ಬಂಗಾಲದಲ್ಲಿ “ಶ್ರೀ ದುರ್ಗಾ ವಿಸರ್ಜನೆಗೆ ಹೇರಿದ ನಿರ್ಬಂಧ ಧಾರ್ಮಿಕ ಪಕ್ಷಪಾತ – ಹಿಂದೂ ಜನಜಾಗೃತಿ ಸಮಿತಿ

9:18 PM, Monday, September 25th, 2017
Share
1 Star2 Stars3 Stars4 Stars5 Stars
(5 rating, 1 votes)
Loading...

hjsಮಂಗಳೂರು  : ಹಿಂದೂ ಜನಜಾಗೃತಿ ಸಮಿತಿ ಬಂಗಾಲದ ಮಮತಾ ಬ್ಯಾನರ್ಜಿ ಸರಕಾರ ಶ್ರೀದುರ್ಗಾ ವಿಸರ್ಜನೆಗೆ ನಿರ್ಬಂಧ ಹೇರಿದ  ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಕಛೇರಿ ಎದುರು  ಸೋಮವಾರ ಪ್ರತಿಭಟನೆ ನಡೆಸಿತು.

ಧರ್ಮನಿರಪೇಕ್ಷ (ಜಾತ್ಯತೀತ) ಎಂದು ಹೇಳಿಸಿಕೊಳ್ಳುವ ನಮ್ಮ ದೇಶದಲ್ಲಿ ಎಲ್ಲ ಧರ್ಮೀಯರಿಗೆ ತಮ್ಮ ತಮ್ಮ ಪದ್ಧತಿಯಲ್ಲಿ ಉಪಾಸನೆ ಮಾಡುವ ಸ್ವಾತಂತ್ರ್ಯವನ್ನು ಸಂವಿಧಾನದಲ್ಲಿ ನೀಡಿರುವಾಗ ಬಂಗಾಲದ ಮಮತಾ ಬ್ಯಾನರ್ಜಿ ಸರಕಾರ ಮಾತ್ರ ಹಿಂದೂಗಳ ಧಾರ್ಮಿಕ ಭಾವನೆಯನ್ನು ಪದೇ ಪದೇ ಕಾಲಡಿಯಲ್ಲಿ ಹಾಕಿ ತುಳಿಯುತ್ತಿದೆ. ಇದು ದಿನಕಳೆದಂತೆ ಹೆಚ್ಚುತ್ತಿದೆ. ಇಷ್ಟರವರೆಗೆ ಶ್ರೀದುರ್ಗಾ ಪೂಜೆ ಹಾಗೂ ವಿಸರ್ಜನೆಯಿಂದ ಯಾರಿಗೂ ತೊಂದರೆಯಾಗಿಲ್ಲ ಅಥವಾ ಅದರಿಂದ ಸಮಾಜದಲ್ಲಿ ಯಾವುದೇ ಪ್ರಕಾರದ ಕಾನೂನು ಸುವ್ಯವಸ್ಥೆಗೆ ಅಡಚಣೆಯಾಗಿಲ್ಲ. ಆದರೂ ಮಮತಾ ಸರಕಾರ ಈಗ ಮೊಹರಮ್‌ನ ನೆಪದಲ್ಲಿ ಈ ವರ್ಷ ಶ್ರೀ ದುರ್ಗಾ ಮೂರ್ತಿ ವಿಸರ್ಜನೆಗೆ ಒಂದು ದಿನದ ನಿರ್ಬಂಧ ಹೇರಿದೆ ಎಂದು ಹಿಂದೂ ಜನಜಾಗೃತಿ ಸಮಿತಿ ಸಮನ್ವಯಕ ಚಂದ್ರ ಮೊಗೇರ ಹೇಳಿದ್ದಾರೆ .

ಈ ರೀತಿ ಮುಸಲ್ಮಾನರ ಹಬ್ಬಕ್ಕಾಗಿ ಹಿಂದೂಗಳ ಉತ್ಸವಕ್ಕೆ ನಿರ್ಬಂಧ ಹೇರುವುದು, ಧಾರ್ಮಿಕ ಪಕ್ಷಪಾತವಾಗುತ್ತದೆ, ಎಂದು ಹಿಂದೂ ಜನಜಾಗೃತಿ ಸಮಿತಿಯ ಶ್ರೀ ಉಪೇಂದ್ರ ಆಚಾರ್ಯ ಇವರು ಕಟುವಾಗಿ ಟೀಕಿಸಿದ್ದಾರೆ. ಆದ್ದರಿಂದ ಕೇಂದ್ರ ಸರಕಾರವು ಈ ಪ್ರಕರಣದಲ್ಲಿ ಹಸ್ತಕ್ಷೇಪ ಮಾಡಿ ಶ್ರೀದುರ್ಗಾ ಮೂರ್ತಿ ವಿಸರ್ಜನೆಗೆ ಹಾಕಿದ ನಿರ್ಬಂಧವನ್ನು ತಕ್ಷಣ ತೆರವುಗೊಳಿಸಬೇಕು ಹಾಗೂ ಮಮತಾ ಸರಕಾರಕ್ಕೆ ಇದರ ಬಗ್ಗೆ ಸ್ಪಷ್ಟೀಕರಣ ಕೇಳಬೇಕೆಂದು ವಿನಂತಿಸಿದ್ದಾರೆ.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English