ತುಳುಭಾಷೆ, ರಂಗಭೂಮಿಗೆ ಕಾಪಿಕಾಡ್‌ರ ಕೊಡುಗೆ ಅಪಾರ:ಗಣೇಶ್‌ರಾವ್

12:01 AM, Saturday, August 12th, 2017
Share
1 Star2 Stars3 Stars4 Stars5 Stars
(5 rating, 1 votes)
Loading...

Are marler ಮಂಗಳೂರು: ಬೊಳ್ಳಿ ಮೂವೀಸ್ ಲಾಂಛನದಲ್ಲಿ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ನಿರ್ದೇಶನದಲ್ಲಿ ಶರ್ಮಿಳಾ ಡಿ.ಕಾಪಿಕಾಡ್, ಮುಖೇಶ್ ಹೆಗ್ಡೆ, ದಿನೇಶ್ ಶೆಟ್ಟಿ ನಿರ್ಮಾಣದಲ್ಲಿ ತಯಾರಾಗಿರುವ ‘ಅರೆಮರ‍್ಲೆರ್’ ತುಳು ಹಾಸ್ಯ ಸಿನಿಮಾ ಮಂಗಳೂರಿನ ಪ್ರಭಾತ್ ಚಿತ್ರಮಂದಿರದಲ್ಲಿ ಬಿಡುಗಡೆಗೊಂಡಿತು.

ಕರಾವಳಿ ಕಾಲೇಜು ಸಮೂಹ ಸಂಸ್ಥೆಗಳ ಅಧ್ಯಕ್ಷ ಗಣೇಶ್‌ರಾವ್ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿ ತುಳುಭಾಷೆ, ತುಳುರಂಗ ಭೂಮಿಗೆ ದೇವದಾಸ್ ಕಾಪಿಕಾಡ್‌ರ ಕೊಡುಗೆ ಅಪಾರವಾದುದು. ತುಳು ಸಿನಿಮಾರಂಗದಲ್ಲಿ ಸಾಮಾಜಿಕ ಸಾಮರಸ್ಯ ಮುಖ್ಯ. ದ್ವೇಷ -ಅಸೂಯೆಗಳನ್ನು ಮರೆತು ಸಿನಿಮಾರಂಗದ ಏಳಿಗೆಗಾಗಿ ಒಬ್ಬರನ್ನೊಬ್ಬರು ಗೌರವಿಸಿ, ಪ್ರೀತಿ ವಿಶ್ವಾಸದ ವಾತಾವರಣವನ್ನು ಸೃಷ್ಟಿಸಿ ಈ ರಂಗದಲ್ಲಿ ಮುಂದಡಿ ಇಟ್ಟರೆ ಯಶಸ್ಸು ಗಳಿಸಲು ಸಾಧ್ಯವಿದೆ ಎಂದವರು ತಿಳಿಸಿದರು.

ಫಾದರ್ ಡೆನ್ನಿಸ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ತುಳು ಭಾಷೆಯ ಬೆಳವಣಿಗೆಯಲ್ಲಿ ದೇವದಾಸ್ ಕಾಪಿಕಾಡ್ ತನ್ನ ಯಶಸ್ವಿ ನಾಟಕಗಳ ಮೂಲಕ ಸಮಾಜದಲ್ಲಿ ಪರಿವರ್ತನೆಯ ಕೆಲಸ ಮಾಡಿದ್ದಾರೆ. ತುಳು ಭಾಷೆಯನ್ನು ಎಂಟನೇ ಪರಿಚ್ಛೇದ ಸೇರ್ಪಡೆಗೆ ಎಲ್ಲರೂ ಒತ್ತಾಯಿಸುವ ಕೆಲಸ ಮಾಡಬೇಕೆಂದರು.

