ಕೆ.ಎಸ್.ಸಿ.ಎ. ಪ.ಪೂ ಅಂತರ್ ಕಾಲೇಜು ಕ್ರಿಕೆಟ್ ಪಂದ್ಯಾಟ; ಆಳ್ವಾಸ್‌ಗೆ ವಿನ್ನರ‍್ಸ್ ಪ್ರಶಸ್ತಿ

5:01 PM, Tuesday, November 7th, 2017
Share
1 Star2 Stars3 Stars4 Stars5 Stars
(5 rating, 1 votes)
Loading...

Alvas ಮಂಗಳೂರು: ಫಾದರ್ ಮುಲ್ಲರ್ ಹೋಮಿಯೋಪತಿ ಕಾಲೇಜು ದೇರಳಕಟ್ಟೆಯಲ್ಲಿ ನಡೆದ ಕೆ.ಎಸ್.ಸಿ.ಎ. ಪ.ಪೂ ಅಂತರ್ ಕಾಲೇಜು ಕ್ರಿಕೆಟ್ ಪಂದ್ಯಾಟದಲ್ಲಿ ಆಳ್ವಾಸ್‌ಗೆ ಪದವಿಪೂರ್ವ ಕಾಲೇಜು ವಿನ್ನರ‍್ಸ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದೆ.

ಫೈನಲ್ ಪಂದ್ಯಾಟದಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜು ನಿಗದಿತ 50 ಓವರ್‌ಗಳಲ್ಲಿ 176 ರನ್‌ಗಳನ್ನು ಗಳಿಸಿತು. ಆಳ್ವಾಸ್ ಪರವಾಗಿ ಹರ್ಷಿತ್ ಪೂಜಾರಿ 47 ರನ್, ಮಿಥುನ್ 30 ರನ್ ಹಾಗೂ ಪರೇಶ್ 18 ರನ್‌ಗಳನ್ನು ಗಳಿಸಿದರು. ಇದಕ್ಕುತ್ತರವಾಗಿ ಸಂತ ಅಲೋಶಿಯಸ್ ಪ.ಪೂ. ಕಾಲೇಜು ಕೇವಲ 151 ರನ್‌ಗಳಿಗೆ ಸರ್ವಪತನಗೊಂಡಿತು.

ಆಳ್ವಾಸ್ ಪರವಾಗಿ ಅರುಣ್ ಮೋನಪ್ಪ ತಲಾ 2 ವಿಕೆಟ್, ರೋಹಿತ್ 3ವಿಕೆಟ್ ಹಾಗೂ ನಿಖಿಲ್ 3 ವಿಕೆಟ್ ಪಡೆಯುವುದರ ಮೂಲಕ ಆಳ್ವಾಸ್‌ಗೆ ಜಯವನ್ನು ಗಳಿಸಲು ಸಹಕರಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English