ಇಂದಿನ ವಿದ್ಯಾರ್ಥಿಗಳು ಕನ್ನಡದ ಸೊಗಡನ್ನು ಕಾಯ್ದುಕೊಳ್ಳಬೇಕಾಗಿದೆ : ನಚಿಕೇತ್ ನಾಯಕ್

11:58 PM, Thursday, November 30th, 2017
Share
1 Star2 Stars3 Stars4 Stars5 Stars
(No Ratings Yet)
Loading...

vidyartisiri Validation ಮೂಡಬಿದ್ರೆ  : “ಇತ್ತೀಚೆಗೆ ಶಿಕ್ಷಣದ ದಿಕ್ಕು ಬದಲಾಗುತ್ತಿದೆ. ಒಂದೆಡೆ ಇಡೀ ವಿಶ್ವವು ತನ್ನ ಸಂಸ್ಕೃತಿಯನ್ನು ಬೆಳೆಸುವತ್ತಾ ಸಾಗಿದರೆ ಇನ್ನೊಂದೆಡೆ ನಮ್ಮ ಶಿಕ್ಷಣ ಪದ್ಧತಿಯೂ ಅದೇ ಸಂಸ್ಕೃತಿಯ ಮಹತ್ವವನ್ನು ಕಡೆಗಣಿಸುತ್ತಿದೆ. ಈಗಲಾದರೂ ನಮ್ಮ ಶಿಕ್ಷಣ ಸಂಸ್ಥೆಗಳು ಎಚ್ಚೆತ್ತುಕೊಳ್ಳಬೇಕಿದೆ. ವಿದ್ಯಾರ್ಥಿಗಳನ್ನು ಯಂತ್ರಗಳನ್ನಾಗಿಸದೇ, ಅವರಲ್ಲಿ ಬರಿ ಅಂಕ ಗಳಿಕೆಯ ಮನಸ್ಥಿತಿ ಬೆಳೆಸದೇ ಮೊದಲು ಮಾನವೀಯತೆ ಮೂಡಿಸುವ ಕಾರ್ಯ ನಡೆಯಬೇಕು” ಎಂದು ಗುರುವಾರ ಆಳ್ವಾಸ್ ನುಡಿಸಿರಿ-2017 ರ ಅಂಗವಾಗಿ ಆಯೋಜಿಸಿದ್ದ ವಿದ್ಯಾರ್ಥಿಸಿರಿ ಕಾರ್ಯಕ್ರಮದ ಸಮಾರೋಪ ಭಾಷಣದಲ್ಲಿ ಉಡುಪಿ ಒಳಕಾಡು ಸರ್ಕಾರಿ ಸಂಯುಕ್ತ ಪ್ರೌಢ ಶಾಲೆ ವಿದ್ಯಾರ್ಥಿ ನಚಿಕೇತ್ ನಾಯಕ್ ಅಭಿಪ್ರಾಯಪಟ್ಟರು.

“ಇಂದಿನ ವಿದ್ಯಾರ್ಥಿಗಳು ಕನ್ನಡದ ಸೊಗಡನ್ನು ಕಾಯ್ದುಕೊಳ್ಳಬೇಕಾಗಿದೆ. ವಿಪರ್ಯಾಸವೆಂದರೆ ತುಳುನಾಡಿನ ಭೂತಾರಾಧನೆ ಮತ್ತು ನಾಗಮಂಡಲ ಎಂಬ ಪದಗಳು ಇಂದು ದೆವ್ವದ ಪೂಜೆ, ಹಾವಿನ ಪೂಜೆ ಎಂದು ಕರೆಯಲ್ಪಡುವುದು ದುರದೃಷ್ಟಕರ” ಎಂದು ಅವರು ಹೇಳಿದರು.

ವಿದ್ಯಾರ್ಥಿಸಿರಿಯ ಅಧ್ಯಕ್ಷತೆ ವಹಿಸಿದ್ದ ಅರ್ಜುನ್ ಶೆಣೈ ಮಾತನಾಡಿ” ವಿದ್ಯಾರ್ಥಿಗಳು ಸಾಹಿತ್ಯದೆಡೆಗೆ ಒಲವು ಬೆಳೆಸಿಕೊಳ್ಳಬೇಕು. ನಮ್ಮಲ್ಲಿ ಸದಾ ಸಾಂಸ್ಕೃತಿಕ ಮನೋಭಾವದೆಡೆಗೆ ತುಡಿತವಿರಬೇಕು” ಎಂದು ಪ್ರತಿಪಾದಿಸಿದರು.

vidyartisiri-Validatory

vidyartisiri-Validatory

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English