‘ಪವರ್’ ಮಿನಿಸ್ಟರ್ ಮೇಲೆ ಐಟಿ ದಾಳಿ, ರಾಜ್ಯದಲ್ಲಿ ಕಾಂಗ್ರೆಸ್ ಪವರ್ ಕಟ್ ಆಗಲಿದೆಯೇ ?

2:07 PM, Thursday, August 3rd, 2017
Share
1 Star2 Stars3 Stars4 Stars5 Stars
(4 rating, 1 votes)
Loading...

dk shivakumar ಬೆಂಗಳೂರು  : ಡಿ.ಕೆ ಶಿವಕುಮಾರ್ ಅವರ ಮೇಲೆ ನಡೆದಿರುವ ಐಟಿ ದಾಳಿ, ಕಾಂಗ್ರೆಸ್ ಪಾಳಯದಲ್ಲಿ ತಳಮಳ ಉಂಟಾಗಿದೆ. ಇನ್ನೇನು ಚುನಾವಣೆಗೆ ಒಂದು ವರ್ಷ ಬಾಕಿ ಉಳಿದಿರುವಾಗ, ಅಧಿಕಾರದಲ್ಲಿರುವ ಒಬ್ಬ ಮಂತ್ರಿ ಮೇಲೆ ನಡೆದಿರುವ ಆದಾಯ ತೆರಿಗೆ ದಾಳಿಯಲ್ಲಿ ಆರೋಪ ಸಾಬೀತಾದರೆ ಕಾಂಗ್ರೆಸ್ ಪಕ್ಷಕ್ಕೆ ಬಹುದೊಡ್ಡ ಹೊಡೆತ ಬೀಳಲಿದೆ.

ಕರ್ನಾಟಕದ ಇಂಧನ ಸಚಿವ ಎನ್ನುವದಕ್ಕಿಂತ ಹೆಚ್ಚಾಗಿ ರಾಜ್ಯದ ಅತ್ಯಂತ ಪ್ರಭಾವಿ ಮುಖಂಡ ಡಿ ಕೆ ಶಿವಕುಮಾರ್ ಮನೆಯ ಮೇಲೆ ಆದಾಯ ತೆರಿಗೆ ಇಲಾಖೆಯ ‘ವ್ಯವಸ್ಥಿತ’ ದಾಳಿ, ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದು ಈ ಹಿಂದೆ ಪ್ರಧಾನಿ ನೀಡಿದ್ದ ಹೇಳಿಕೆಗೆ ತದ್ವಿರುದ್ದವಾಗಿದೆ ಎನ್ನುವುದು ಕಾಂಗ್ರೆಸ್ಸಿಗರ ಆರೋಪ. ಡಿಕೆಶಿ ಐಟಿ ದಾಳಿ ಬಗ್ಗೆ ತುಟಿ ಬಿಚ್ಚದ ರಾಹುಲ್ ಗಾಂಧಿ ಗಾಲ್ಫ್ ಆಟದ ನೆಪದಲ್ಲಿ ಡಿ ಕೆ ಶಿವಕುಮಾರ್ ತಂಗಿದ್ದ ರೆಸಾರ್ಟಿಗೆ ಪ್ರವೇಶಿಸಿದ ಐಟಿ ಅಧಿಕಾರಿಗಳು, ಏಕಕಾಲಕ್ಕೆ ಎಲ್ಲೆಲ್ಲಿ ಸಾಧ್ಯವಿದೆಯೋ ಅಲ್ಲೆಲ್ಲಾ ದಾಳಿ ನಡೆಸಿ, ಡಿಕೆಶಿ ಒಡೆತನದ ಎಲ್ಲಾ ದಾಖಲೆಗಳು, ಬೇನಾಮಿ ಆಸ್ತಿಗಳ ಬಹುದೊಡ್ಡ ಪಟ್ಟಿಯನ್ನು ಹೊರತೆಗೆಯುತ್ತಿದ್ದಾರೆ.

