ಆ್ಯಗ್ನೆಸ್ ಕಾಲೇಜು ಬಳಿ ಬಸ್ಸು ತಂಗುದಾಣ ನಿರ್ಮಾಣಕ್ಕೆ ಆಗ್ರಹಿಸಿ ಧರಣ

1:45 PM, Thursday, February 22nd, 2018
Share
1 Star2 Stars3 Stars4 Stars5 Stars
(5 rating, 1 votes)
Loading...

st-Agnesಮಂಗಳೂರು: ನಗರದ ಸಂತ ಆ್ಯಗ್ನೆಸ್ ವಿದ್ಯಾಸಂಸ್ಥೆಗಳ ಬಳಿ ಬಸ್ಸು ತಂಗದಾಣವನ್ನು ನಿರ್ಮಿಸಲು ಒತ್ತಾಯಿಸಿ ಮಂಗಳೂರಿನ ಆಡಳಿತದಲ್ಲಿ ಸಮುದಾಯದ ಭಾಗವಹಿಸುವಿಕೆ ಸಂಘಟನೆ ನೇತೃತ್ವದಲ್ಲಿ ಇಂದು ಬೆಳಗ್ಗೆ ಧರಣಿ ನಡೆಯಿತು.

ಆ್ಯಗ್ನೆಸ್ ವಿದ್ಯಾಸಂಸ್ಥೆಯ ಎದುರಿನ ಹಳೆ ಬಸ್ಸು ತಂಗುದಾಣದಲ್ಲಿ ನಡೆದ ಧರಣಿಯನ್ನು ಉದ್ದೇಶಿಸಿ ಮಾತನಾಡಿದ ಸಂಘಟನೆಯ ಜೆರಾರ್ಡ್ ಟವರ್ಸ್, ಕಳೆದ ಸುಮಾರು 60 ವರ್ಷಗಳಿಂದ ಇದ್ದ ಬಸ್ಸು ತಂಗುದಾಣವನ್ನು ಕಾಣದ ಕೈಗಳು ನಗರ ಪಾಲಿಕೆಯ ಜತೆ ಸೇರಿ ಕೆಡವಿದೆ. ಇದರಿಂದಾಗಿ ಕಳೆದ ನಾಲ್ಕು ತಿಂಗಳಿನಿಂದ ಸಂಸ್ಥೆ ಯ ಸಾವಿರಾರು ವಿದ್ಯಾರ್ಥಿಗಳು ಹಾಗೂ ಜನರಿಗೆ ಬಸ್ಸು ತಂಗುದಾಣವಿಲ್ಲದೆ ತೊಂದರೆಯಾಗಿದೆ ಎಂದು ಆಕ್ಷೇಪಿಸಿದರು.

st-Agnes-2ಸಂಬಂಧಪಟ್ಟವರು ಈ ಬಗ್ಗೆ ಕೂಡಲೇ ಗಮನ ಹರಿಸದಿದ್ದರೆ ಕಾನೂನಾತ್ಮಕ ಹೋರಾಟ ನಡೆಸುವುದಾಗಿ ಅವರು ಎಚ್ಚರಿಸಿದರು.

ಧರಣಿಯಲ್ಲಿ ಆಪ್ ಮುಖಂಡ ರಾಜೇಂದ್ರ ಕುಮಾರ್, ನಾರಾಯಣ್, ಅಜಯ್ ಡಿಸಿಲ್ವ ಮತ್ತಿತರರು ಭಾಗವಹಿಸಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English