ಮಂಗಳವಾರ ಕುಡುಪು ಅನಂತ ಪದ್ಮನಾಭ ದೇವಸ್ಥಾನದಲ್ಲಿ 108 ಮಹಾ ಆಶ್ಲೇಷ ಬಲಿ ಪೂಜೆ

5:59 PM, Monday, February 19th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

kudupu-ananthaಮಂಗಳೂರು : ದಕ್ಷಿಣ ಭಾರತದ ಪ್ರಸಿದ್ಧ ನಾಗಾರಾಧಾನ ಕ್ಷೇತ್ರ ಕುಡುಪು ಅನಂತ ಪದ್ಮನಾಭ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ಸಂಭ್ರಮ ಸಡಗರದಿಂದ ನಡೆಯುತ್ತಿದ್ದು ಇಂದು ಪಂಚಮಿಯ ವಿಶೇಷ ಪರ್ವದಿನ. ಕ್ಷೇತ್ರದಲ್ಲಿ ನಾಗವನದಲ್ಲಿರುವ ನಾಗನ ಶಿಲಾ ಬಿಂಬಗಳಿಗೆ ಕಲಾಭಿಷೇಕ, ಪಂಚಾಮೃತ ಅಭಿಷೇಕ, ಕ್ಷೀರಾಭಿಷೇಕ ನಡೆದು ತಂಬಿಲ ಸೇವೆಯೊಂದಿಗೆ ವಿಶಷ ಮಹಾಪೂಜೆ ನಾಗವನದಲ್ಲಿ ನಡೆಯಲಿದೆ. ಮಧ್ಯಾಹ್ನ ಅನಂತ ಪದ್ಮನಾಭ ದೇವರಿಗೆ ವಿಶೇಷ ಮಹಾಪೂಜೆ ಜರಗಿ ಮಹಾ ಅನ್ನಸಂತರ್ಪಣೆ ನಡೆಯಲಿದೆ.

ಕ್ಷೇತ್ರ ಬ್ರಹ್ಮಕಲಶೋತ್ಸವ ಸಮಿತಿ ಹಾಗೂ ಜೀರ್ಣೋಧ್ದಾರ ಸಮಿತಿಯ ವತಿಯಿಂದ ಸಂಜೆ 5.30 ಕ್ಕೆ ನಾಗದೇವರಿಗೆ ಅತೀ ಪ್ರೀಯವೆನಿಸಿದ ಮಹಾನ್ 108 ಆಶ್ಲೇಷ ಬಲಿ ಪೂಜೆಯು ನಾಗದೇವರ ಪ್ರೀತ್ಯರ್ಥ ದೇವಳದ ಪ್ರಾಂಗಣದಲ್ಲಿ ಹಾಗೂ ನಾಗವನದಲ್ಲಿ ನಡೆಯಲಿದೆ. ಏಕಕಾಲದಲ್ಲಿ 108 ಪ್ರತ್ಯೇಕ ಮಂಡಲ ಹಾಕಿ, 108 ಆಶ್ಲೇಷ ಬಲಿ ಪೂಜೆಯು 108 ವೈದಿಕರಿಂದ ಹಾಗೂ ತಂತ್ರಿಗಳಾದ ಕೆ. ನರಸಿಂಹ ತಂತ್ರಿ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಸಂಚಾಲಕರಾದ ಕೆ. ಕೃಷ್ಣರಾಜ ತಂತ್ರಿಯವರ ನೇತೃತ್ವದಲ್ಲಿ ನಡೆಯಲಿದೆ.

ಪೂಜೆ ಮುಕ್ತಾಯಗೊಂಡ ನಂತರ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಹಿಂದಿನ ಅರ್ಚಕರಾದ ಕೇಶವ ಜೋಗಿತ್ತಾಯ ಹಾಗೂ ಸಗ್ರಿ ವಾಸುಕೀ ನಾಗರಾಜ ದೇವಸ್ಥಾನದ ಆಡಳಿತ ಮೊಕ್ತೇಸರರಾದ ನಾಗಪಾತ್ರಿ ಗೋಪಾಲಕೃಷ್ಣ ಸಾಮಗರ ಮುಂದಾಳತ್ವದಲ್ಲಿ ಎಲ್ಲಾ ಆಶ್ಲೇಷಾಬಲಿ ಮಂಡಲದಿಂನ ಪ್ರಸಾದ ತೆಗೆದು ಅನಂತ ಪದ್ಮನಾಭ ದೇವರ ಎದುರಿನಲ್ಲಿ ಪ್ರಾರ್ಥಿಸಿ ವಾದ್ಯ ಮೇಳದೊಂದಿಗೆ ನಾಗವನಕ್ಕೆ ತೆರಳಿ ಅಲ್ಲಿ ವಿಶೇಷ ೧೦೮ ಮಹಾ ಆಶ್ಲೇಷಾ ಬಲಿ ಪೂಜೆಯ ಪ್ರಸಾದ ಹಾಕಿ ನಂತರ ಭಗವತ್‌ಭಕ್ತರಿಗೆ ಪ್ರಸಾದ ವಿತರಣೆ ನಡೆಯಲಿಕ್ಕಿದೆ.

ರಾತ್ರಿ ಪೂಜೆಯ ನಂತರ ದೇವರ ಬಲಿ ಉತ್ಸವ ನಡೆದು ಮಹಾ ಅನ್ನ ಸಂತರ್ಪಣೆ ನಡೆಯಲಿದೆ ಎಂದು ಆಡಳಿತ ಮಂಡಳಿ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English