ಸಚಿವ ಡಿಕೆ ಶಿವಕುಮಾರ್ ಐಟಿ ದಾಳಿ ನಗರದ ಪೊಲೀಸರಿಗೆ ಯಾವುದೇ ಮಾಹಿತಿಯಿಲ್ಲದೇ, CRPF ಸಹಾಯದೊಂದಿಗೆ, ಇಷ್ಟೊಂದು ವ್ಯವಸ್ಥಿತವಾಗಿ ಐಟಿ ದಾಳಿ ನಡೆಯಬೇಕೆಂದರೆ ರಾಜ್ಯದ ರಾಜಕೀಯ ಮುಖಂಡರೇ (ಅದು ಕಾಂಗ್ರೆಸ್ಸಿನವರೂ ಆಗಿರಬಹುದು) ಸರಿಯಾಗಿ ಡಿಕೆಶಿ ವಿರುದ್ದ ಯಾಕೆ ‘ಬತ್ತಿ’ ಇಟ್ಟಿರಬಾರದು ಎನ್ನುವುದನ್ನು ಅರಿತುಕೊಳ್ಳಲು ರಾಜಕೀಯ ಶಾಸ್ತ್ರ ಕಲಿಯಬೇಕಾಗಿಲ್ಲ. ‘ಪವರ್’ ಮಿನಿಸ್ಟರ್ ಮೇಲೆ ಐಟಿ ದಾಳಿ : ಯಾರು, ಏನು ಹೇಳಿದರು? ಮುಖ್ಯಮಂತ್ರಿಗಳು ಮತ್ತು ಹೈಕಮಾಂಡ್ ನೀಡುವ ಎಲ್ಲಾ ಕೆಲಸಗಳಿಗೆ ಪಕ್ಷದ ಪರವಾಗಿ ಕರಾರುವಕ್ಕಾದ ಫಲಿತಾಂಶ ತಂದುಕೊಡುತ್ತಿರುವ ರಾಜ್ಯ ಕಾಂಗ್ರೆಸ್ ಪಾಲಿಗೆ ‘ಓಡುವ ಕುದುರೆ’ ಯಂತಿರುವ ಡಿ ಕೆ ಶಿವಕುಮಾರ್, ಹೈಕಮಾಂಡ್ ಅಂಗಣಕ್ಕೆ ಇನ್ನಷ್ಟು ಸನಿಹಕ್ಕೆ ಹೋಗಲು ಪ್ರಯತ್ನಿಸಿ ಎಡವಿದರೇ ಎನ್ನುವುದೇ ಇಲ್ಲಿ ಪ್ರಶ್ನೆ.

