- KANNADA MEGA MEDIA NEWS :: News Coverage From Mangalore and Major Cities of India and world wide - http://kannada.megamedianews.com -

ಹೊಸ 10, 50, 200 ರುಪಾಯಿ ನೋಟುಗಳತ್ತ ನೋಟ

new-note [1]ನವದೆಹಲಿ: ಅಪನಗದೀಕರಣ ಜಾರಿಗೆ ಬಂದ ಬಳಿಕ ಕರೆನ್ಸಿ ನೋಟುಗಳಲ್ಲಿ ಭಾರಿ ಬದಲಾವಣೆಯಾಗಿವೆ. ಡಿಜಿಟಲ್ ಇಂಡಿಯಾಕ್ಕೆ ಒತ್ತು ನೀಡಿರುವ ಮೋದಿ ಸರ್ಕಾರ, ಕ್ಯಾಶ್ ಲೆಸ್ ವ್ಯವಹಾರಕ್ಕೆ ಹೆಚ್ಚಿನ ಮಹತ್ವ ನೀಡಿದೆ. ಆದರೆ, ಹೊಸ ಹೊಸ ನೋಟುಗಳನ್ನು ಕೂಡಾ ಕಾಲಕಾಲಕ್ಕೆ ಹೊರತರಲಾಗುತ್ತಿದೆ.

new-note-2 [2]ಹೊಸ ಹತ್ತು ರೂಪಾಯಿ ನೋಟನ್ನು ಬಿಡುಗಡೆ ಮಾಡಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸಜ್ಜಾಗಿದೆ. ಮಹಾತ್ಮಾ ಗಾಂಧಿ ಸರಣಿಯ ಈ ನೋಟು ಚಾಕಲೇಟ್ ಕಲರ್ ಹೊಂದಿದೆ.

new-note-3 [3]ಕೋನಾರ್ಕದ ಸೂರ್ಯ ದೇವಾಲಯದ ಚಿತ್ರ ನೋಟಿನಲ್ಲಿರುವ ವಿಶೇಷತೆ. ಆರ್ ಬಿ ಐ ಗವರ್ನರ್ ಉರ್ಜಿತ್ ಪಟೇಲ್ ರ ಸಹಿ ಕೂಡ ಇದರ ಮೇಲಿರಲಿದೆ. ಇದಲ್ಲದೆ, 50, 200 ರುಪಾಯಿ ನೋಟುಗಳು ಕೂಡಾ ಹೊಸ ರೂಪದಲ್ಲಿ ಮಾರುಕಟ್ಟೆಗೆ ಬರಲಿದೆ. ಇದಲ್ಲದೆ ಜತೆಗೆ ಹೊಸ 100 ರುಪಾಯಿ ನೋಟುಗಳನ್ನು ಕೂಡಾ ಹೊರ ತರಲು ಆರ್ ಬಿಐ ಚಿಂತನೆ ನಡೆಸಿದೆ.