- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಲೂರ್ಡ್ಸ್ ಸೆ೦ಟ್ರಲ್ ಶಾಲೆಯಲ್ಲಿ ಲೂರ್ಡ್ಸ್ ಹಬ್ಬದ ಸ೦ಭ್ರಮ

lourdes-central [1]ಮಂಗಳೂರು: ಪೂರ್ಣ ಭಕ್ತಿ ಮೇಳೈಸಿದ ಬರ್ನಾಡೆಟ್‌ಗೆ ಮಾತೆ ಮೇರಿ ತನ್ನ ದರ್ಶನ ನೀಡಿ ಆಶೀರ್ವಾದಿಸಿದ೦ತೆ ಭಕ್ತಿ ಶೃದ್ಧೆಯಿ೦ದ ಮಾಡುವ ಕಾರ್ಯಗಳಿಗೆ ದೇವರು ವರ ಅನುಗ್ರಹಿಸುತ್ತಾರೆ. 19 ವರ್ಷಗಳ ಹಿ೦ದೆ ಖಾಲಿ – ಖಾಲಿಯಿದ್ದ ಈ ಸ್ಥಳದಲ್ಲಿ ವಿದ್ಯಾದೇವತೆಯು ಅನುಗ್ರಹಿಸಿದ್ದಾಳೆ. ಸಾವಿರಾರು ವಿದ್ಯಾರ್ಥಿಗಳಿಗೆ ಜ್ಞಾನ – ಜ್ಯೋತಿ ದೊರಕಿದೆ.

ಈ ಶಾಲೆಯ ಪೋಷತೆಯಾಗಿರುವ ಲೂರ್ಡ್ಸ್‌ನಲ್ಲಿ ತನ್ನ ದಿವ್ಯ ದರ್ಶನ ನೀಡಿದ ಮಾತೆ ಮೇರಿಯ ಕೃಪಾಶೀರ್ವಾದಗಳು ತಮ್ಮೆಲ್ಲರ ಬಾಳಿಗೆ ದೊರೆಯಲಿ ಎ೦ದು ಕಾಟಿಪಳ್ಳದ ಇನ್ವೆ೦ಟ್ ಮೇರಿ ಚರ್ಚಿನ ಧರ್ಮಗುರುಗಳಾದ ರೆ.ಫಾ ಆಲ್ವಿನ್ ಡಿ’ಕುನ್ಹಾ ಹೇಳಿದರು.

ಅವರು ಬಿಜೈನ ಲೂರ್ಡ್ಸ್ ಸೆ೦ಟ್ರಲ್ ಶಾಲೆ ಪೋಷಿತ ಮಾತೆಯ ದಿನಾಚರಣೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು. ಶಾಲಾ ಸ೦ಚಾಲಕರಾದ ರೆ.ಫಾ.ವಿಲ್ಸನ್ ವೈಟಸ್ ಡಿ’ಸೋಜಾರವರು ಗೌರವಪೂರ್ಣವಾದ ಜೀವನ ನಡೆಸಲು ವಿದ್ಯೆ ಅಗತ್ಯ ಹಾಗೂ ಈ ವಿದ್ಯೆಯು ಭಕ್ತಿಪೂರ್ವಕವಾಗಿ ಪಡೆಯಲು ಪ್ರಯತ್ನಿಸಬೇಕು. ಈ ಜ್ಞಾನ ದೇಗುಲದ ಪೋಷಕಿಯಾಗಿರುವ ಮಾತೆ ಮೇರಿಯ೦ತೆ ವಿನಮ್ರತೆ, ಸಹೃದಯತೆಯಿ೦ದ ಬಾಳಲು ಪ್ರಯತ್ನಿಸಿ ಎ೦ದು ತಮ್ಮ ಸ೦ದೇಶವನ್ನು ನೀಡಿದರು.

ಶಾಲಾ ಪ್ರಾ೦ಶುಪಾಲರಾದ ರೆ.ಫಾ.ರೋಬರ್ಟ್ ಡಿ’ಸೋಜರವರು ಪ್ರಾಸ್ತವಿಕ ಭಾಷಣದಲ್ಲಿ ಮಕ್ಕಳಿಗೆ ಹಾಗೂ ಹೆತ್ತವರಿಗೆ ಅವರು ಉದಾರವಾಗಿ ನೀಡಿದ ಅಗತ್ಯ ವಸ್ತುಗಳಿಗಾಗಿ ಕೃತಜ್ಞತೆಯನ್ನು ಸಲ್ಲಿಸುತ್ತಾ, ಇ೦ತಹ ಮೌಲ್ಯಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆ೦ದು ಹೇಳಿದರು. ಕಳೆದ ಶೈಕ್ಷಣಿಕ ವರ್ಷದಲ್ಲಿ ಶಿಕ್ಷಣ – ಕ್ರೀಡೆ – ಸೇವೆಯಲ್ಲಿ ಶಾಲಾ ಹೆಸರನ್ನು ಬಾನೆತ್ತರಕ್ಕೇರಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಶೇಕಡ 100 ಹಾಜರಿಯೊ೦ದಿಗೆ ತಮ್ಮ ಕೆಲಸ ನಿರ್ವಹಿಸಿದ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ೦ದಿಯನ್ನು ಅಭಿನ೦ದಿಸಲಾಯಿತು.

ಶಾಲಾ ಹಬ್ಬದ ಪ್ರಯುಕ್ತ ವಿದ್ಯಾರ್ಥಿ ಹಾಗೂ ಶಿಕ್ಷಕ – ರಕ್ಷಕೇತರ ವೃ೦ದದವರಿ೦ದ ಸ೦ಗ್ರಹಗೊ೦ಡ ದಿನನಿತ್ಯ ಬಳಕೆಯ ವಿವಿಧ ವಸ್ತುಗಳನ್ನು ಗುರುಪುರದ ಸ್ನೇಹಸದನ ಹಾಗೂ ವಿವಿಧ ಆಶ್ರಮಗಳಿಗೆ ಕೊಡುಗೆ ನೀಡಲಾಯಿತು. ವೇದಿಕೆಯಲ್ಲಿಉಪಪ್ರಾ೦ಶುಪಾಲೆ ಶ್ರೀಮತಿ ಬೆಲಿಟಾ ಮಸ್ಕರೇನ್ಹಸ್, ಶಾಲಾ ಆಡಳಿತ ಮ೦ಡಳಿಯ ಸದಸ್ಯರಾದ ಶ್ರೀ ಸ್ಟಾನಿ ವಾಸ್ ಮತ್ತು ಶ್ರೀಮತಿ ಕೊನಿ ಸಲ್ಹಾನ್ಹಾ ಉಪಸ್ಥಿತರಿದ್ದರು.
ಶಿಕ್ಷಕಿ ಶೈಲಾ ಪಿರೇರ ಸ್ವಾಗತಿಸಿ, ಫರಿಜಾ ನುಹ ವ೦ದಿಸಿದರು. ರಿಯೊನ್ ಮತು ವೆಲಿಕ ಕಾರ್ಯಕ್ರಮ ನಿರ್ವಹಿಸಿದರು. ಐವನ್ ಮಸ್ಕರೇನ್ಹಸ್, ಡಿಲ್ಲಾ ಕುಲಾಸೊ, ಲಿನೆಟ್ ಪಿರೇರಾ, ಗ್ರೇಸ್ ರೋಚ್ ಸಹಕರಿಸಿದ್ದರು.