69ನೇ ಗಣರಾಜ್ಯೋತ್ಸವ ಆಚರಣೆಗೆ ದೇಶ ಸಜ್ಜು…ಈ ಬಾರಿಯ ವಿಶೇಷತೆ ಏನು?

9:50 AM, Friday, January 26th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

republic-dayನವದೆಹಲಿ: ಇಂದು ದೇಶದ 69ನೇ ಗಣರಾಜ್ಯೋತ್ಸವ ಆಚರಣೆ ಮಾಡಲಾಗುತ್ತಿದ್ದು, ದೇಶಾದ್ಯಂತ ಸಂಭ್ರಮ ಮನೆ ಮಾಡಿದೆ. ದೇಶದ ರಾಜಧಾನಿ ದೆಹಲಿ ಸೇರಿದಂತೆ ಎಲ್ಲಡೆ ಗಣರಾಜ್ಯೋತ್ಸವ ಆಚರಣೆಗೆ ಭರದ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಪ್ರತಿ ವರ್ಷದಂತೆ ಈ ಬಾರಿಯೂ ದೆಹಲಿಯ ಇಂಡಿಯಾ ಗೇಟ್‌ ಬಳಿ ಗಣರಾಜ್ಯೋತ್ಸವ ಆಚರಣೆಗೆ ವೇದಿಕೆ ಸಜ್ಜಾಗಿದೆ. ಈ ಬಾರಿ ಪರೇಡ್‌ ಹಾಗೂ ಮುಖ್ಯ ಅತಿಥಿಗಳಿಂದ ಗಣರಾಜ್ಯೋತ್ಸವ ವಿಶೇಷ ಗಮನ ಸೆಳೆಯುತ್ತಿದೆ.

ಇದೇ ಮೊದಲ ಬಾರಿಗೆ ಆಷಿಯಾನ್‌ ರಾಷ್ಟ್ರಗಳ ನಾಯಕರು ಗಣರಾಜ್ಯೋತ್ಸವಕ್ಕೆ ಸಾಕ್ಷಿಯಾಗಲಿದ್ದಾರೆ. ಥಾಯ್ಲೆಂಡ್, ವಿಯೆಟ್ನಾಂ, ಮಲೇಷ್ಯಾ, ಫಿಲಿಫೈನ್ಸ್, ಮ್ಯಾನ್ಮಾರ್, ಸಿಂಗಪುರ್‌, ಕೊಲಂಬಿಯಾ, ಬ್ರುನಿ ಮತ್ತಿತರ ರಾಷ್ಟ್ರಗಳ ನಾಯಕರು ಈಗಾಗಲೇ ಆಗಮಿಸಿದ್ದು, ಇಂದು ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಗಣರಾಜ್ಯೋತ್ಸವಕ್ಕೆ ಇಷ್ಟು ಅತಿಥಿಗಳು ಆಗಮಿಸುತ್ತಿರುವುದು ಇದೇ ಮೊದಲು.

republic-day-2ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾರತೀಯ ಭೂಸೇನೆ, ನೌಕಾಪಡೆ, ವಾಯುಪಡೆ ತಮ್ಮ ಶಕ್ತಿಯನ್ನು ಜಗತ್ತಿಗೆ ಪ್ರದರ್ಶಿಸಲಿವೆ. ಅಲ್ಲದೇ, ಮೊದಲ ಬಾರಿಗೆ ಬಿಎಸ್‌‌ಎಫ್‌‌ನ ಮಹಿಳಾ ಪಡೆ ಬೈಕ್‌ನಲ್ಲಿ ಸಾಹಸ ಪ್ರದರ್ಶನ ನೀಡಲಿದೆ. ದೇಶದ ಹಲವು ಭಾಗದ 700 ಮಕ್ಕಳು ಪರೇಡ್‌ನಲ್ಲಿ ಭಾಗವಹಿಸಿದ್ದಾರೆ.

ಗಣರಾಜ್ಯೋತ್ಸವ ಸಮಾರಂಭಕ್ಕೆ ದೇಶದ ಪ್ರತಿನಿಧಿಗಳು, ಗಣ್ಯ ವ್ಯಕ್ತಿಗಳಿಗೆ ವಿಶೇಷ ಆಹ್ವಾನ ನೀಡಲಾಗಿದೆ. ಇಡೀ ಗಣರಾಜ್ಯೋತ್ಸವ ಕಾರ್ಯಕ್ರಮದ ಸರ್ಕಾರಿ ಸ್ವಾಮ್ಯದ ದೂರದರ್ಶನದಲ್ಲಿ ಪ್ರಸಾರವಾಗಲಿದೆ. ದೇಶಾದ್ಯಂತ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English