ರೈತರ ಅಭಿವೃದ್ಧಿ, ಗ್ರಾಮೀಣ ಜನತೆಗೆ ಉದ್ಯೋಗ ಮತ್ತು ಮೂಲಭೂತ ಸೌಲಭ್ಯ ಸರ್ಕಾರದ ಮೂಲ ಆದ್ಯತೆ: ಜೈಟ್ಲಿ

12:59 PM, Wednesday, February 1st, 2017
Share
1 Star2 Stars3 Stars4 Stars5 Stars
(No Ratings Yet)
Loading...

Jaitleyನವದೆಹಲಿ: 2017-18ರ ಕೇಂದ್ರ ಬಜೆಟ್ ಮಂಡಿಸಿದ ಸಚಿವ ಅರುಣ್ ಜೈಟ್ಲಿ, ರೈತರ ಅಭಿವೃದ್ಧಿ, ಗ್ರಾಮೀಣ ಜನತೆಗೆ ಉದ್ಯೋಗ ಮತ್ತು ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವುದು ತಮ್ಮ ಸರ್ಕಾರದ ಮೂಲ ಆದ್ಯತೆಗಳಾಗಿವೆ ಎಂದು ಪ್ರಕಟಿಸಿದ್ದಾರೆ.

ಕೃಷಿ ಮತ್ತು ರೈತರ ಅಭಿವೃದ್ಧಿಗಾಗಿ ಈ ಸಾಲಿನಲ್ಲಿ ಕೈಗೊಳ್ಳುತ್ತಿರುವ ಕ್ರಮಗಳನ್ನು ಜೈಟ್ಲಿ ಪ್ರಸ್ತಾಪಿಸಿದರು. ಮುಂದಿನ ಐದು ವರ್ಷಗಳಲ್ಲಿ ಕೃಷಿ ಆದಾಯ ದ್ವಿಗುಣಗೊಳಿಸಲು ಬದ್ಧವಿರುವುದಾಗಿ ತಿಳಿಸಿದರು.

ರೈತರು ಮತ್ತು ಕೃಷಿ ಅಭಿವೃದ್ಧಿಗಾಗಿ ಬಜೆಟ್ ನಲ್ಲಿ ಘೋಷಿಸಿದ ಅಂಶಗಳು ಹೀಗಿವೆ.

ಕೃಷಿ ಸಾಲ..
1. ಮುಂದಿನ ಐದು ವರ್ಷಗಳಲ್ಲಿ ಕೃಷಿ ಆದಾಯ ದ್ವಿಗುಣಗೊಳಿಸಲು ಬದ್ಧ
2. ರೈತರಿಗೆ ಕೃಷಿ ಸಾಲದ ಗುರಿ 10ಲಕ್ಷ ಕೋಟಿ
3. ರೈತರ ಸಾಲದ ಮೇಲೆ 60 ದಿನಗಳ ಬಡ್ಡಿ ವಿನಾಯಿತಿ
4. ರೈತರಿಗೆ ಫಸಲ್‌ ಬೀಮಾ ಯೋಜನೆ ಅಡಿ ಹಲವು ಹೊಸ ಅಂಶಗಳ ಘೋಷಣೆ
5. ಬೆಳೆ ವಿಮೆಯ ಹಣ ಪಡೆಯುವ ಮಿತಿ ಶೇಕಡಾ 40ಕ್ಕೆ ಏರಿಕೆ
6. ರೈತರು ಮಣ್ಣು ಪರೀಕ್ಷೆ ಮಾಡಿಸಲು ಹೆಚ್ಚುವರಿ ಮಿನಿ ಲ್ಯಾಬ್‌ಗಳ ಸ್ಥಾಪನೆ
7. ನರೇಗಾ ಯೋಜನೆ ಅಡಿ ಕಳೆದ ವರ್ಷ ಪೂರ್ಣ ಗುರಿ ತಲುಪಿದ ಸಾಧನೆ
8. ನರೇಗಾ ಯೋಜನೆಗೆ ಅತಿ ಹೆಚ್ಚು ಹಣ- 48 ಸಾವಿರ ಕೋಟಿ ಮೀಸಲು
9. ಹನಿ ನೀರಾವರಿಗಾಗಿ ನಬಾರ್ಡ್ ನಲ್ಲಿ ನಿಧಿ ಸ್ಥಾಪನೆ ಸಾಲ ನೀಡಿಕೆಯಲ್ಲಿ ಸರಳೀಕರಣ
10. ಡೈರಿ ಸ್ಥಾಪನೆಯ ಮೂಲ ಸೌಕರ್ಯ ಅಭಿವೃದ್ಧಿಗಾಗಿ 2ಸಾವಿರ ಕೋಟಿಯ ಹೊಸ ನಿಧಿ

ಗ್ರಾಮೀಣಾಭಿವೃದ್ಧಿ..
1. ಗ್ರಾಮೀಣ ಪ್ರದೇಶಗಳ ಸಂಪೂರ್ಣ ವಿದ್ಯುದೀಕರಣ ಗುರಿ ಸಾಧನೆಯತ್ತ ಸರ್ಕಾರ
2. 2018ರೊಳಗೆ ಶೇ.100ರಷ್ಟು ವಿದ್ಯುತ್ ಪೂರೈಕೆ
3. 1 ಕೋಟಿ ಗ್ರಾಮೀಣ ಜನತೆಯನ್ನು ಬಡತನದಿಂದ ಮುಕ್ತಗೊಳಿಸುವ ಭರವಸೆ
4. 1 ಕೋಟಿ ಕುಟುಂಬಗಳಿಗೆ ಅಂತ್ಯೋದಯ ಯೋಜನೆ,
5. ಪ್ರತಿ ಗ್ರಾಮಗಳಲ್ಲೂ ಶೌಚಾಲಯ ನಿರ್ಮಾಣಮಾಡುವುದಾಗಿ ಬಜೆಟ್‌ನಲ್ಲಿ ಅರುಣ್‌ ಜೈಟ್ಲಿ ಹೇಳಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English