ಎಸ್ ಡಿಪಿಐ ಕಾರ್ಯಕರ್ತ ಅಶ್ರಫ್ ಹತ್ಯಾ ಆರೋಪಿಗಳ ಶೀಘ್ರ ಬಂಧನ : ಎಡಿಜಿಪಿ

8:39 PM, Thursday, June 22nd, 2017
Share
1 Star2 Stars3 Stars4 Stars5 Stars
(5 rating, 1 votes)
Loading...

Aloka ಮಂಗಳೂರು : ಬಂಟ್ವಾಳದ ಬೆಂಜನಪದವಿನಲ್ಲಿ  ಎಸ್‌ಡಿಪಿ ಮುಖಂಡ ಮುಹಮ್ಮದ್ ಅಶ್ರಫ್ ಕಲಾಯಿ ಹತ್ಯೆಯ ಆರೋಪಿಗಳ ಬಂಧನಕ್ಕೆ ನಾಲ್ಕು ವಿಶೇಷ ತಂಡ ರಚನೆ ಮಾಡಲಾಗಿದೆ. ಈಗಾಗಲೇ ನಮ್ಮ ಮಾಹಿತಿದಾರರಿಗೆ ಆರೋಪಿಗಳ ಮಾಹಿತಿ ಲಭ್ಯವಾಗಿದೆ ಎಂದು ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ  ಅಲೋಕ್ ಮೋಹನ್ ಹೇಳಿದ್ದಾರೆ.

ಮಂಗಳೂರು ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ  ಮಾತನಾಡಿದ ಅವರು,  ಪೊಲೀಸ್ ತಂಡಗಳು ಪ್ರತ್ಯೇಕ ನಿಗಾದೊಂದಿಗೆ ತನಿಖೆ ನಡೆಸುತ್ತಿವೆ. ಆರೋಪಿಗಳನ್ನು ಬಂಧಿಸಿದಾಕ್ಷಣ ಈ ಘಟನೆಗಳ ಷಡ್ಯಂತ್ರ ರೂಪಿಸಿದವರನ್ನೂ ಬಂಧಿಸಲು ಸಾಧ್ಯವಾಗಲಿದೆ. ಜಿಲ್ಲೆಯಲ್ಲಿ ನಡೆದಿರುವ ಘಟನೆಗಳು ಉತ್ತಮ ಬೆಳವಣಿಗೆಯಲ್ಲ. ಪೊಲೀಸ್ ಇಲಾಖೆ ತನ್ನ ಕರ್ತವ್ಯವನ್ನು ಸಮರ್ಥವಾಗಿ ನಿರ್ವಹಿಸಲಿದ್ದು,  ರೌಡಿ ಶಕ್ತಿಗಳನ್ನು ಬಗ್ಗುಬಡಿಯಲಿದೆ. ಇಲಾಖೆ ತನ್ನೆಲ್ಲಾ ಶ್ರಮದೊಂದಿಗೆ ಈ ಪ್ರಕರಣಗಳನ್ನು ತನಿಖೆ ನಡೆಸಲಿದೆ ಎಂದು ಅವರು ಹೇಳಿದರು.

Alokaಉಡುಪಿ, ಚಿಕ್ಕಮಗಳೂರು ಮತ್ತು ಕಾರವಾರದ ಎಸ್ಪಿಗಳ ನೇತೃತ್ವದಲ್ಲಿ ತಂಡ ರಚಿಸಲಾಗಿದೆ. ಇಡೀ ಜಿಲ್ಲೆಯಲ್ಲಿ 144ಸೆಕ್ಷನ್, ನಿಷೇಧಾಜ್ಞೆ ಹೇರಲಾಗಿದೆ. ಜೂನ್ 27 ರವರೆಗೆ ನಿಷೇಧಾಜ್ಞೆ  ಜಾರಿಯಲ್ಲಿದೆ. ಬಿಜೆಪಿ 24 ರಂದು ನಡೆಸಲು ಉದ್ದೇಶಿಸಿರುವ ಪ್ರತಿಭಟನೆ ಬಗ್ಗೆ ಮಾಹಿತಿ ಇಲ್ಲ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮಂಗಳೂರಿನ ನೂತನ ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್ ಉಪಸ್ಥಿತರಿದ್ದರು.Aloka

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English