ವಿಶ್ವ ಮಹಿಳಾ ದಿನದ ಅಂಗವಾಗಿ ರೆಡ್ ಎಫ್ ಎಂ. ನಿಂದ ಸೂಪರ್ ಸಾಧಕಿ ಅವಾರ್ಡ್

11:47 PM, Wednesday, March 22nd, 2017
Share
1 Star2 Stars3 Stars4 Stars5 Stars
(No Ratings Yet)
Loading...

super sadhakiಮಂಗಳೂರು  : ವಿಶ್ವ ಮಹಿಳಾ ದಿನದ ಅಂಗವಾಗಿ ಮಂಗಳೂರಿನ ಜನಪ್ರಿಯ ರೇಡಿಯೋ ಸ್ಟೇಶನ್ ಸೂಪರ್ ಹಿಟ್ಸ್93.5 ರೆಡ್ ಎಫ್ ಎಂ. ನಡೆಸಿದ ಸೂಪರ್ ಸಾಧಕಿ ಕಾರ್ಯಕ್ರಮದ ಸಮಾರೋಪ ಹಾಗು ಸೂಪರ್ ಸಾಧಕಿ ಪ್ರಶಸ್ತಿ ಪ್ರಧಾನ ಸಮಾರಂಭ ಇದೆ ಮಾರ್ಚ್ 21 ರಂದು ಸಂಜೆ 5 ಗಂಟೆಗೆ ಮಂಗಳೂರಿನ ಟೌನ್ ಹಾಲ್ ನಲ್ಲಿ ನಡೆಯಿತು .

8 ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡಿದ ಸಾಧಕಿಯರನ್ನು ಸೂಪರ್ ಸಾಧಕಿ ಅವಾರ್ಡ್ನ ಮೂಲಕ ಗೌರವಿಸಲಾಯಿತು. ವೈದ್ಯಕೀಯ ಕ್ಷೇತ್ರದ ಸಾಧನೆಗಾಗಿ ಡಾ .ಆರ್ ರತಿದೇವಿ, ಸಾಹಿತ್ಯ ಕ್ಷೇತ್ರದಲ್ಲಿ ಡಾ .ನಾಗವೇಣಿ ಮಂಚಿ , ನಾಟ್ಯದಲ್ಲಿ ನೃತ್ಯವಿದುಷಿ ಸುಮಂಗಲ ರತ್ನಾಕರ್ , ಕ್ರೀಡಾ ಕ್ಷೇತ್ರದಲ್ಲಿ ಸುಪ್ರೀತಾ ಪೂಜಾರಿ , ಮನೋರಂಜನಾ ಕ್ಷೇತ್ರದಲ್ಲಿ ಶ್ರೀಮತಿ ಸಂಧ್ಯಾ ಶೆಣೈ, ಸಂಗೀತದಲ್ಲಿ ಕುಮಾರಿ ಪಲ್ಲವಿ ಪ್ರಭು , ಶಿಕ್ಷಣ ಕ್ಷೇತ್ರದಲ್ಲಿ ಡಾ .ಬಿ ಕೆ ಸರೋಜಿನಿ, ಸಮಾಜ ಸೇವೆಯಲ್ಲಿ ಶ್ರೀಮತಿ ಗೀತಾ ಆರ್ ಶೆಟ್ಟಿ , ರೆಡ್ ಎಫ್ ಎಂ ಸೂಪರ್ ಸಾಧಕಿ ಅವಾರ್ಡ್ ಅನ್ನು ಪಡೆದುಕೊಂಡರು.

ಸಮಾರಂಭದ ಉದ್ಘಾಟನೆಯನ್ನು ಮಂಗಳೂರು ನಗರದ ಮೇಯರ್ ಶ್ರೀಮತಿ ಕವಿತಾ ಸನಿಲ್ ಮಾಡಿದರು , ಮುಖ್ಯ ಅತಿಥಿ ಗಳಾಗಿ ಡಾ .ಎಂ ಮೋಹನ್ ಆಳ್ವ, ಮಾಜಿ ಮಂತ್ರಿಗಳಾದ ಶ್ರೀ ಕೃಷ್ಣ ಪಾಲೆಮಾರ್,ಮಂಗಳೂರು ನಗರದ ಡಿಸಿಪಿ ಡಾ .ಸಂಜೀವ್ ಪಾಟೀಲ್, ಹಿರಿಯ ಪತ್ರಕರ್ತರಾದ ಪಿ ಬಿ ಹರೀಶ್ ರೈ, ಹಿರಿಯ ರಂಗಭೂಮಿ ನಟರಾದ ವಿ ಜಿ ಪಾಲ್ ಹಾಗು ಖ್ಯಾತ ತುಳು ಚಿತ್ರನಟಿ ಸೋನಲ್ ಮೊಂತೇರೊ ಮತ್ತು ರೆಡ್ ಎಫ್ ಎಂ ನ ಸ್ಟೇಷನ್ ಹೆಡ್ ಶೋಬಿತ್ ಶೆಟ್ಟಿ ಉಪಸ್ಥಿತರಿದ್ದರು . ಕಾರ್ಯಕ್ರಮದ ನಿರೂಪಣೆಯನ್ನು ರೆಡ್ ಎಫ್ ಎಂ ನ ಆರ್ಜೆ ಗಳಾದ ಪ್ರಸನ್ನ , ನಯನ , ರಶ್ಮಿ ಹಾಗು ತ್ರಿಶೂಲ್ ಮಾಡಿದರು , ರೆಡ್ ಎಫ್ ಎಂ ನ ಪ್ರೊಡ್ಯೂಸರ್ ಯಶ್ ರಾಜ್ , ಶಿವಪ್ರಸಾದ್ ಹಾಗು ಇತರರು ಉಪಸ್ಥಿತರಿದ್ದರು.

ಮಂಗಳೂರಿನ ಪ್ರಸಿದ್ಧ ನೃತ್ಯ ತಂಡ ವೆಲಾಸಿಟಿ ಯವರಿಂದ ನೃತ್ಯ ಪ್ರದರ್ಶನ , ತಸ್ಲೀಮಾ ಅವರ ಮಿಮಿಕ್ರಿ ಹಾಗು ಪಲ್ಲವಿ ಪ್ರಭು ಅವರ ಸಂಗೀತ ಕಾರ್ಯಕ್ರಮ ಜನರನ್ನು ರಂಜಿಸಿತು .

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English