ಬಂಟ್ವಾಳ ತಾಲೂಕಿನಲ್ಲಿ “ಪರಿವರ್ತನೆಗೆ ಗ್ರಾಮದೆಡೆಗೆ ಬಿಜೆಪಿ ನಡಿಗೆ”ಯ ಮೂರನೆ ದಿನದ ಪಾದಯಾತ್ರೆ

12:16 PM, Wednesday, January 17th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

Bantwalaಬಂಟ್ವಾಳ: ಭಾರತೀಯ ಜನತಾ ಪಾರ್ಟಿ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿಯ ನೇತೃತ್ವದಲ್ಲಿ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಮುಂದಾಳತ್ವದಲ್ಲಿ ಜ.14ರಂದು ಆರಂಭವಾದ 13 ದಿನಗಳ ಬಂಟ್ವಾಳದ “ಪರಿವರ್ತನೆಗೆ ಗ್ರಾಮದೆಡೆಗೆ ಬಿಜೆಪಿ ನಡಿಗೆ”ಯ ಮೂರನೆ ದಿನದ ಪಾದಯಾತ್ರೆಯು ಮಂಗಳವಾರ ರಾಯಿ ಪೇಟೆಯಲ್ಲಿ ಮತ್ತೆ ಆರಂಭವಾಯಿತು.

Bantwala-2ಕೈತ್ರೋಡಿ ಕ್ವಾಟ್ರಸ್‍ರಸ್ತೆಯಲ್ಲಿ ಪಂಜಿಕಲ್ಲಿನ ಬಾಲೇಶ್ವರಗರಡಿಗೆ ತಲುಪಿದಾಗ ಅಲ್ಲಿ ನೆರೆದಿದ್ದ ಪಂಜಿಕಲ್ಲಿನ ಬಿಜೆಪಿ ಕಾರ್ಯಕರ್ತರು ಹಾಗೂ ಸಾರ್ವಜನಿಕರು ರಾಜೇಶ್ ನಾಯ್ಕ್ ಉಳಿಪ್ಪಾಡಿಯವರಿಗೆ ಹೂ ಹಾರ ಹಾಕುವ ಮೂಲಕ ಸ್ವಾಗತಿಸಿದರು. ಅಲ್ಲಿಂದ ಪಾದಯಾತ್ರೆಯು ಮುಂದುವರಿದು ರಸ್ತೆಯ ಇಕ್ಕೆಲದಲ್ಲಿ ನೆರೆದಿದ್ದ ಸಾರ್ವಜನಿಕರೊಂದಿಗೆ ರಾಜೇಶ್ ನಾಯಕ್ ಹಸ್ತಲಾಘವ ಮಾಡುತ್ತಾ ಸಾಗಿದರು. ಯಾತ್ರೆಯು ನಿಂಗಲ್ ಬಾಕಿಮಾರ್ ತಲುಪಿತು.

ನಂತರ ಗಣೇಶ ಮಂದಿರದಲ್ಲಿ ಮದ್ಯಾಹ್ನದ ಭೋಜನ ವ್ಯವಸ್ಥೆಯನ್ನು ಮುಗಿಸಿಕೊಂಡು ಯಾತ್ರೆಯು ಕೊಡಂಬೆಟ್ಟು ಮೂಲಕ ಕಾವಳ ಪಡೂರಿಗೆ ಸಾಗಿತು. ಸಂಜೆ ವಗ್ಗದಲ್ಲಿ ಸಂಪನ್ನಗೊಂಡಿತು.

