ಕಾರ್ಕಳದಲ್ಲಿ ಸುನೀಲ್ ಕುಮಾರ್ ಎದುರಿಸುವ ಕಾಂಗ್ರೆಸ್‌ ಅಭ್ಯರ್ಥಿ ಯಾರು?

5:42 PM, Tuesday, January 30th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

sunil-kumarಉಡುಪಿ: ಒಂದೆಡೆ ದಿಗಂತದವರೆಗೆ ಚಾಚಿಕೊಂಡಿರುವ ಅರಬ್ಬೀ ಸಮುದ್ರ. ಇನ್ನೊಂದೆಡೆ ಪಶ್ಚಿಮ ಘಟ್ಟದ ಸಾಲು. ಇವೆರಡರ ನಡುವೆ ತೆಂಗು – ಕಂಗುಗಳ ಮರೆಯಲ್ಲಿ ಪ್ರಕೃತಿ ವಿಸ್ಮಯಗಳನ್ನು ಓಡಲಲ್ಲಿ ಅಡಗಿಸಿಕೊಂಡಿರುವ ಜಿಲ್ಲೆ ಉಡುಪಿ . ಅಷ್ಟ ಮಠಗಳ ನಾಡು ಈಗ ಚುನಾವಣಾ ಕದನಕ್ಕೆ ಸಿದ್ಧಗೊಳ್ಳುತ್ತಿದೆ.

ಉಡುಪಿ ಜಿಲ್ಲೆಯ 5 ವಿಧಾನ ಸಭಾ ಕ್ಷೇತ್ರಗಳ ಪೈಕಿ ಬಿಜೆಪಿ ಕೈಯಲ್ಲಿರುವ ಏಕೈಕ ಕ್ಷೇತ್ರವೆಂದರೆ ಅದು ಕಾರ್ಕಳ ವಿಧಾನಸಭಾ ಕ್ಷೇತ್ರ. ಕರಿಗಲ್ಲ ಗೊಮ್ಮಟ ನಗರಿ ಕಾರ್ಕಳ ಈಗ ಚುನಾವಣಾ ಅಖಾಡಕ್ಕೆ ತೆರದು ಕೊಳ್ಳುತ್ತಿದೆ.

ರಾಮ, ಅಲ್ಲಾ ನಡುವಿನ ಚುನಾವಣೆ ಎನ್ನುತ್ತಲೇ ಇರುತ್ತೇನೆ: ಸುನಿಲ್ ಕುಮಾರ್ ಶತಮಾನಗಳ ಹಿಂದೆ ಜೈನ ಅರಸರ ಆಳ್ವಿಕೆಯ ಕಾಲದಲ್ಲಿ ಪಾಂಡ್ಯ ನಗರಿ ಎಂದೇ ಪ್ರಸಿದ್ದಿ ಪಡೆದಿದ್ದ ಕಾರ್ಕಳ ಕಾಲ ಕ್ರಮೇಣ ಇಲ್ಲಿರುವ ಕರಿ ಕರಿ ಬಂಡೆಗಳಿಂದಾಗಿ ಕರಿಕಲ್ಲು ಎಂದು ಪ್ರಸಿದ್ದವಾಯಿತು. ಕಾರ್ಕಳವು ಇಲ್ಲಿರುವ ಜೈನ ಬಸದಿಗಳು ಮತ್ತು ಗೋಮಟೇಶ್ವರನ ಮೂರ್ತಿಯಿಂದ ಜೈನ ತೀರ್ಥ ಎಂದೇ ಪ್ರಸಿದ್ಧಿ ಪಡೆದಿದೆ. ಹಾಲಿ ಶಾಸಕ ಸುನಿಲ್ ಕುಮಾರ್ ಕಾರ್ಕಳ ವಿಧಾನ ಸಭಾ ಕ್ಷೇತ್ರವನ್ನು ಸದ್ಯ ಬಿಜೆಪಿಯ ವಿ. ಸುನಿಲ್ ಕುಮಾರ್ ಪ್ರತಿನಿಧಿಸುತ್ತಿದ್ದಾರೆ.

