ಬೆಂಗಳೂರು ಪೊಲೀಸರಿಂದ ಸುನಾಮಿ ಕಿಟ್ಟಿ ಬಂಧನ

2:57 PM, Saturday, March 3rd, 2018
Share
1 Star2 Stars3 Stars4 Stars5 Stars
(5 rating, 1 votes)
Loading...

sunami-kittyಬೆಂಗಳೂರು: ಕಿಡ್ನಾಪ್, ಕೊಲೆ ಬೆದರಿಕೆ ಮತ್ತು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂಡಿಯನ್‌ ರಿಯಾಲಿಟಿ ಶೋ ವಿನ್ನರ್‌ ಸುನಾಮಿ ಕಿಟ್ಟಿ ಮತ್ತು ಆತನ ಸ್ನೇಹಿತರನ್ನು ಬೆಂಗಳೂರಿನ ಜ್ಞಾನಭಾರತಿ ಪೊಲೀಸರು ಬಂಧಿಸಿದ್ದಾರೆ.

ಸುನಾಮಿ ಕಿಟ್ಟಿ ಗೆಳೆಯ ಸುನಿಲ್ ಪತ್ನಿ ತೌಶೀಕ್ ಎಂಬುವನನ್ನು ಪ್ರೀತಿಸುತ್ತಿದ್ದು ಇಬ್ಬರೂ ಮರಿಯಪ್ಪನ ಪಾಳ್ಯದಲ್ಲಿರುವ ರೆಸ್ಟೋರೆಂಟ್‌‌ಗೆ ಆಗಾಗ್ಗೆ ಊಟಕ್ಕೆಂದು ಹೋಗುತ್ತಿದ್ದರು. ರೆಸ್ಟೋರೆಂಟ್‌‌ನಲ್ಲಿ ಕೆಲಸ ಮಾಡುತ್ತಿದ್ದ ಗಿರೀಶ್‌‌‌ಗೆ ತೌಶೀಕ್ ಮತ್ತು ಸುನಿಲ್ ಪತ್ನಿ ಪರಿಚಿತರಾಗಿದ್ದರು. ಫೆಬ್ರವರಿ 25 ರಂದು ತೌಶೀಕ್ ಮತ್ತು ಸುನಿಲ್ ಪತ್ನಿ ಊಟಕ್ಕೆಂದು ಅದೇ ರೆಸ್ಟೋರೆಂಟ್‌‌‌ಗೆ ಹೋಗಿದ್ದಾರೆ. ಆದರೆ ಸ್ವಲ್ಪ ಹೊತ್ತಿನಲ್ಲೇ ಊಟ ಪೂರ್ತಿಯಾಗಿ ಮಾಡದೇ ಏನೋ ಸಮಸ್ಯೆಯಾಗಿದೆ ಎಂದು ಬಿಲ್ ಕೂಡಾ ಕೊಡದೆ ಎದ್ದು ಹೋಗಿದ್ದರು.

ಗಿರೀಶ್‌‌ಗೆ ಇಬ್ಬರ ಪರಿಚಯ ಇದ್ದಿದ್ದರಿಂದ ಬಿಲ್ ಆಮೇಲೆ ಪಡೆದರಾಯಿತು ಎಂದು ಸಮ್ಮನಾಗಿದ್ದ. ಆ ನಂತರ ಪೋನ್ ಮಾಡಿ ವಿಚಾರಿಸಿ ದಾಗ ಸ್ವಲ್ಪ ಸಮಸ್ಯೆಯಾಗಿದೆ. ಯಾವಾಗಲಾದರೂ ಬಂದು ಬಿಲ್ ಕೊಡುತ್ತೇನೆ ಎಂದು ತೌಶೀಕ್ ಹೇಳಿದ್ದ. ಇದೇ ಸಮಯದಲ್ಲಿ ಸುನಿಲ್‌‌ಗೆ ತನ್ನ ಪತ್ನಿ ಯಾರೊಂದಿಗೋ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾಳೆ ಅನ್ನೋ ಅನುಮಾನ ಶುರುವಾಗಿತ್ತು. ಸುನಿಲ್ ಪತ್ನಿ ಕುಟೀರ ಬಾರ್‌‌‌‌ಗೆ ಬಂದಿರುವ ವಿಚಾರ ತಿಳಿದು ಹೇಗೋ ಗಿರೀಶ್‌ನ ನಂಬರ್ ಸಂಪಾದಿಸಿ ಆತನಿಗೆ ಹಲವು ಬಾರಿ ಪೋನ್ ಮಾಡಿದ್ದ. ಆದ್ರೆ ತೌಶೀಕ್ ಸೂಚನೆ ಹಿನ್ನೆಲೆಯಲ್ಲಿ ಗಿರೀಶ್ ಪೋನ್ ಪಿಕ್ ಮಾಡಿರಲಿಲ್ಲ.

