- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಪ್ರಧಾನಿ ಮೋದಿ ದಾವೋಸ್‌ ಭಾಷಣಕ್ಕೆ ತಲೆದೂಗಿದ ಚೀನಾ!

modi-speak [1]ನವದೆಹಲಿ: ಸ್ವಿಡ್ಜರ್‌ಲ್ಯಾಂಡ್‌‌ನ ದಾವೋಸ್‌ನಲ್ಲಿ ನಡೆದ ವರ್ಲ್ಡ್‌‌‌ ಎಕನಾಮಿಕ್ಸ್‌ ಫೋರಂ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾಡಿರುವ ಭಾಷಣವನ್ನು ಚೀನಾ ಸ್ವಾಗತಿಸಿದೆ.

ದಾವೋಸ್‌ನಲ್ಲಿ ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಆರ್ಥಿಕ ರಕ್ಷಣಾ ನೀತಿ ಭಯೋತ್ಪಾದನೆಯಷ್ಟೇ ಅಪಾಯಕಾರಿ ಎಂದು ಪ್ರತಿಪಾದಿಸಿದ್ದರು. ಈ ಮೂಲಕ ಅಮೆರಿಕ ಅಧ್ಯಕ್ಷ ಡೊನಾಲ್ಡ್‌‌ ಟ್ರಂಪ್‌ ಅವರ ‘ಅಮೆರಿಕ ಫಸ್ಟ್‌‌’ ನೀತಿ ವಿರುದ್ಧ ಪರೋಕ್ಷವಾಗಿ ಮೋದಿ ದನಿ ಎತ್ತಿದ್ದರು.

ಪ್ರಧಾನಿ ಮೋದಿ ಅವರ ಈ ಭಾಷಣವನ್ನು ಸ್ವಾತಿಸಿರುವ ಚೀನಾ ಮೆಚ್ಚುಗೆ ವ್ಯಕ್ತಪಡಿಸಿದೆ. ‘ಪ್ರಧಾನಿ ನರೇಂದ್ರ ಮೋದಿ ಭಾಷಣವನ್ನು ನಾವು ಗಮನಿಸಿದ್ದೇವೆ. ಮೋದಿ ತಮ್ಮ ಭಾಷಣದಲ್ಲಿ ಆರ್ಥಿಕ ರಕ್ಷಣಾ ನೀತಿಯಿಂದಾಗುವ ಅಪಾಯದ ಬಗ್ಗೆ ವಿವರಿಸಿದ್ದಾರೆ ಎಂದು ಚೀನಾ ವಿದೇಶಾಂಗ ಇಲಾಖೆ ವಕ್ತಾರೆ ಹುವಾ ಚುನೈಯಿಂಗ್ ಹೇಳಿದ್ದಾರೆ.

ಅಲ್ಲದೇ, ಪ್ರಧಾನಿ ಮೋದಿ ಜಾಗತೀಕರಣ ಇಂದಿನ ಪ್ರವೃತ್ತಿ ಎಂದು ಪ್ರತಿಪಾದಿಸಿದ್ದಾರೆ. ಅಭಿವೃದ್ಧಿ ಹೊಂದಿದ ದೇಶಗಳೂ ಸೇರಿದಂತೆ ಎಲ್ಲಾ ದೇಶಗಳು ಆರ್ಥಿಕ ರಕ್ಷಣಾ ನೀತಿಯ ವಿರುದ್ಧ ಹೋರಾಡಬೇಕಿದೆ. ಈ ನಿಟ್ಟಿನಲ್ಲಿ ಚೀನಾ ಭಾರತದೊಂದಿಗೆ ಕಾರ್ಯನಿರ್ವಹಿಸಲು ಬಯಸುತ್ತದೆ ಎಂದು ಹುವಾ ಚುನೈಯಿಂಗ್ ತಿಳಿಸಿದ್ದಾರೆ.