- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಕರ್ನಾಟಕದಿಂದ ಕಾಂಗ್ರೆಸ್ ಗೆಲುವಿನ ಇನ್ನಿಂಗ್ಸ್ ಆರಂಭ: ಸಿದ್ದರಾಮಯ್ಯ

siddaramaiah [1]ಬೆಳಗಾವಿ: 2018ರ ಕರ್ನಾಟಕ ವಿಧಾನಸಭೆ ಚುನಾವಣೆಯ ಗೆಲುವಿನೊಂದಿಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರಿಗೆ ಮೊದಲ ಗೆಲುವಿನ ಗಿಫ್ಟ್ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.ಗುರುವಾರ ಬೆಳಗಾವಿಯ ಹಾರೋಗೇರಿಯಲ್ಲಿ ಮಾತನಾಡಿದ ಅವರು, “ಬಿಜೆಪಿಯವರು ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡುತ್ತೇವೆ ಎಂದು ಹೇಳುತ್ತಾರೆ. ಇದು ಸಾಧ್ಯವಿಲ್ಲ. ಕಾಂಗ್ರೆಸ್ 132 ವರ್ಷಗಳ ಇತಿಹಾಸ ಇರುವ ಪಕ್ಷ. ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಪಕ್ಷ,” ಎಂದು ಹೇಳಿದ್ದಾರೆ.

2018ರ ಕರ್ನಾಟಕ ಚುನಾವಣೆ : ಅಹಿಂದ V/S ಹಿಂದುತ್ವ! “ಇವತ್ತು ರಾಹುಲ್ ಗಾಂಧಿಯವರು ಕಾಂಗ್ರೆಸ್ ಅಧ್ಯಕ್ಷರಾಗಿದ್ದಾರೆ. ಮೊದಲನೇ ಚುನಾವಣೆ ಗುಜರಾತ್ ನಲ್ಲಿ ನಡೆಯಿತು. ಒಂದೊಮ್ಮೆ ಅಲ್ಲಿ ನಮಗೆ ಪಕ್ಷದ ನೆಟ್ವರ್ಕ್ ಇದ್ದಿದ್ದರೆ ರಾಹುಲ್ ಗಾಂಧಿಯವರಿಗೆ ಮೊದಲನೇ ಜಯ ಗುಜರಾತ್ ನಲ್ಲಿ ಸಿಗುತ್ತಿತ್ತು,” ಎಂದು ಸಿದ್ದರಾಮಯ್ಯ ವಿಷಾದಿಸಿದರು.

ಕೈಕೊಟ್ಟ ವಘೇಲಾ “ದುರಾದೃಷ್ಟಕ್ಕೆ ಗುಜರಾತ್ ನಲ್ಲಿ ಶಂಕರ್ ಸಿನ್ಹಾ ವಘೇಲಾ ಮತ್ತು ಗುಂಪಿನ 18 ಜನ ಶಾಸಕರು ಪಕ್ಷ ಬಿಟ್ಟು ಹೋದರು. ವಘೇಲಾ ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕರಾಗಿದ್ದವರು.

ಅವರೇ ಪಕ್ಷ ಬಿಟ್ಟು ಹೋದರು. ನಮಗೆ ನೆಟ್ವರ್ಕ್ ಕೂಡಾ ಇರಲಿಲ್ಲ,” ಎಂದು ಮುಖ್ಯಮಂತ್ರಿ ಸೋಲಿನ ವಿಮರ್ಶೆ ನಡೆಸಿದ್ದಾರೆ. ಕೈಕೊಟ್ಟ ನಗರ ಪ್ರದೇಶ “ಬಿಜೆಪಿ ಗುಜರಾತ್ ನಲ್ಲಿ 22 ವರ್ಷ ಆಡಳಿತ ಮಾಡಿತ್ತು. ಹೀಗಿದ್ದೂ ನಮ್ಮ ಪಕ್ಷ ಗುಜರಾತ್ ನಲ್ಲಿ 80 ಸ್ಥಾನಗಳನ್ನು ಗೆದ್ದಿದೆ. ಇಡೀ ಗ್ರಾಮೀಣ ಪ್ರದೇಶದಲ್ಲಿ ನಮಗೆ ಬಹುಮತ ಬಂದಿದೆ. ಆದರೆ ನಗರ ಪ್ರದೇಶ ಮಾತ್ರ ಕೈಕೊಟ್ಟಿತು,” ಎಂದು ಸಿಎಂ ಅಭಿಪ್ರಾಯಪಟ್ಟಿದ್ದಾರೆ. 2018ರಲ್ಲಿ ಜಯಭೇರಿ “ಆದರೆ ಕರ್ನಾಟಕದಲ್ಲಿ ಆ ಪರಿಸ್ಥಿತಿ ಇಲ್ಲ. ಕಾಂಗ್ರೆಸ್ ಪಕ್ಷ ಇಲ್ಲಿ ಬಲವಾಗಿದೆ.

ಕಾಂಗ್ರೆಸ್ ಪಕ್ಷಕ್ಕೆ ಇಲ್ಲಿ ನಾಯಕತ್ವ ಇದೆ. ರಾಹುಲ್ ಗಾಂಧಿಯವರು ಇಲ್ಲಿಗೂ ಬರ್ತಾರೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಜಯಭೇರಿ ಬಾರಿಸುತ್ತದೆ,” ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಗೆಲುವಿನ ಉಡುಗೊರೆ “ಕರ್ನಾಟಕದಲ್ಲಿ ಬಿಜೆಪಿಯನ್ನು ಸೋಲಿಸಿ ರಾಹುಲ್ ಗಾಂಧಿಯವರಿಗೆ ಮೊದಲನೇ ಗೆಲುವಿನ ಕೊಡುಗೆಯನ್ನು ಕರ್ನಾಟಕದ ಮೂಲಕ ಕೊಡುತ್ತೇವೆ,” ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ನಮ್ಮ ಕಾರ್ಯಕರ್ತರು ಕೂಡ ಅದೇ ಶಪಥ ಮಾಡಬೇಕು ಎಂದು ಸಿದ್ದರಾಮಯ್ಯ ಇದೇ ಸಂದರ್ಭದಲ್ಲಿ ಕರೆ ನೀಡಿದ್ದಾರೆ.