ಪ್ರತಾಪ್‌ ಸಿಂಹ ವಿರುದ್ಧದ ಸೆಕ್ಷನ್‌ ಹಿಂಪಡೆಯಲು ಅರ್ಜಿ: ಪೊಲೀಸರಿಗೆ ಕೋರ್ಟ್‌‌ನಿಂದ ತಪರಾಕಿ

4:38 PM, Friday, December 15th, 2017
Share
1 Star2 Stars3 Stars4 Stars5 Stars
(5 rating, 1 votes)
Loading...

pratap-simhaಮೈಸೂರು: ಹುಣಸೂರು ಹನುಮ ಜಯಂತಿ ಮೆರವಣಿಗೆಗೆ ಹೊರಟಿದ್ದ ವೇಳೆ ಸಂಸದ ಪ್ರತಾಪ್ ಸಿಂಹರನ್ನು ಬಂಧಿಸಿ, 188 ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಆದ್ರೆ ಬಳಿಕ ಸಂಸದರ ವಿರುದ್ಧದ ಸೆಕ್ಷನ್‌ 188 ವಾಪಸ್ ಪಡೆಯಲು ಅರ್ಜಿ ಸಲ್ಲಿಸಿದ್ದಕ್ಕೆ ಪೊಲೀಸ್ ತನಿಖಾಧಿಕಾರಿಗೆ ಕೋರ್ಟ್ ತಪರಾಕಿ ಹಾಕಿದೆ.

ಡಿ. 3ರಂದು ಹುಣಸೂರಿನ ಬೆಳಿಕೆರೆ ಸಮೀಪ ಸಂಸದ ಪ್ರತಾಪ್‌ ಸಿಂಹರನ್ನು ಪೊಲೀಸರು ಬಂಧಿಸಿ ಐಪಿಸಿ ಸೆಕ್ಷನ್ 188( ಸರ್ಕಾರಿ ಅಧಿಕಾರಿಯ ಆದೇಶದ ಉಲ್ಲಂಘನೆ) ಅಡಿಯಲ್ಲಿ ಪ್ರಕಣರ ದಾಖಲು ಮಾಡಿದ್ದರು. ಬಳಿಕ ಸಂಸದರನ್ನು ಬಿಡುಗಡೆ ಮಾಡಿದ್ದರು.

ಜಿಲ್ಲಾಧಿಕಾರಿಗಳು ಆದೇಶದಂತೆ ಜಾರಿ ಮಾಡಿದ ಸ್ಥಳದಲ್ಲಿ ನಿಷೇಧಾಜ್ಞೆಯನ್ನು ಉಲ್ಲಂಘಿಸಿದರೆ 188 ಸೆಕ್ಷನ್ ಅಡಿ ಪ್ರಕರಣ ದಾಖಲಿಸಬಹುದು. ಆದರೆ ಹುಣಸೂರು ಪಟ್ಟಣದಲ್ಲಿ ಅಂದು ನಿಷೇಧಾಜ್ಞೆ ವಿಧಿಸಲಾಗಿತ್ತು. ಆದ್ರೆ ಸಂಸದರನ್ನು ಹುಣಸೂರಿನಲ್ಲಿ ಬಂಧಿಸಿಲ್ಲ. ಸಮೀಪವಿರುವ ಬಿಳಿಕೆರೆಯಲ್ಲಿ ಬಂಧಿಸಿ, ಹುಣಸೂರಿನ ಜೆಎಂಎಫ್‍ಸಿ ನ್ಯಾಯಾಲಯಕ್ಕೆ ಎಫ್‍ಐಆರ್ ಸಲ್ಲಿಸಲಾಗಿತ್ತು.

ಆದರೆ ಬಳಿಕ ಡಿ. 5ರಂದು ಸಂಸದ ಪ್ರತಾಪ್ ಸಿಂಹ ಅವರ ಮೇಲೆ ದಾಖಲಿಸಿರುವ ಐಪಿಸಿ ಸೆಕ್ಷನ್ 188 ಕೈ ಬಿಡುತ್ತೇವೆ ಎಂದು ಪೊಲೀಸ್ ತನಿಖಾಧಿಕಾರಿ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಇದಕ್ಕೆ ಗರಂ ಆದ ನ್ಯಾಯಾಧೀಶರು, ಸಂಸದರ ಮೇಲೆ ಎಫ್‍ಐಆರ್‌‌ನಲ್ಲಿ ಸೆಕ್ಷನ್ ತಪ್ಪಾಗಿ ಹೇಗೆ ನೀವು ಸೇರಿಸಿದ್ದೀರಿ? ಇದಕ್ಕೆ ಕಾರಣ ಕೊಡುವಿರಾ? ದಾಖಲಿಸಿ ಮತ್ತೆ ಆ ಸೆಕ್ಷನ್ ಕೈ ಬಿಡಬೇಕೆಂದು ಏಕೆ ಕೇಳುತ್ತಿದ್ದೀರಿ ಎಂದು ಪ್ರಶ್ನಿಸಿ ಡಿ. 8ರಂದು ನ್ಯಾಯಾಲಯಕ್ಕೆ ಖುದ್ದು ಹಾಜರಾಗಿ ಉತ್ತರ ನೀಡಬೇಕೆಂದು ಆದೇಶಿಸಿದ್ದರು.

ಆದರೆ ಡಿ. 8ರಂದು ಪ್ರಕರಣದ ತನಿಖಾಧಿಕಾರಿ ನ್ಯಾಯಾಲಯಕ್ಕೆ ಹೋಗಿ 188 ಸೆಕ್ಷನ್ ಬಂಧನದ ಸ್ಪಷ್ಟೀಕರಣ ನೀಡಿಲ್ಲ. ಹೀಗಾಗಿ ನ್ಯಾಯಾಧೀಶರು ಸೆಕ್ಷನ್ ವಾಪಸ್ ಪಡೆಯುವ ಪೊಲೀಸರ ಅರ್ಜಿಯನ್ನು ರದ್ದು ಮಾಡಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English