ಸೈನೈಡ್ ಮೋಹನ್ ಕುಮಾರ್ ಗೆ ಜೀವವಿರುವವರೆಗೂ ಸೆರೆವಾಸ : ಹೈಕೋರ್ಟ್

1:44 PM, Thursday, October 12th, 2017
Share
1 Star2 Stars3 Stars4 Stars5 Stars
(5 rating, 1 votes)
Loading...

mohan kumarಬೆಂಗಳೂರು: ಪುತ್ತೂರಿನ ಅನಿತಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೈನೈಡ್ ಮೋಹನ್ ಕುಮಾರ್ ಗೆ ಜೀವವಿರುವವರೆಗೂ ಸೆರೆವಾಸ ಎಂದು ಹೈಕೋರ್ಟ್ ವಿಭಾಗೀಯ ಪೀಠ ತೀರ್ಪು ನೀಡಿದೆ.

ಅಪರಾಧಿ ಮೋಹನ್ ಕುಮಾರ್ ಸಮಾಜಕ್ಕೆ ಮಾರಕವಾಗಿದ್ದಾನೆ. ಮಹಿಳೆಯರ ಪಾಲಿಗೆ ಮೋಹನ್ ಕಂಟಕ. ಆದ್ದರಿಂದ ಆತ ಸಾಯುವವರೆಗೂ ಜೈಲಿನಲ್ಲಿರಬೇಕು. ಕ್ಷಮಾದಾನ ನೀಡಲಾಗದು ಎಂದು ನ್ಯಾ.ರವಿ ಮಳೀಮಠ್, ನ್ಯಾ.ಜಾನ್ ಮೈಖೆಲ್ ಕುನ್ಹಾ ಮಹತ್ವದ ತೀರ್ಪು ನೀಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ 20 ಯುವತಿಯರನ್ನು ಮದುವೆಯಾಗುವುದಾಗಿ ನಂಬಿಸಿ ಲೈಂಗಿಕವಾಗಿ ಬಳಸಿಕೊಂಡ ಬಳಿಕ ಸೈನೈಡ್ ನೀಡಿ ಕೊಲೆ ಮಾಡಿರುವ ಆರೋಪ ಮೋಹನ್ ಕುಮಾರ್ ಮೇಲಿದೆ. ಬಂಟ್ವಾಳ ಪೊಲೀಸರು 2009ರ ಅ. 21ರಂದು ಈತನನ್ನು ಬಂಧಿಸುವ ಮೂಲಕ ಸರಣಿ ಕೊಲೆ ಪ್ರಕರಣ ಬಯಲಿಗೆ ಬಂದಿತ್ತು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English