ಕೇವಲ 99 ರೂಪಾಯಿಗೇ ವಿಮಾನ ಟಿಕೆಟ್‌‌…ಅತಿ ಕಡಿಮೆ ದರದಲ್ಲಿ ಈ 7 ನಗರಗಳಲ್ಲಿ ಸುತ್ತಾಡಿ!

3:44 PM, Monday, January 15th, 2018
Share
1 Star2 Stars3 Stars4 Stars5 Stars
(6 rating, 2 votes)
Loading...

airasiaನವದೆಹಲಿ: ಹಬ್ಬದ ಸಂಭ್ರಮದಲ್ಲಿ ಏರ್‌‌ಏಷ್ಯಾ ವಿಮಾನಯಾನ ಸಂಸ್ಥೆ ಪ್ರಯಾಣಿಕರಿಗೆ ಬಂಪರ್‌‌ ಆಫರ್‌ ಪ್ರಕಟಿಸಿದೆ. ಕೇವಲ 99 ರೂಪಾಯಿಗೆ ವಿಮಾನ ಟಿಕೆಟ್‌‌ಅನ್ನು ಘೋಷಿಸಿದೆ.

ಭಾರತದ ಏಳು ಪ್ರಮುಖ ನಗರಗಳಿಗೆ ಪ್ರಯಾಣಿಸುವವರಿಗೆ 99 ರೂಪಾಯಿಯ ಟಿಕೆಟ್‌ ನೀಡಲಿದೆ. ಬೆಂಗಳೂರು, ಹೈದರಾಬಾದ್‌, ಕೊಚ್ಚಿ, ಕೋಲ್ಕತ್ತಾ, ನವದೆಹಲಿ, ಪುಣೆ ಮತ್ತು ರಾಂಚಿಗೆ ಪ್ರಯಾಣಿಸುವವರಿಗೆ ಈ ಭರ್ಜರಿ ಆಫರ್‌ ನೀಡಿದೆ.

ಇಂದಿನಿಂದ ಜನವರಿ 21ರವರೆಗೆ ಗ್ರಾಹಕರು 99ರೂಪಾಯಿ ಬೆಲೆ ಟಿಕೆಟ್‌ ಬುಕ್ ಮಾಡಬಹುದಾಗಿದೆ. ಜನವರಿ 15ರಿಂದ ಜುಲೈ 31ರೊಳಗೆ ಬೆಂಗಳೂರು, ಹೈದರಾಬಾದ್‌, ಕೊಚ್ಚಿ, ಕೋಲ್ಕತ್ತಾ, ನವದೆಹಲಿ, ಪುಣೆ ಮತ್ತು ರಾಂಚಿಗೆ ಪ್ರಯಾಣಿಕರು ಪ್ರಯಾಣ ಬೆಳೆಸಬಹುದಾಗಿದೆ.

ಇದೇ ವೇಳೆ ಕಡಿಮೆ ಬೆಲೆಗೆ ವಿದೇಶಕ್ಕೂ ಪ್ರಯಾಣ ಬೆಳೆಸಬಹುದಾಗಿದೆ. ಕೇವಲ 1,499 ರೂಪಾಯಿ ಮೂಲ ಬೆಲೆಗೆ 10 ರಾಷ್ಟ್ರಗಳಿಗೆ ಪ್ರಯಾಣ ಬೆಳೆಸುವ ಅವಕಾಶವನ್ನೂ ಏರ್‌‌ಏಷ್ಯಾ ನೀಡಿದೆ. ಆಕ್ಲೆಂಡ್‌‌, ಬಾಲಿ, ಬ್ಯಾಂಕಾಕ್‌‌, ಕೌಲಾಲಂಪುರ್‌‌, ಮೆಲ್ಬೋರ್ನ್, ಸಿಂಗಪುರ್ ಮತ್ತು ಸಿಡ್ನಿಗಳಿಗೆ ಪ್ರಯಾಣ ಬೆಳೆಸಬಹುದಾಗಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English