ಬಿಗ್‌ಬಾಸ್‌ ಟ್ರೋಫಿಗೆ ಮುತ್ತಿಕ್ಕಿದ ಚಂದನ್‌ ಶೆಟ್ಟಿ… ದಿವಾಕರ್‌ ರನ್ನರ್‌ ಅಪ್‌!

10:02 AM, Monday, January 29th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

chandan-shettyಬೆಂಗಳೂರು: ಕನ್ನಡದ ಬಿಗ್‌ಬಾಸ್ ಸೀಸನ್‌ 5 ಕ್ಕೆ ಅದ್ದೂರಿಯಾಗಿ ತೆರೆ ಎಳೆಯಲಾಯಿತು. ಸ್ಪರ್ಧಿ ಚಂದನ್‌ ಶೆಟ್ಟಿ ಬಿಗ್‌ಬಾಸ್ ವಿನ್ನರ್ ಪಟ್ಟದೊಂದಿಗೆ ಹೊರ ಬಂದಿದ್ದಾರೆ.

ಹೌದು, ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್‌ 5 ನೇ ಸೀಸನ್ ಮುಕ್ತಾಯವಾಗಿದೆ. ಈ ಬಾರಿಯ ಬಿಗ್‌ಬಾಸ್ ವಿನ್ನರ್‌ ಯಾರಾಗಲಿದ್ದಾರೆ ಎಂದು ಇಡೀ ಕರ್ನಾಟಕದ ಜನತೆ ಕಾತುರದಿಂದ ಕಾಯುತ್ತಿದ್ದರು. ಸದ್ಯ ಇದು ರಿವೀಲ್ ಆಗಿದ್ದು, ಸ್ಪರ್ಧಿ ಚಂದನ್‌ ಶೆಟ್ಟಿ ಬಿಗ್‌ಬಾಸ್‌ ವಿನ್ನರ್ ಆಗುವುದರ ಜತೆಗೆ ಬಿಗ್‌ಬಾಸ್‌ ಟ್ರೋಫಿಗೆ ಮುತ್ತಿಕ್ಕಿದ್ದಾರೆ.

chandan-shetty-2ಈ ಬಾರಿಯ ಬಿಗ್‌ಬಾಸ್‌ ತುಂಬಾ ವಿಶೇಷವಾಗಿತ್ತು. ಕಾರಣ ಬಿಗ್‌ಬಾಸ್ ಮನೆಯಲ್ಲಿ ಸಾಮಾನ್ಯ ಸ್ಪರ್ಧಿಗಳು, ಸೆಲೆಬ್ರೆಟಿಗಳ ಮಿಶ್ರಣವಾಗಿತ್ತು. ಈ ಸೀಸನ್‌ 15 ವಾರಗಳು ತುಂಬಾ ಸುಂದರ, ಆಕರ್ಷಕವಾಗಿ ಮೂಡಿ ಬಂದವು. ಕೊನೆಯದಾಗಿ ಗ್ರ್ಯಾಂಡ್ ಫಿನಾಲೆಯಲ್ಲಿ ದಿವಾಕರ್‌, ಚಂದನ್ ಹಾಗೂ ಜೆಕೆ ಉಳಿದುಕೊಂಡಿದ್ದರು. ಈ ಮೂವರಲ್ಲಿ ಯಾವ ಸ್ಪರ್ಧಿ ಬಿಗ್‌ಬಾಸ್ ವಿನ್‌ ಆಗಲಿದ್ದಾರೆ ಎನ್ನುವ ಕುತೂಹಲ ಎಲ್ಲರಲ್ಲೂ ಮೂಡಿತ್ತು.

ಫಿನಾಲೆಯಲ್ಲಿ ಎಲಿಮಿನೇಟ್‌ ಕ್ರಿಯೆ ಪ್ರಾರಂಭಿಸಿದ ಸುದೀಪ್, ಮೊದಲು ಜೆಕೆ ಅವರನ್ನು ಮನೆಯಿಂದ ಹೊರಗೆ ಕರೆದ್ರು. ಜೆಕೆ ಅವರ ಎಲಿಮಿನೇಟ್‌ ವೇದಿಕೆಯ ಮೇಲಿದ್ದ ಎಲ್ಲರಿಗೂ ಆಘಾತ ನೀಡಿತ್ತು. ಎಲ್ಲರೂ ಕೂಡ ಮೌನಕ್ಕೆ ಶರಣಾಗಿದ್ದರು. ಯಾಕಂದ್ರೆ ಜೆಕೆ ಕೂಡ ಬಿಗ್‌ಬಾಸ್‌ ವಿನ್ ಆಗಬಹುದು ಎನ್ನುವ ಲೆಕ್ಕಾಚಾರದಲ್ಲಿದ್ದರು.

ಕೊನೆಯದಾಗಿ ಚಂದನ್ ಹಾಗೂ ದಿವಾಕರ್ ಮನೆಯಲ್ಲಿ ಉಳಿದುಕೊಂಡ್ರು. ಈ ಇಬ್ಬರಲ್ಲಿ ಯಾರು ಬಿಗ್‌ಬಾಸ್‌ ವಿನ್ ಆಗಲಿದ್ದಾರೆ ಎನ್ನುವ ಕುತೂಹಲ ಇನ್ನಷ್ಟು ಹೆಚ್ಚಿಸಿತ್ತು. ಬಿಗ್‌ಬಾಸ್‌ ಮನೆಯಿಂದ ದಿವಾಕರ್‌ ಹಾಗೂ ಚಂದನ್ ಅವರನ್ನು ಸ್ವತಃ ಸುದೀಪ್ ಅವರೇ ವೇದಿಕೆಗೆ ಕರೆತಂದ್ರು. ಬಳಿಕ ಅವರು ಬಿಗ್‌ಬಾಸ್‌ ವಿನ್ನರ್‌ ಚಂದನ್‌ ಶೆಟ್ಟಿ ಎಂದು ಘೋಷಣೆ ಮಾಡಿದ್ರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 

 Click this button or press Ctrl+G to toggle between Kannada and English