ಧರ್ಮಸ್ಥಳ: ಕಾನೂರಾಯಣ ಚಿತ್ರಕ್ಕೆ ಚಾಲನೆ, ಗ್ರಾಮಾಭಿವೃದ್ಧಿ ಯೋಜನೆಗೆ ಒತ್ತು

11:51 AM, Saturday, October 21st, 2017
Share
1 Star2 Stars3 Stars4 Stars5 Stars
(5 rating, 1 votes)
Loading...

Kanurayanaಮಂಗಳೂರು: ‘ಕಾನೂರಾಯಣ’ ಚಿತ್ರಕ್ಕೆ ಹೇಮಾವತಿ ಹೆಗ್ಗಡೆ ಕ್ಲ್ಯಾಪ್ ಮಾಡುವ ಮೂಲಕ ಚಾಲನೆ ನೀಡಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರೇ ಸೇರಿಕೊಂಡು ನಿರ್ಮಾಣ ಮಾಡುತ್ತಿರುವ ಚಿತ್ರ ಕಾನೂರಾಯಣ.

ಧರ್ಮಸ್ಥಳದಲ್ಲಿ  ನಡೆದ ಸಭಾ ಕಾರ್ಯಕ್ರಮವನ್ನು ಡಾ. ವೀರೇಂದ್ರ ಹೆಗ್ಗಡೆ ಉದ್ಘಾಟಿಸಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕುರಿತು ಈ ಸಿನಿಮಾ ನಿರ್ಮಾಣವಾಗಲಿದ್ದು ಗ್ರಾಮಾಭಿವೃದ್ಧಿ ಮೂಲಕ ಬದುಕು ಕಟ್ಟಿಕೊಂಡವರು ಈ ಸಿನಿಮಾ ಮಾಡುತ್ತಿದ್ದಾರೆ.

Kanurayanaಧರ್ಮಸ್ಥಳ ಗ್ರಾಮಾಭಿವೃದ್ಧಿಯ ಸದಸ್ಯರು ತಲಾ 20 ರೂ. ಗಳನ್ನು ಈ ಸಿನಿಮಾಕ್ಕಾಗಿ ನೀಡಿದ್ದು ಬಹು ನಿರ್ಮಾಪಕರ ಸಿನಿಮಾ ಇದಾಗಲಿದೆ. 4 ಕೋಟಿ ವೆಚ್ಚದಲ್ಲಿ ಈ ಸಿನಿಮಾ ನಿರ್ಮಿಸಲಾಗಿದ್ದು ಟಿ.ಎಸ್. ನಾಗಾಭರಣ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ಕಾರ್ಯಕ್ರಮದಲ್ಲಿ ನಟಿ ಸೋನುಗೌಡ ಚಿತ್ರದಲ್ಲಿನ ತಮ್ಮ ಪಾತ್ರವನ್ನು ಪರಿಚಯ ಮಾಡಿಕೊಂಡರು.

Kanurayana

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English