ತನ್ನದೇ ಆದ ಕಾರ್ಯ ಶೈಲಿ ಹಾಗು ಪ್ರಖರ ಮಾತುಗಳಿಂದ ಸುನಿಲ್ ಕುಮಾರ್ ಯುವಕರನ್ನು ಆಕರ್ಷಿಸಿದ್ದಾರೆ. ಕುಂದಾಪುರ ಚುನಾವಣಾ ಅಖಾಡದಲ್ಲಿ ಬಿಜೆಪಿ-ಕಾಂಗ್ರೆಸ್‌ ನಡುವೆ ನೇರ ಯುದ್ಧ ವೀರಪ್ಪ ಮೊಯ್ಲಿ ಭದ್ರಕೋಟೆ ಆದರೆ ಈ ಹಿಂದೆ ಕಾಂಗ್ರೆಸ್ ಭದ್ರಕೋಟೆಯಾಗಿತ್ತು. ಈ ಕ್ಷೇತ್ರದಲ್ಲೇ ಹುಟ್ಟಿದ್ದ ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ಇಲ್ಲಿ ಸತತ 7 ಬಾರಿ ಗೆಲುವು ಕಂಡಿದ್ದರು. ಆದರೆ ನಿಧಾನಕ್ಕೆ ಕಾಂಗ್ರೆಸ್ ಕ್ಷೇತ್ರದ ಮೇಲಿದ್ದ ಹಿಡಿತವನ್ನು ಕಳೆದುಕೊಂಡಿತ್ತು. ಬಿಜೆಪಿ ಖಾತೆ ತೆರೆದಿದ್ದ ಸುನಿಲ್ ಕುಮಾರ್ 2004ರಲ್ಲಿ ಸುನಿಲ್ ಕುಮಾರ್ ಇಲ್ಲಿ ಮೊದಲ ಬಾರಿಗೆ ಗೆಲುವು ಸಾಧಿಸಿದ್ದರು.

ಆದರೆ 2008ರಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಇಲ್ಲಿ ಸುನಿಲ್ ಕುಮಾರ್ ಸೋಲು ಕಂಡಿದ್ದರು. ಮತ್ತೆ 2013ರಲ್ಲಿ ಇಲ್ಲಿ ಸುನಿಲ್ ಕುಮಾರ್ ಕಾಂಗ್ರೆಸ್ ನ ಗೋಪಾಲ್ ಭಂಡಾರಿಗೆ ಸೋಲುಣಿಸಿದ್ದರು. ಈ ಮೂಲಕ ಉಡುಪಿಯಲ್ಲಿ ಬಿಜೆಪಿಗೆ ಏಕೈಕ ಸ್ಥಾನ ಗೆಲ್ಲಿಸಿಕೊಟ್ಟಿದ್ದರು. ಸುನಿಲ್ ಎದುರಾಳಿ ಗೋಪಾಲ್ ಭಂಡಾರಿ? ಈ ಬಾರಿಯೂ ಸುನಿಲ್ ಕುಮಾರ್ ಮತ್ತೆ ಜಯದ ವಿಶ್ವಾಸ ಹೊಂದಿದ್ದಾರೆ. ಕಾಂಗ್ರೆಸ್ ನಿಂದ ಟಿಕೆಟ್ ಗೆ ಪೈಪೋಟಿ ಇದ್ದು ಮಾಜಿ ಶಾಸಕ ಗೋಪಾಲ ಭಂಡಾರಿಗೆ ಮುನಿಯಾಲು ಉದಯ್ ಕುಮಾರ್ ಶೆಟ್ಟಿ ಸ್ಪರ್ಧೆ ನೀಡುತ್ತಿದ್ದಾರೆ.

ಈ ಇಬ್ಬರ ಪೈಕಿ ಒಬ್ಬರಿಗೆ ಕಾಂಗ್ರೆಸ್ ಸೀಟ್ ಕೊಡುತ್ತಾ ಅಥವಾ ಹೊಸ ಮುಖಗಳಿಗೆ ಪಕ್ಷ ಮಣೆ ಹಾಕುತ್ತಾ ಕಾದು ನೋಡಬೇಕಿದೆ. ಕಾರ್ಕಳ ತಾಲೂಕಿಗೆ ಸೇರ್ಪಡೆಯಾಗಿದ್ದ ಹೆಬ್ರಿ ಇದೀಗ ಹೊಸ ತಾಲೂಕು ಎಂದು ಘೋಷಣೆಯಾಗಿದೆ. ಈ ಕಾರಣದಿಂದ ರಾಜಕೀಯದಲ್ಲೂ ಸಂಚಲನ ಮೂಡುವ ಸಾಧ್ಯತೆ ಇದೆ.

ಬಿಲ್ಲವರ ಪ್ರಾಬಲ್ಯ ಈ ಕಾರ್ಕಳ ವಿಧಾನ ಸಭಾ ಕ್ಷೇತ್ರದಲ್ಲಿ ಜಾತಿವಾರು ಲೆಕ್ಕಾಚಾರ ನೋಡಿದರೆ ಇಲ್ಲಿ ಬಿಲ್ಲವರೇ ಪ್ರಾಬಲ್ಯ ಹೊಂದಿದ್ದಾರೆ. ಬಂಟ ಸಮುದಾಯ ಎರಡನೇ ಸ್ಥಾನ, ಉಳಿದಂತೆ ಜೈನ , ಕ್ರೈಸ್ತ ಹಾಗೂ ಮುಸ್ಲಿಂ ಸೇರಿದಂತೆ ಎಲ್ಲಾ ಸಮುದಾಯದವರೂ ಸಮಾನ ಸಂಖ್ಯೆಯಲ್ಲಿದ್ದಾರೆ. ಇಲ್ಲಿ 73600 ಪುರುಷ ಮತದಾರರಿದ್ದರೆ, ಮಹಿಳೆಯರು 84005 ಸಂಖ್ಯೆಯಲ್ಲಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English