ಫೇಸ್‌ಬುಕ್‌ ಪೇಜ್‌ನಲ್ಲಿ ದುರ್ಗಾಪರಮೇಶ್ವರಿಯ ಅವಹೇಳನ

10:58 AM, Thursday, November 2nd, 2017
Share
1 Star2 Stars3 Stars4 Stars5 Stars
(5 rating, 1 votes)
Loading...

facebook page ಮಂಗಳೂರು: ಫೇಸ್‌ಬುಕ್‌ನಲ್ಲಿ ಮತ್ತೆ ನಾಡಿನ ಮನೆ, ಮನದ ದೇವತೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿಯ ವಿರುದ್ಧ ಅವಹೇಳನಕಾರಿ ಪೋಸ್ಟ್‌ನ್ನು ಹಾಕಲಾಗಿದೆ.

ಫೇಸ್‌ಬುಕ್‌ ಪೇಜ್‌ನಲ್ಲಿ ರಾಮ, ಸೀತೆ, ಕಟೀಲು ದುರ್ಗಾಪರಮೇಶ್ವರಿ, ಸ್ವಾಮಿ ಕೊರಗಜ್ಜ ಹೀಗೆ ಎಲ್ಲಾ ದೇವಿ-ದೇವರುಗಳ ವಿರುದ್ಧ ಅಸಹ್ಯಕರ ಹಾಗೂ ವಿಕೃತ ಪೋಸ್ಟ್‌ಗಳನ್ನು ಮಂಗಳೂರು ವ್ಯಕ್ತಿಯೋರ್ವನ ಹೆಸರಿನಿಂದ ಹಾಕಲಾಗಿದೆ.

ಈ ಹಿಂದೆಯೂ ಇಂತಹದ್ದೇ ವಿವಾದಾತ್ಮಕ ಹಾಕಿದ್ದವರ ವಿರುದ್ಧ ಹಿಂದೂ ಸಮಾಜ ಬಾಂಧವರು ಪ್ರತಿಭಟನೆ ನಡೆಸಿದ್ದರು. ಆಗ ಡವರ್ಜ್ ಮೊಹಿದೀನ್ ಹಾಗೂ ಶಫಿ ಬಿ.ಎಂ ಎಂಬುವರನ್ನು ಬಂಧಿಸಲಾಗಿತ್ತು.

ಈ ಘಟನೆ ಮರೆಯುವ ಮುನ್ನವೇ ಮತ್ತೋರ್ವ ವ್ಯಕ್ತಿ ಫೇಸ್‌ಬುಕ್‌ನಲ್ಲಿ ಆರಾಧ್ಯ ದೈವ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿ, ದೇವಿ ಸ್ವಾಮಿ ಕೊರಗಜ್ಜ, ಶ್ರೀರಾಮ ಹಾಗೂ ಸೀತಾ ದೇವಿಯನ್ನು ಅವಹೇಳನಕಾರಿಯಾಗಿ ಬಿಂಬಿಸಿದ್ದಾನೆ.

ಈ ವ್ಯಕ್ತಿ ಇದೀಗ ತನ್ನ ಖಾತೆಯನ್ನು ಡಿಲೀಟ್ ಮಾಡಿದ್ದರೂ, ಈತನ ಕಮೆಂಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English