- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

‘ವ್ಯಾಲೆಂಟೈನ್ ಡೇ’ ಬದಲು ಮಾತೃ-ಪಿತೃ ಪೂಜನೀಯ ದಿನವನ್ನು ಆಚರಿಸಲು ಮನವಿ

Hindu Jana Jagruti [1]ಮಂಗಳೂರು : ‘ವ್ಯಾಲೆಂಟೈನ್ ಡೇ’ ಸಂದರ್ಭದಲ್ಲಿ ನಡೆಯುವ ಅಯೋಗ್ಯ ಕೃತ್ಯಗಳನ್ನು ತಡೆಯಲು ಶಾಲಾ-ಮಹಾವಿದ್ಯಾಲಯದಲ್ಲಿ ಮಾತೃ-ಪಿತೃ ಪೂಜನೀಯ ದಿನವನ್ನು ಆಚರಿಸಲು ಪ್ರೋತ್ಸಾಸಿಸುವ ಬಗ್ಗೆ ದ.ಕ ಅಪರ ಜಿಲ್ಲಾಧಿಕಾರಿ ಶ್ರೀ. ಕುಮಾರ ಇವರಿಗೆ ಮನವಿ ನೀಡಲಾಯಿತು.

ದೇಶದಲ್ಲಿ 14 ಫೆಬ್ರವರಿಯಂದು ‘ವ್ಯಾಲೆಂಟೈನ್ ಡೇ’ ಹೆಸರಿನಲ್ಲಿ ಪ್ರೇಮಿಗಳ ದಿನವನ್ನು ಆಚರಿಸುವ ಪದ್ಧತಿಯು ಹೆಚ್ಚಳವಾಗಿದೆ. ದೇಶದಲ್ಲಿ ಈ ಮೂಲಕ ವ್ಯವಹಾರಿಕ ಲಾಭಗಳಿಸುವ ಉದ್ಧೇಶದಿಂದ ಪಾಶ್ಚಾತ್ಯರ ಈ ಅಂದಾನುಕರಣೆಯು ಯುವಕ-ಯುವತಿಯರ ಅನೈತಿಕತೆ ಮತ್ತು ಸ್ವೇಚ್ಚಾಚಾರಕ್ಕೆ ಕಾರಣವಾಗುತ್ತಿದೆ. ಪಾಶ್ಚಾತ್ಯರ ಈ ವ್ಯಾಲೆಂಟೈನ್ ದಿನ ಯುವತಿಯರನ್ನು ಪೀಡಿಸುವ ಮತ್ತು ಅವರಿಗೆ ಹಿಂಸೆ ನೀಡುವ, ಯುವತಿಯರಿಗೆ ಲೈಂಗಿಕ ಕಿರುಕುಳ ನೀಡುವ ದಿನವನ್ನಾಗಿ ಆಚರಿಸುತ್ತಿರುವುದು ಖೇಧದ ಸಂಗತಿಯಾಗಿದೆ. ಈ ದಿನ ಪಾರ್ಟಿಯ ಹೆಸರಿನಲ್ಲಿ ಯುವಕ ಯುವತಿಯರು ಮದ್ಯಪಾನ, ದೂಮಪಾನ ಮಾಡುವುದು, ಡ್ರಗ್ ಮಾಫಿಯಾದಂತಹ ಕೃತ್ಯಗಳಿಗೆ ಬಲಿಯಾಗುವುದು ಮುಂತಾದ ಅನುಚಿತ ಘಟನೆಗಳ ಪ್ರಮಾಣ ಹೆಚ್ಚಳವಾಗುತ್ತಿದೆ. ಅಷ್ಟೇಅಲ್ಲದೇ ಈ ದಿನ ಸಮಿಕ್ಷೆಯ ಪ್ರಕಾರ ಗರ್ಭನಿರೋಧಕ ಮಾರಾಟ ಅಧಿಕ ವಾಗುತ್ತಿರುವುದು ಅನೈತಿಕತೆ ಹೆಚ್ಚಾಗುತ್ತಿರುವುದರ ದ್ಯೋತಕವಾಗಿದೆ. ಈ ದಿನ ಹುಡುಗಿಯರನ್ನು ಆಕರ್ಷಿಸಲು ವೇಗದಿಂದ ವಾಹನ ಓಡಿಸುವುದು ಮುಂತಾದ ದುರ್ಘಟನೆಗಳ ಪ್ರಮಾಣವು ಹೆಚ್ಚಾಗುತ್ತಿದೆ. ಈ ವ್ಯಾಲೆಂಟೈನ್ ದಿನದ ಕಾರಣ ಶಾಲಾ-ಕಾಲೇಜುಗಳ ಶೈಕ್ಷಣಿಕ ವಾತವರಣ ಹಾಳಾಗುವುದರ ಜೊತೆಗೆ ಕಾನೂನು ಸುವ್ಯಸ್ಥೆಯ ಪ್ರಶ್ನೆಯು ನಿರ್ಮಾಣವಾಗುವ ಬೋಗವಾಧಿ ವೃತ್ತಿಯು ಹೆಚ್ಚಾಗಿ, ಸರಕಾರದ ಮೇಲೆ ಹೆಚ್ಚುವರಿ ಒತ್ತಡ ನಿರ್ಮಾಣವಾಗುತ್ತದೆ.

ಹಿಂದೂ ಜನಜಾಗೃತಿ ಸಮಿತಿಯ ಬೇಡಿಕೆಗಳು :
1.ವ್ಯಾಲೆಂಟೈನ್ ದಿನದಂದು ವಿಶೇಷ ಪೋಲಿಸ್ ದಳ ರಚಿಸಿ ಶಾಲಾ- ಕಾಲೇಜುಗಳಲ್ಲಿ ಅನುಚಿತ ಕೃತ್ಯ ಮಾಡುವವರ ಮೇಲೆ, ವೇಗದಿಂದ ವಾಹನ ಓಡಿಸುವವರ ಮೇಲೆ ಕ್ರಮ ಜರುಗಿಸುವುದು

2. ಪ್ರೇಮಿಗಳ ದಿನದಂದು ನಡೆಯುವ ತಪ್ಪು ಪ್ರಕಾರಗಳನ್ನು ಗಮನದಲ್ಲಿರಿಸಿ ಶಾಲಾ-ಪ್ರಾಚಾರ್ಯರ ಬೈಠೆಕ್ ತೆಗೆದುಕೊಂಡು ಅವರಿಗೆ ಮಾತೃಪಿತೃ ಪೂಜನೀಯ ದಿನ ಆಚರಿಸಲು ಈ ನಿಮಿತ್ತ ಲಿಖಿತ ನಿರ್ದೇಶನ ನೀಡಬೇಕೆಂದು ಮನವಿಯಲ್ಲಿ ವಿನಂತಿಸಲಾಗಿದೆ.

ಮನವಿ ನೀಡುವ ವೇಳೆ ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಮಾಂಗೀರಾಮ್, ಶ್ರೀ ಯೋಗೀಶ್, ಶ್ರೀ. ಪ್ರಭಾಕರ್ ನಾಯ್ಕ್, ಶ್ರೀ ಉಪೇಮದ್ರ ಆಚಾರ್ಯ, ಸೌ. ಪ್ರಮೀಳಾ ಮೊದಲಾದವರು ಉಪಸ್ಥಿತರಿದ್ದರು.