ನನ್ನ ಮೇಲೆ ಐಟಿ ದಾಳಿ ನಡೆಸಿ ನೋಡೋಣ ಎಂದು ಆರು ತಿಂಗಳ ಹಿಂದೆ ಚಾಲೆಂಜ್ ಮಾಡಿದ್ದ ಡಿ ಕೆ ಶಿವಕುಮಾರ್ ಅವರಿಗೆ, ಮೇಲ್ನೋಟಕ್ಕೆ ಮೋದಿ ಸರಕಾರ ಭರ್ಜರಿ ತಿರುಗೇಟು ನೀಡಿದೆ. ಅಸಲಿಗೆ ಇಂಧನ ಖಾತೆಯನ್ನು ನಿಭಾಯಿಸುತ್ತಿರುವ ಡಿಕೆಶಿ ಕಾರ್ಯವೈಖರಿಯ ಬಗ್ಗೆ ಮೋದಿ ಮತ್ತು ಕೇಂದ್ರ ಇಂಧನ ಸಚಿವ ಪಿಯೂಶ್ ಗೋಯಲ್ ಮೆಚ್ಚುಗೆ ವ್ಯಕ್ತಪಡಿಸಿದ್ದೂ ಉಂಟು. ದಾಳಿ ನಡೆದ ಹಿಂದಿನ ರಾತ್ರಿ ಪಿಯೂಶ್ ಅವರನ್ನು ಡಿಕೆಶಿ ದೆಹಲಿಯಲ್ಲಿ ಭೇಟಿಯಾಗಿದ್ದರು. 64 ಜಾಗದಲ್ಲಿ ಏಕಕಾಲದಲ್ಲಿ ಅತ್ಯಂತ ವ್ಯವಸ್ಥಿತವಾಗಿ ದಾಳಿ ಡಿಕೆಶಿ ಮನೆ, ಕಚೇರಿ ಸೇರಿದಂತೆ ದೆಹಲಿ, ಬೆಂಗಳೂರು, ಬಿಡದಿ, ಕನಕಪುರ ವಿವಿದೆಡೆ 64 ಜಾಗದಲ್ಲಿ ಏಕಕಾಲದಲ್ಲಿ ಅತ್ಯಂತ ವ್ಯವಸ್ಥಿತವಾಗಿ ದಾಳಿ ನಡೆದಿದೆ. ಪೂರ್ವತಯಾರಿ ಮಾಡಿಕೊಳ್ಳದೇ ಪೂರ್ಣ ಪ್ರಮಾಣದಲ್ಲಿ ಹೀಗೆ ದಾಳಿ ನಡೆಸಲು ಸಾಧ್ಯವೇ, ಅಹಮದ್ ಪಟೇಲ್ ನಾಮಪತ್ರ ಸಲ್ಲಿಸಿದ ನಂತರದ ಅಲ್ಪಾವಧಿಯಲ್ಲಿ ವ್ಯವಸ್ಥಿತವಾಗಿ ದಾಳಿ ನಡೆಸಲು ಹೇಗೆ ಸಾಧ್ಯ? ಗುಜರಾತ್ ರಾಜ್ಯಸಭಾ ಚುನಾವಣೆಯೂ, ಐಟಿ ದಾಳಿಯೂ ಕಾಕತಾಳೀಯ ಎನ್ನುವುದು ಐಟಿ ಇಲಾಖೆಯ ಕೆಲವು ಹಿರಿಯ ಅಧಿಕಾರಿಗಳ ಅಭಿಪ್ರಾಯ.

ದಾಳಿಯಿಂದ ಹೊರಬರುವ ಸತ್ಯ ಡಿಕೆಶಿ ಸಾಮ್ರಾಜ್ಯವನ್ನೇ ಅಲ್ಲಾಡಿಸಿಬಹುದು ಹೈಕಮಾಂಡ್ ಮಾತು ಪಾಲಿಸಲು ಹೋಗಿ, ಅಹಮದ್ ಪಟೇಲ್ ಗೆಲ್ಲಿಸಲು ಪಣತೊಟ್ಟಿದ್ದ ಡಿ ಕೆ ಶಿವಕುಮಾರ್ ಅವರಿಗೆ ‘ಐಟಿ ದಾಳಿ’ಯಿಂದ ಹೊರಬರುತ್ತಿರುವ ಸತ್ಯ ಮುಂದಿನ ದಿನಗಳಲ್ಲಿ ಅವರ ಸಾಮ್ರಾಜ್ಯವನ್ನೇ ಅಲ್ಲಾಡಿಸಿದರೆ ಆಶ್ಚರ್ಯ ಪಡಬೇಕಾಗಿಲ್ಲ. ರಾಜ್ಯ ಕಾಂಗ್ರೆಸ್ಸಿಗೂ ಇದು ಮುಳುವಾಗುವ ಸಾಧ್ಯತೆಯಿಲ್ಲದಿಲ್ಲ. ಐಟಿ ದಾಳಿ ಮೂಲಕ ಮೋದಿ, ಎರಡು ಹಕ್ಕಿಯನ್ನು ಹೊಡೆದುರುಳಿಸಲು ಮುಂದಾಗಿದ್ದಾರಾ ಡಿಕೆಶಿ ಮನೆಮೇಲೆ ನಡೆದ ದಾಳಿಯನ್ನು ಇನ್ನೊಂದು ಆಯಾಮದಲ್ಲಿ ನೋಡುವುದಾದರೆ, ಐಟಿ ದಾಳಿ ಮೂಲಕ ಮೋದಿ ಸರಕಾರ ಎರಡು ಹಕ್ಕಿಯನ್ನು ಹೊಡೆದುರುಳಿಸಲು ಮುಂದಾಗಿರುವುದು ಸ್ಪಷ್ಟ. ಒಂದು ಸೋನಿಯಾ ರಾಜಕೀಯ ಕಾರ್ಯದರ್ಶಿ ಅಹಮದ್ ಪಟೇಲ್ ಅವರನ್ನು ಸೋಲಿಸುವುದು, ಇನ್ನೊಂದು ಐಟಿ ದಾಳಿಯಿಂದ ಹೊರಬರುವ ‘ಸತ್ಯ’ವನ್ನು ಮುಂದಿಟ್ಟುಕೊಂಡು ಚುನಾವಣಾ ಈ ವರ್ಷದಲ್ಲಿ ಕಾಂಗ್ರೆಸ್ ವಿರುದ್ದ ಜನರ ಮುಂದೆ ಹೋಗುವುದು.

