ಸ್ಯಾಂಡಲ್‌ವುಡ್‌ನ ಈ ನಿರ್ಮಾಪಕ ಯಾರೆಂದು ಗುರುತಿಸುವಿರಾ?

11:07 AM, Thursday, December 21st, 2017
Share
1 Star2 Stars3 Stars4 Stars5 Stars
(5 rating, 1 votes)
Loading...

rishab-shettyಮಂಗಳೂರು: ಈ ಫೋಟೋದಲ್ಲಿರುವ ವ್ಯಕ್ತಿ ಯಾರು ಹೇಳಿ ನೋಡೋಣ… ಕೊಳಕು ಬಟ್ಟೆ, ಕಳಾಹೀನ ಮುಖ, ನೋಡಿದ ಕೂಡಲೇ ಭಿಕ್ಷುಕ ಎನ್ನುವುದು ತಿಳಿಯುತ್ತದೆ. ಆದ್ರೆ ಅಷ್ಟೇ ಭಯ ಕೂಡಾ ಹುಟ್ಟಿಸುತ್ತಿದ್ದಾನೀತ. ಈತ ಯಾರು ಎಂದು ನೀವು ಗೆಸ್ ಕೂಡಾ ಮಾಡೋಕೆ ಸಾಧ್ಯವಿಲ್ಲ.

ನಟ-ನಿರ್ದೇಶಕ ರಿಷಭ್ ಶೆಟ್ಟಿ ಇದೇ ಮೊದಲ ಬಾರಿಗೆ ನಿರ್ಮಾಪಕರಾಗಿದ್ದಾರೆ. ಅವರ ನಿರ್ಮಾಣದ ‘ಕಥಾ ಸಂಗಮ’ ಚಿತ್ರ ಈಗಾಗಲೇ ಸಾಕಷ್ಟು ಕುತೂಹಲ ಕೆರಳಿಸಿದೆ. ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್‌ರಿಗೆ ಗೌರವಾರ್ಪಣೆಯಾಗಿ ರೆಡಿಯಾಗ್ತಿರೋ ಈ ವಿಶಿಷ್ಟ ಚಿತ್ರ ಅನೇಕ ಚಿಕ್ಕ ಚಿಕ್ಕ ಕಥೆಗಳ ಸಂಗಮವಾಗಿದೆ.

rishab-shetty-2ಈ ಚಿತ್ರಕ್ಕೂ ಕಥಾಸಂಗಮಕ್ಕೂ ವಿಶಿಷ್ಟ ಲಿಂಕ್ ಇದೆ. ಇದು ಕಥಾಸಂಗಮದ ಒಂದು ಕಥೆಯ ಪಾತ್ರಧಾರಿಯ ಗೆಟಪ್. ಇದು ಬೇರೆ ಯಾರೂ ಅಲ್ಲ, ನಿರ್ಮಾಪಕ ರಿಷಭ್ ಶೆಟ್ಟಿಯೇ ಅಂದ್ರೆ ನೀವು ನಂಬ್ಲೇಬೇಕು. ಯಾರೂ ಗುರುತಿಸಲು ಸಾಧ್ಯವೇ ಆಗದಂತಿರೋ ಈ ವೇಷ ನಿಜಕ್ಕೂ ಆಶ್ಚರ್ಯ ಹುಟ್ಟಿಸುತ್ತಿದೆ.

ಜೀಬಾ ಎನ್ನುವ ಖ್ಯಾತ ಮೇಕಪ್ ಕಲಾವಿದನ ಕೈಚಳಕವಿದು. ರಿಷಭ್‌ರನ್ನು ಈ ಗೆಟಪ್‌ನಲ್ಲಿ ಅವರ ಆಪ್ತಮಿತ್ರ ರಕ್ಷಿತ್ ಶೆಟ್ಟಿಯೇ ಗುರುತಿಸೋಕೆ ಆಗ್ಲಿಲ್ವಂತೆ. ಸಾಕಷ್ಟು ಟ್ರಯಲ್ ಅಂಡ್ ಎರರ್ ನಂತರ ಈ ಲುಕ್ ಫೈನಲೈಸ್ ಮಾಡಿದ್ದಾರೆ ನಿರ್ದೇಶಕ ಕಿರಣರಾಜ್ ಕೆ.

rishab-shetty-3ಮೂರು ಗಂಟೆಗಳ ಸತತ ಮೇಕಪ್ ನಂತರ ಸೃಷ್ಟಿಯಾಗಿದ್ದೇ ರಿಷಭ್‌ರ ಈ ಅವತಾರ. ರಿಷಭ್ ಜೊತೆ ಈ ಕಥೆಯಲ್ಲಿ ಹರಿಪ್ರಿಯಾ ಮಾತ್ರ ಕಾಣಿಸಿಕೊಳ್ಳಲಿದ್ದಾರೆ. ಇವರ ಜೊತೆಗೊಂದು ‘ರೂಮಿ’ ಎನ್ನುವ ಒಂದು ನಾಯಿ ಜೊತೆಯಾಗಲಿದೆ. ಈ ಎರಡೂ ಪಾತ್ರಗಳು ಭೇಟಿಯಾದ ನಂತರ ನಡೆಯುವ ಸನ್ನಿವೇಶಗಳೇ ಚಿತ್ರದ ಕಥಾಹಂದರ. ಇಬ್ಬರೂ ಕಲಾವಿದರಿಗೆ ಯಾವುದೇ ಡೈಲಾಗ್ ಇಲ್ಲ ಎನ್ನುವುದು ಮತ್ತೊಂದು ಹೈಲೈಟ್.

ಏಳು ಕಥೆಗಳ ಗುಚ್ಛವಾಗಿರೋ ಕಥಾಸಂಗಮ ಕನ್ನಡದಲ್ಲಿ ಇತ್ತೀಚಿನ ದಿನಗಳ ಹೊಸ ಪ್ರಯತ್ನವಾಗಿದೆ. ರಿಷಭ್‌ರ ಈ ಗೆಟಪ್ ಚಿತ್ರದ ಬಗ್ಗೆ ಮತ್ತಷ್ಟು ಕುತೂಹಲ ಹುಟ್ಟಿಸಿರೋದಂತೂ ಸತ್ಯ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 

 Click this button or press Ctrl+G to toggle between Kannada and English