ಪ್ರಾಧ್ಯಾಪಕಿ ಡಾ. ದೇವಕಿ ಅವರಿಗೆ ಮುಖ್ಯಮಂತ್ರಿ ಪ್ರಶಸ್ತಿ ಪದಕ ಪ್ರದಾನ

6:24 PM, Thursday, February 22nd, 2018
Share
1 Star2 Stars3 Stars4 Stars5 Stars
(5 rating, 1 votes)
Loading...

dr-devakiಮಂಗಳೂರು: ಎನ್‌ಸಿಸಿಯ ಮಂಗಳೂರು ವಿಭಾಗದ ಲೆಫ್ಟಿನೆಂಟ್‌‌, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ನಾತಕೋತ್ತರ ಅಧ್ಯಯನ ಕೇಂದ್ರದ ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ದೇವಕಿ ಕೆ.ಕೆ. ಅವರ ಸೇವಾ ಬದ್ಧತೆ ಗುರುತಿಸಿ ಮುಖ್ಯಮಂತ್ರಿ ಪ್ರಶಸ್ತಿ ಪದಕ ನೀಡಲಾಗಿದೆ.

ಗಣರಾಜ್ಯೋತ್ಸವ ಸಂದರ್ಭ ದೆಹಲಿ ಕಾರ್ಯಕ್ರಮದಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದ ಪ್ರತಿಭಾನ್ವಿತರ ತಂಡದೊಂದಿಗಿನ ಅವರ ಕ್ರಿಯಾಶೀಲತೆ ಮತ್ತು ರಚನಾತ್ಮಕ ಪಾಲ್ಗೊಳ್ಳುವಿಕೆಯನ್ನು ಪರಿಗಣಿಸಿ ಪ್ರಶಂಸಾ ಪದಕ ನೀಡಲಾಗಿದೆ.

‘ಕರ್ನಾಟಕದ ಎನ್‌ಸಿಸಿಯ ಪ್ರತಿಷ್ಠೆಯನ್ನು ಹೆಚ್ಚಿಸುವಲ್ಲಿ ನಿಮ್ಮ ಕೊಡುಗೆ ಮಹತ್ವದ್ದು. ಆ ಮೂಲಕ ರಾಜ್ಯದ ಹಿರಿಮೆಯನ್ನು ವಿಸ್ತರಿಸಿದ್ದೀರಿ’ ಎಂಬ ಒಕ್ಕಣೆಯೊಂದಿಗೆ ಮುಖ್ಯಮಂತ್ರಿ ಪ್ರಶಂಸೆ ವ್ಯಕ್ತಪಡಿಸಿರುವ ಪ್ರಮಾಣ ಪತ್ರ ಮತ್ತು ಪದಕವನ್ನು ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಯಿತು.

ಡಾ. ದೇವಕಿ ಈ ಹಿಂದೆ 2014 ಮತ್ತು 2015ರಲ್ಲಿ ಡೆಪ್ಯುಟಿ ಡೈರೆಕ್ಟರ್ ಜನರಲ್ ಪ್ರಶಸ್ತಿಗೂ ಭಾಜನರಾಗಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English