ಮುಖ್ಯ ಅತಿಥಿಗಳಾಗಿ ಉದ್ಯಮಿ ಸಚ್ಚಿದಾನಂದ ಶೆಟ್ಟಿ, ದಯಾ ಕಿರೋಡಿಯನ್ ದುಬಾಯಿ, ಪ್ರದೀಪ್ ಕಿರೋಡಿಯನ್ ದುಬಾಯಿ, ನಿವೃತ್ತ ಪೊಲೀಸ್ ಅಧಿಕಾರಿ ಜಯಂತ್ ಶೆಟ್ಟಿ, ನಿರ್ಮಾಪಕರಾದ ಕಿಶೋರ್ ಡಿ.ಶೆಟ್ಟಿ, ಪ್ರಕಾಶ್ ಪಾಂಡೇಶ್ವರ್, ಯೊಗೀತಾ ಬಂಗೇರಾ , ಸ್ವಪ್ನಾ ಕಿಣಿ, ದ.ಕ.ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ, ಅರೆಮರ‍್ಲೆರ್ ಸಿನಿಮಾದ ನಾಯಕ ನಟ ಅರ್ಜುನ್ ಕಾಪಿಕಾಡ್ ನಾಯಕಿ ನಿಶ್ಮಿತಾ ಬಂಗೇರ, ಕಾವ್ಯ ಬಂಗೇರ, ನಿರ್ಮಾಪಕರಾದ ಶರ್ಮಿಳಾ ಡಿ.ಕಾಪಿಕಾಡ್ ಮುಖೇಖ್ ಹೆಗ್ಡೆ, ದಿನೇಶ್ ಶೆಟ್ಟಿ, ದೇವದಾಸ್ ಕಾಪಿಕಾಡ್ ಭೋಜರಾಜ ವಾಮಂಜೂರು, ಸಾಯಿಕೃಷ್ಣ, ಲಕ್ಷ್ಮಣಕುಮಾರ್ ಮಲ್ಲೂರು, ಗೋಪಿನಾಥ ಭಟ್, ಸುನೀಲ್ ನೆಲ್ಲಿಗುಡ್ಡ, ಅರ್ಜುನ್ ಕಜೆ, ರಾಜೇಶ್ ಕುಡ್ಲ, ಆಶಿಶ್ ವಾಮನ್ ಉಬಾರ್ ಮೊದಲಾದವರು ಉಪಸ್ಥಿತರಿದ್ದರು. ಅನುರಾಗ್ ಕಾರ್ಯಕ್ರಮ ನಿರ್ವಹಿಸಿದರು.

ಅರೆಮರ‍್ಲೆರ್, ಮಂಗಳೂರಿನಲ್ಲಿ ಪ್ರಭಾತ್, ಸಿನಿಪೊಲಿಸ್, ಬಿಗ್‌ಸಿನೆಮಾಸ್, ಪಿವಿಆರ್, ಉಡುಪಿಯಲ್ಲಿ ಕಲ್ಪನಾ , ಮೂಡಬಿದ್ರೆಯಲ್ಲಿ ಅಮರಶ್ರೀ, ಕಾರ್ಕಳದಲ್ಲಿ ರಾಧಿಕಾ, ಪ್ಲಾನೆಟ್, ಪುತ್ತೂರಿನಲ್ಲಿ ಅರುಣಾ, ಸುರತ್ಕಲ್‌ನಲ್ಲಿ ನಟರಾಜ್, ಬೆಳ್ತಂಗಡಿಯಲ್ಲಿ ಭಾರತ್, ಸುಳ್ಯದಲ್ಲಿ ಸಂತೋಷ್, ಹಾಗೂ ಮಣಿಪಾಲದಲ್ಲಿ ಐನಾಕ್ಸ್ ಚಿತ್ರಮಂದಿರದಲ್ಲಿ ತೆರೆಕಂಡಿದೆ. ಸಿನಿಮಾ ಹೌಸ್‌ಪುಲ್ ಪ್ರದರ್ಶನಗಳೊಂದಿಗೆ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಗಿದೆ. ಸಿನಿಮಾ ಸಂಪೂರ್ಣ ಹಾಸ್ಯ ಮನರಂಜನೆಯಿಂದ ಕೂಡಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English