ಅಹಮದ್ ಪಟೇಲ್ ಅವರಿಂದ ಯಾವ ಸಹಾಯವೂ ವ್ಯಕ್ತವಾಗಲಿಲ್ಲ ಮಗುದೊಂದು ಮೂಲಗಳ ಪ್ರಕಾರ ಗುಜರಾತ್ ಇಶ್ರತ್ ಜಹಾನ್ ಕೇಸಿನಲ್ಲಿ ಇಂದಿನ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ವಿರುದ್ದ ಕೇಸ್ ದಾಖಲಾಗಿತ್ತು, ಆಗ ಕೇಂದ್ರದಲ್ಲಿ ಯುಪಿಎ ಸರಕಾರ ಅಧಿಕಾರದಲ್ಲಿತ್ತು. ಆ ವೇಳೆ, ಗುಜರಾತ್ ಬಿಜೆಪಿ ಘಟಕದ ಪ್ರಮುಖರು ಅಹಮದ್ ಪಟೇಲ್ ಅವರನ್ನು ಭೇಟಿಯಾಗಿ ಇಶ್ರತ್ ಜಾನ್ ಕೇಸಿನ ವಿಚಾರದಲ್ಲಿ ಸಹಾಯ ಮಾಡಲು ಕೋರಿದ್ದರು. ಅದಕ್ಕೆ ಅಹಮದ್ ಪಟೇಲ್ ಅವರಿಂದ ಯಾವ ಸಹಾಯವೂ ವ್ಯಕ್ತವಾಗಲಿಲ್ಲ. ಟಿಟ್ ಫಾರ್ ಟ್ಯಾಟ್ ಎನ್ನುವಂತೆ, ಈಗ ನಡೆಯುತ್ತಿರುವ ವಿದ್ಯಮಾನಗಳೆಲ್ಲವನ್ನು ಅದಕ್ಕೆ ತುಳುಕು ಹಾಕಲಾಗುತ್ತಿದೆ.

ಸಂಕೇತಾಕ್ಷರಗಳ ಬೆನ್ನುಹತ್ತಿ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿರುವ ಸಾಧ್ಯತೆ ಇನ್ನೊಂದು ಮೂಲಗಳ ಪ್ರಕಾರ ಸಿಎಂ ಸಂಸದೀಯ ಕಾರ್ಯದರ್ಶಿ ಗೋವಿಂದರಾಜ್ ಅವರ ಡೈರಿಯಲ್ಲಿ ಉಲ್ಲೇಖವಾಗಿದ್ದ ಸಂಕೇತಾಕ್ಷರಗಳ ಬೆನ್ನುಹತ್ತಿ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿರುವ ಸಾಧ್ಯತೆಯಿದೆ. ಡೈರಿಯಲ್ಲಿ RG, ಡಿಕೆಎಸ್, ಕೆಜೆಜೆ, RVD, ಎಂಬಿಪಿ ಮುಂತಾದ ಹೆಸರುಗಳಿದ್ದವು. ಡಿಕೆಶಿ ಮೇಲೆ ಐಟಿ ದಾಳಿ ಮಾಡುವ ಮೂಲಕ, ಕಾಂಗ್ರೆಸ್ಸಿಗರ ಮತ್ತಷ್ಟು ಹೆಸರು, ಹಗರಣವನ್ನು ಬಯಲುಗೆಳೆಯುವುದು ಮೋದಿ, ಶಾ ನಡೆ ಎಂದು ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English