ನಮ್ಮ ಲೆಕ್ಕ ಕೇಳಲು ಅಮಿತ್‌ ಶಾ ಯಾರು? ಸಿಎಂ ಕಿಡಿ

1:31 PM, Thursday, January 11th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

siddaramaihಮೈಸೂರು: ಕೇಂದ್ರ ಸರಕಾರ ನೀಡಿದ ಅನುದಾನವನ್ನು ರಾಜ್ಯ ಸರ್ಕಾರ ಭ್ರಷ್ಟಾಚಾರಕ್ಕೆ ಬಳಸಿಕೊಂಡಿದೆ ಎಂದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ತಿರುಗೇಟು ನೀಡಿದ್ದು ‘ನಮ್ಮ ಲೆಕ್ಕ ಕೇಳಲು ಶಾ ಯಾರು’ ಎಂದು ಪ್ರಶ್ನಿಸಿದ್ದಾರೆ.

ಎಚ್‌ಡಿ ಕೋಟೆಯ ಸರಗೂರಿನಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ‘ಕೇಂದ್ರ ಸರಕಾರ ಕಾನೂನಾತ್ಮಕವಾಗಿ ನಮಗೆ ನೀಡಬೇಕಾಗಿದ್ದ ನಮ್ಮ ತೆರಿಗೆ ಪಾಲನ್ನು ಕೊಟ್ಟಿದ್ದಾರೆ. ನಾವು ಖರ್ಚು ಮಾಡಿದ ಲೆಕ್ಕವನ್ನು ರಾಜ್ಯದಜನರಿಗೆ ನೀಡಬೇಕೆ ಹೊರತು ಶಾಗೆ ಅಲ್ಲ. ಅದನ್ನು ಕೇಳಲು ಅವರು ಯಾರು’ ಎಂದರು.

‘ಈ ಬಾರಿ ನಮಗೆ ಕೇಂದ್ರದಿಂದ ಬರಬೇಕಾಗಿದ್ದ ಅನುದಾನದಲ್ಲಿ ಕಡಿತವಾಗಿದೆ ಎಂದ ಸಿಎಂ ಅಮಿತ್‌ ಶಾ ಕಾಮನ್‌ ಸೆನ್ಸ್‌ ಇಟ್ಟುಕೊಂಡು ಮಾತಾಡಲಿ.ಎನೇನೋ ಮಾತನಾಡಿ ಜನರ ದಿಕ್ಕು ತಪ್ಪಿಸುವುದು ಬೇಡ’ ಎಂದು ಕಿಡಿ ಕಾರಿದರು.

‘ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ಮೇಲೆ 14ನೇ ಹಣಕಾಸು ಆಯೋಗದ ಮೂಲಕ ಕರ್ನಾಟಕಕ್ಕೆ 2,19,506 ಕೋಟಿ ರೂ. ಅನುದಾನ ಒದಗಿಸಲಾಗಿದೆ. ಅಲ್ಲದೆ, ಇತರೆ ಯೋಜನೆಗಳ ಮೂಲಕ ಹೆಚ್ಚುವರಿಯಾಗಿ ನೀಡಿರುವ 79 ಸಾವಿರ ಕೋಟಿ ರೂ. ಸೇರಿ ಒಟ್ಟಾರೆ 3 ಲಕ್ಷ ಕೋಟಿ ರೂ. ಬಂದಿದೆ. ಆದರೆ, ಈ ಹಣದಲ್ಲಿ ಬಹುಪಾಲನ್ನು ಭ್ರಷ್ಟಾಚಾರಕ್ಕೆ ಬಳಸಿಕೊಂಡ ರಾಜ್ಯ ಸರ್ಕಾರ ಜನರಿಗೆ ಯೋಜನೆಗಳನ್ನು ತಲುಪಿಸಲಿಲ್ಲ’ ಎಂದು ಚಿತ್ರದುರ್ಗದಲ್ಲಿ ಶಾ ಗಂಭೀರ ಆರೋಪ ಮಾಡಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English