆ, ನಗರ ಸಭಾ ಸದಸ್ಯರಾದ ಸೆಲಿನಾ ಕರ್ಕಡ, ಗಣೇಶ್‌ ನೇರ್ಗಿ, ಶಾಂತಾಧಿರಾಮ್‌ ಸಾಲ್ವಂಕರ್‌ ಉಪಸ್ಥಿತರಿದ್ದರು.

ಸೆ. 8ರಿಂದ 1 ಬಸ್‌ ಮಣಿಧಿಪಾಲ- ಉಡುಪಿ- ಮಲ್ಪೆ- ಹೂಡೆ ಮಾರ್ಗಧಿಗಳಲ್ಲಿ ಎರಡು ಬಸ್‌, ಉಡುಪಿ- ಸಂತೆಕಟ್ಟೆ- ಕೆಳಾರ್ಕಳಬೆಟ್ಟು – ಕೊಡವೂರು- ಮಲ್ಪೆ ಮಾರ್ಗವಾಗಿ ಒಂದು ಬಸ್‌, ಪರ್ಕಳ- ಉಡುಪಿ- ಉದ್ಯಾವರ- ಪಿತ್ರೋಡಿ ಮಾರ್ಗಧಿವಾಗಿ 1 ಬಸ್‌ ಹಾಗೂ ಉಡುಪಿ- ನಿಟ್ಟೂರು- ಸಂತೆಕಟ್ಟೆ- ಕೆಮ್ಮಣ್ಣು – ಹೂಡೆ ಮಾರ್ಗವಾಗಿ ಒಂದು ಬಸ್‌ ಹೀಗೆ 5 ಬಸ್‌ಗಳು ಓಡಾಡಲಿವೆ. ಮುಂದಿನ ಒಂದು ತಿಂಗಳೊಳಗೆ ಉಳಿದ 7 ಬಸ್‌ಗಳು ಓಡಾಡಲಿವೆ.

ಪರಧಿವಾನಿಗೆ ಲಭಿಸಿದ ಅನಂತರ ಎಲ್ಲ 28 ಬಸ್‌ಗಳು ಓಡಾಟ ನಡೆಸಲಿವೆ. ಒಂದರಿಂದ ಏಳು ವರ್ಷದವರಿಗೆ ಉಚಿತ, ಅಂಗವಿಕಲರು, ವಿದ್ಯಾರ್ಥಿಧಿಗಳು, ಹಿರಿಯ ನಾಗರಿಕರು, ನಿತ್ಯ ಪ್ರಯಾಣಿಕರಿಗೆ ರಿಯಾಯಿತಿ ಇರುತ್ತದೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ಉಡುಪಿ ಖಾಸಗಿ ಸಿಟಿ ಮತ್ತು ಸರ್ವೀಸ್‌ ಬಸ್‌ ನಿಲ್ದಾಣಗಳ ನಡುವೆ ಲಭ್ಯ ಇರುವ 41 ಸೆಂಟ್ಸ್‌ ಜಾಗದಲ್ಲಿ 4 ಕೋ. ರೂ. ವೆಚ್ಚದಲ್ಲಿ ನರ್ಮ್ ಸಿಟಿ ಬಸ್‌ ನಿಲ್ದಾಣ ನಿರ್ಮಾಣಗೊಳ್ಳಲಿದೆ. ಅಂತೆಯೇ ಬನ್ನಂಜೆಯ 3 ಎಕರೆಧಿಯಲ್ಲಿ 5 ಕೋ.ರೂ ವೆಚ್ಚದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ನಿರ್ಮಾಣಗೊಳ್ಳಲಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English