sunami-kitty-2ಇದಾದ ಬಳಿಕ ಫೆಬ್ರವರಿ 29 ರ ಮಧ್ಯಾಹ್ನ ಸುನಾಮಿ ಕಿಟ್ಟಿ, ಸುನಿಲ್‌‌ ಹಾಗೂ ಇನ್ನಿತರರು ಭುವನೇಶ್ವರಿ ನಗರದ ಬಳಿ ಗಿರೀಶ್‌‌‌‌‌‌‌‌‌‌‌‌‌‌‌ನನ್ನು ಕಾರೊಂದರಲ್ಲಿ ಕಿಡ್ನಾಪ್ ಮಾಡಿ ಹೊರಮಾವು ಬಳಿಯ ಮನೆಯೊಂದರಲ್ಲಿ ಕೂಡಿಹಾಕಿ ಹಲ್ಲೆ ನಡೆಸಿದ್ದರು ಎಂದು ಆರೋಪಿಸಲಾಗಿದೆ.

ಈ ವೇಳೆ ಗಿರೀಶ್ ತನಗೆ ತಿಳಿದಿರುವ ವಿಚಾರವನ್ನೆಲ್ಲಾ ಅವರ ಬಳಿ ಹೇಳಿದ್ದಾನೆ. ಗಿರೀಶ್ ಕೈಯಿಂದ ತೌಶೀಕ್‌‌‌‌ಗೆ ಫೋನ್ ಮಾಡಿಸಿ ಆದಷ್ಟು ಬೇಗ ಬಾಕಿ ಇರುವ ಬಿಲ್ ನೀಡಿ ಹೋಗಬೇಕೆಂದು ಹೇಳುವಂತೆ ಬೆದರಿಸಿದ್ದಾರೆ. ರಾತ್ರಿ ಹನ್ನೊಂದು ಗಂಟೆ ಸುಮಾರಿಗೆ ಗೊರಗುಂಟೆ ಪಾಳ್ಯದ ಸಮೀಪ ತೌಶೀಕ್‌‌‌‌ನನ್ನೂ ಕರೆಸಿಕೊಂಡು ಕಿಡ್ನಾಪ್ ಮಾಡಿ ಅವನಿಗೂ ಅದೇ ರೀತಿ ಹಿಂಸೆ ನೀಡಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.

ಈ ವೇಳೆ ಸುನಿಲ್‌‌‌ ಮತ್ತು ಸುನಾಮಿ ಕಿಟ್ಟಿ ಪಿಸ್ತೂಲ್ ಹಿಡಿದು ಗುಂಡು ಹಾರಿಸುವುದಾಗಿ ತೌಶೀಕ್‌‌‌ಗೆ ಬೆದರಿಸಿದರು ಆಗ ತೌಶೀಕ್ ತಾನು ಸುನಿಲ್ ಪತ್ನಿಯನ್ನು ಪ್ರೀತಿಸುತ್ತಿರುವುದಾಗಿ ಒಪ್ಪಿಕೊಂಡಿದ್ದ. ಆದರೆ ಆಕೆಗೆ ಮದುವೆಯಾಗಿದೆ ಅನ್ನೋದು ಗೊತ್ತಿರಲಿಲ್ಲ ಎಂದೂ ಹೇಳಿದ್ದ. ಇದಾದ ನಂತರ ಆರೋಪಿಗಳು ತೌಶೀಕ್ ಮತ್ತು ತನ್ನ ಮೇಲೆ ಮನಬಂದಂತೆ ಥಳಿಸಿ ಈ ವಿಚಾರವನ್ನು ಪೊಲೀಸರಿಗೆ ತಿಳಿಸದಂತೆ ಬೆದರಿಕೆ ಹಾಕಿದ್ದರೆಂದು ಗಿರೀಶ್ ದೂರು ನೀಡಿದ್ದಾರೆ.

ದೂರಿನ ಆಧಾರದ ಮೇಲೆ ಪೊಲೀಸರು ಸುನಾಮಿ ಕಿಟ್ಟಿ, ಸಂತೋಷ್, ಅರ್ಜುಬ್ ಮತ್ತು ಯೋಗೇಂದ್ರ ಎಂಬುವರನ್ನು ಬಂಧಿಸಿದ್ದಾರೆ. ಪ್ರಮುಖ ಆರೋಪಿ ಸುನಿಲ್‌‌‌ ತಲೆಮರೆಸಿಕೊಂಡಿದ್ದು, ಆತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English