ಮುಂದುವರಿದ ನೋಟಿನ ಪರದಾಟ, ನಿರಾಸೆ, ಪಿಕ್‌ಪಾಕೆಟ್

10:29 AM, Monday, November 14th, 2016
Share
1 Star2 Stars3 Stars4 Stars5 Stars
(No Ratings Yet)
Loading...

Bank rushಕುಂಬಳೆ: ದೇಶದಲ್ಲಿ 500 ಮತ್ತು 1000 ರೂ.ಗಳ ಮುಖಬೆಲೆ ನೋಟುಗಳನ್ನು ಹಿಂತೆದುಕೊಂಡಂದಿನಿಂದ ಜನ ಸಾಮಾನ್ಯರ ಪರದಾಟ ಹೆಚ್ಚಾಗಿದೆ. ಮೂಲೆ ಮೂಲೆಗಳಲಲ್ಲಿಯೂ ಇದರ ಬಗ್ಗೆಯೇ ಚರ್ಚೆಗಳು ನಡೆಯುತ್ತಿದೆ.

ಕುಂಬಳೆ, ಉಪ್ಪಳ, ಬಂದ್ಯೋಡು ಶಾಖೆಗಳಿರುವ ಎಲ್ಲಾ ಬ್ಯಾಂಕುಗಳಲ್ಲಿ ಶುಕ್ರವಾರವೂ ಜನಸಾಮಾನ್ಯರು ತಮ್ಮಲ್ಲಿರುವ ನೋಟಿನ ಬದಲಾವಣಿಗಾಗಿ ಭಾರೀ ಸಂಖ್ಯೆಯಲ್ಲಿ ಸರದಿ ಸಾಲಿನಲ್ಲಿ ಕಾಯುತ್ತಿರುವುದು ಕಂಡು ಬಂತು. ಕುಂಬಳೆ, ಉಪ್ಪಳದಲ್ಲಿ ಕಾರ್ಯಾಚರಿಸುತ್ತಿರುವ ಅಂಚೆಕಛೇರಿಯಲ್ಲಿಯೂ 2000 ರೂ. ನೋಟು ಲಭ್ಯವಿತ್ತು.

ಮೂರು ದಿನಗಳಿಂದ ಚಿಲ್ಲರೆಗಳಿಲ್ಲದೆ ಪರದಾಡುತ್ತಿದ್ದ ಜನರು ಶನಿವಾರವೂ ಬ್ಯಾಂಕುಗಳಲ್ಲಿ ಮಾರುದ್ದ ಸರತಿ ಸಾಲಿನಲ್ಲಿ ನಿಲ್ಲಲಾಗದೆ ನಿರಾಸೆ ಅನುಭವಿಸಿದರು.

ಕುಂಬಳೆಯಲ್ಲಿ ಪಿಕ್‌ಪಾಕೆಟ್
ಕುಂಬಳೆ ಬದಿಯಡ್ಕ ರಸ್ತೆಯಲ್ಲಿರುವ ಸಿಂಡಿಕೇಟ್ ಬ್ಯಾಂಕಿನಲ್ಲಿ ಉಳುವಾರ್ ನಿವಾಸಿ ಮೊಹಮ್ಮದ್ ಕುಂಞ ಎಂಬವರ ಸುಮಾರು 68 ಸಾವಿರ ರೂ.ಗಳ ಪಿಕ್‌ಪಾಕೆಟ್ ಶುಕ್ರವಾರ ನಡೆದಿದೆ.

ಬ್ಯಾಂಕಿನ ಮುಂಭಾಗದಲ್ಲಿ ಬೆಳಗ್ಗಿನಿಂದಲೇ ಭಾರೀ ಜನಸಂದಣಿಯಿಂದ್ದರಿಂದ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಸಿಟ್ಟು ಸರದಿ ಸಾಲಿನಲ್ಲಿ ಕಾಯುತ್ತಿದ್ದ ಸಂದರ್ಭ ಪಿಕ್‌ಪಾಕೆಟ್ ಉಂಟಾಗಿದೆ ಎಂದು ಕುಂಬಳೆ ಪೋಲಿಸ್ ಠಾಣೆಯಲ್ಲಿ ದೂರಲಾಗಿದೆ. ಇದೇ ಶಾಖೆಯಲ್ಲಿ ಹಣ ಬದಲಾವಣೆಗೆ ಅರ್ಜಿ ಸಲ್ಲಿಸುವ ನೆಪವೊಡ್ಡಿ ಅವರ ಗಮನವನ್ನು ಬೇರೆಡೆಗೆ ಸೆಳೆದು ಮಹಿಳೆಯೊಬ್ಬರಿಂದ 5 ಸಾವಿರ ಹಣವನ್ನು ಕಳವು ಮಾಡಿದ ಘಟನೆಯೂ ನಡೆದಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English