- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಹುತಾತ್ಮ ಯೋಧರ ಕುಟುಂಬಗಳ ಪರಿಹಾರವನ್ನು 25 ಲಕ್ಷಕ್ಕೆ ಹೆಚ್ಚಿಸಿದ ‘ಮಹಾ’ ಸರ್ಕಾರ

devendra-fadnavis [1]ಮುಂಬೈ: ಹುತಾತ್ಮ ಯೋಧರ ಕುಟುಂಬಗಳಿಗೆ ಮಹಾರಾಷ್ಟ್ರ ಸರ್ಕಾರ ನೀಡುತ್ತಿದ್ದ ಪರಿಹಾರ ಮೊತ್ತದಲ್ಲಿ ಹೆಚ್ಚಳ ಮಾಡಲಾಗಿದೆ. ಗಡಿಯಲ್ಲಿ ಮಡಿದ ಸೈನಿಕರ ಕುಟುಂಬಗಳಿಗೆ ಇನ್ಮುಂದೆ 25 ಲಕ್ಷ ರೂಪಾಯಿ ಪರಿಹಾರ ನೀಡಲಾವುದು ಎಂದು ಸಿಎಂ ದೇವೇಂದ್ರ ಫಡ್ನವಿಸ್‌ ಘೋಷಿಸಿದ್ದಾರೆ.

ಬುಧವಾರ ನಡೆದ ಹುತಾತ್ಮರಿಗೆ ಗೌರವ ಅರ್ಪಣೆ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಸಿಎಂ ಫಡ್ನವಿಸ್‌ ಈ ಘೋಷಣೆ ಮಾಡಿದ್ದಾರೆ. ಮೊದಲು ಹುತಾತ್ಮ ಯೋಧರ ಕುಟುಂಬಗಳಿಗೆ 8.5 ಲಕ್ಷ ರೂಪಾಯಿ ಪರಿಹಾರ ನೀಡಲಾಗುತ್ತಿತ್ತು. ನಮ್ಮ ಸರ್ಕಾರ ಇದನ್ನು 8.5 ಲಕ್ಷದಿಂದ 20 ಲಕ್ಷ ರೂಪಾಯಿಗೆ ಏರಿಕೆ ಮಾಡಿತ್ತು. ಇದೀಗ ಮತ್ತೆ 20 ಲಕ್ಷದಿಂದ 25 ಲಕ್ಷ ರೂಪಾಯಿಗೆ ಹೆಚ್ಚಳ ಮಾಡಲಾಗಿದೆ ಎಂದು ಫಡ್ನವಿಸ್‌ ತಿಳಿಸಿದರು.

ಗಡಿಯಲ್ಲಿನ ಯೋಧರ ಕಾರ್ಯವನ್ನು ಕೊಂಡಾಡಿದ ಸಿಎಂ ಫಡ್ನವಿಸ್‌, ಎಲ್ಲರೂ ಗಡಿಯಲ್ಲಿ ಹೋಗಿ ಹೋರಾಡಲು ಸಾಧ್ಯವಿಲ್ಲ. ಆದರೆ, ದೇಶಕ್ಕಾಗಿ ಹುತ್ಮಾತರಾದ ಯೋಧರಿಂದ ಸ್ಫೂರ್ತಿ ಪಡೆಯಬೇಕಿದೆ ಎಂದರು.