Bantwala-3ಕ್ಷೇತ್ರ ಅಧ್ಯಕ್ಷ ದೇವದಾಸ ಶೆಟ್ಟಿ, ಪ್ರಧಾನ ಕಾರ್ಯದರ್ಶಿಗಳಾದ ರಾಮದಾಸ್ ಬಂಟ್ವಾಳ, ಮೋನಪ್ಪ ದೇವಸ್ಯ, ರಾಜ್ಯ ಬಿಜೆಪಿ ಸಹವಕ್ತಾರೆ ಸುಲೋಚನಾ ಜಿ.ಕೆ ಭಟ್, ಜಿ.ಪಂ ಸದಸ್ಯರಾದ ತುಂಗಪ್ಪ ಬಂಗೇರ, ಕಮಲಾಕ್ಷಿ ಪೂಜಾರಿ, ಜಿಲ್ಲಾ ಉಪಾಧ್ಯಕ್ಷ ಜಿ.ಆನಂದ, ಕ್ಷೇತ್ರ ಉಪಾಧ್ಯಕ್ಷ ವಿಜಯ ರೈ , ಕಾರ್ಯದರ್ಶಿಗಳಾದ ಸೀತರಾಮ ಪೂಜಾರಿ, ರಮಾನಾಥ ರಾಯಿ, ಗಣೇಶ್‍ರೈ ಮಾಣಿ, ಎಸ್.ಸಿ ಮೋರ್ಛಾ ಜಿಲ್ಲಾಧ್ಯಕ್ಷ ದಿನೇಶ್‍ಅಮ್ಟೂರು, ಜಿಲ್ಲಾ ಸಮಿತಿ ಸದಸ್ಯರಾದ ರೋನಾಲ್ಡ್ ಡಿಸೋಜಾ, ಜೋಕಿಂ ಮಿನೆಜಸ್, ರಾಜ್ಯಯುವ ಮೋರ್ಚಾ ಸದಸ್ಯ ಪೃಥ್ವಿರಾಜ್ ಬಂಗೇರ, ಶಕ್ತಿ ಕೇಂದ್ರಅಧ್ಯಕ್ಷ ರತ್ನಕುಮಾರ್‍ಚೌಟ, ಪ್ರ.ಕಾರ್ಯದರ್ಶಿ ಸಂಜೀವ ಪೂಜಾರಿ, ರೈತ ಮೋರ್ಚಾ ಅಧ್ಯಕ್ಷ ತನಿಯಪ್ಪ ಗೌಡ, ಪ್ರ.ಕಾರ್ಯದರ್ಶಿ ಪುರುಷೋತ್ತಮ ಶೆಟ್ಟಿ ಬಾರೆಕ್ಕಿನಡೆ, ಹಿಂದುಳಿವರ್ಗದ ಅಧ್ಯಕ್ಷ ವಸಂತ ಅಣ್ಣಳಿಕೆ, ಪ್ರ.ಕಾರ್ಯದರ್ಶಿ ಹರೀಶ್‍ರಾಯಿ, ಬಂ.ವ್ಯ.ಸೇ.ಸ ನಿರ್ದೇಶಕ ಕರುಣೇಂದ್ರ ಪುಜಾರಿ, ಕೆ.ಎನ್ ಶೇಖರ್, ಯುವ ಮೋರ್ಛಾದ ಸಂತೋಷ್‍ರಾಯಿ ಬೆಟ್ಟು, ದಿನೇಶ್‍ಶೆಟ್ಟಿ ದಂಬೆದಾರು, ಮೋಹನದಾಸ್, ಸಂಪತ್‍ಕೋಟ್ಯಾನ್, ರಾಜೇಂದ್ರ, ರಾಯಿ ಪಂಚಾಯತ್ ಅಧ್ಯಕ್ಷ ದಯಾನಂದ ಸಫಲ್ಯ, ಪಂಜಿಕಲ್ಲು ಪಂಚಾಯತ್ ಉಪಾಧ್ಯಕ್ಷ ಲಕ್ಷ್ಮಣ್‍ಗೌಡ, ರಾಯಿ, ಪಂಜಿಕಲ್ಲು, ಚೆನ್ನೈತ್ತೋಡಿ ಪಂಚಾಯತ್ ಸಮಿತಿ ಅಧ್ಯಕ್ಷರುಗಳಾದ ಪರಮೇಶ್ವರ ಪೂಜಾರಿ, ಚಿದಾನಂದಕುಲಾಲ್, ಜಯರಾಮ ಶೆಟ್ಟಿ ಕಾಪು, ಮಹಿಳಾ ಮೋರ್ಚಾದ ಸದಸ್ಯರಾದ ವಿನುತಾ ಸಫಲ್ಯ, ರೇಣುಕಾ ರೈ, ಗುಣವತಿ, ನಳಿಣಾಕ್ಷಿ ಶೆಟ್ಟಿ, ಪಂಚಾಯತ್ ಸದಸ್ಯರಾದ ಹರೀಶ್ ಪೂಜಾರಿ, ಬಾಲಕೃಷ್ಣ ಪೂಜಾರಿ, ಸುಮತಿ, ಶಾಲಿನಿ, ರೂಪಾ, ಹರೀಣಾಕ್ಷಿ, ಮೋಹನ್‍ದಾಸ್‍ಗಟ್ಟಿ, ಪೂವಪ್ಪ ಮೆಂಡನ್, ಪಕ್ಷದ ಪ್ರಮುಖರಾದ ಪ್ರಕಾಶ್‍ಅಂಚನ್, ಗೋಪಾಲಕೃಷ್ಣ ಚೌಟ, ಪುಷ್ಪರಾಜ ಚೌಟ, ಕೃಷ್ಣಪ್ಪ ಗೌಡ, ವಿನೋದ್ ಪೂಜಾರಿ, ಶ್ಯಾಮಪ್ರಸಾದ್ ಪೂಂಜಾ, ಯಶೋಧರ ಶೆಟ್ಟಿ, ಪ್ರಕಾಶ್ ಶೆಟ್ಟಿ ಆಲಕ್ಕಿ, ರೂಪೇಶ್ ಪೂಜಾರಿ, ಉಮೇಶ್‍ಗೌಡ, ರವೀಂದ್ರ ಪೂಜಾರಿ ಬದನಡಿ, ಗಂಗಾಧರ ಪಿಲ್ಕಾಜೆ, ವಸಂತಗೌಡ ಉಪಸ್ಥಿತರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English