ಸ್ಯಾಂಡಲ್‌ವುಡ್ ನಟಿ ಹೆಸರಲ್ಲಿ ನಕಲಿ ಖಾತೆ ತೆರೆದು ವಂಚನೆ

1:54 PM, Friday, April 6th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

ashwini-gowdaಬೆಂಗಳೂರು: ಸ್ಯಾಂಡಲ್‌ವುಡ್ ನಟಿಯ ಹೆಸರಿನಲ್ಲಿ ನಕಲಿ ಖಾತೆ ತೆರೆದು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

ನಟಿ ಅಶ್ವಿನಿ ಗೌಡ ಈ ಬಗ್ಗೆ ಮಹಾಲಕ್ಷ್ಮೀ ಪುರಂ ಪೊಲೀಸ್ ಠಾಣೆಯಲ್ಲಿ ಮಾರ್ಚ್ 31 ರಂದು ದೂರು ದಾಖಲಿಸಿದ್ದಾರೆ.

ಮಹಾಲಕ್ಷ್ಮೀಪುರಂನಲ್ಲಿರುವ ಜನತಾ ಕೋ ಆಪರೇಟೀವ್ ಬ್ಯಾಂಕ್‌ನಲ್ಲಿ ನಟಿ ಅಶ್ವಿನಿ ಗೌಡ ಹೆಸರಿನಲ್ಲಿ ಉಷಾ ಎಂಬುವರು ನಕಲಿ ಖಾತೆ ತೆರೆದಿದ್ದರು ಎನ್ನಲಾಗಿದೆ. ಖಾತೆಯ ಆಧಾರದ ಮೇಲೆ ಬ್ಯಾಂಕ್‌ನಿಂದ ಚೆಕ್‌ಗಳನ್ನು ಪಡೆಯಲಾಗಿತ್ತು ಎಂದು ಆರೋಪಿಸಲಾಗಿದೆ.

ಐದು ಲಕ್ಷ ರೂ. ನ ಚೆಕ್ ಅನ್ನು ಬರೆದು ಅದೇ ಬ್ಯಾಂಕ್‌ಗೆ ಹಾಕಿ ಚೆಕ್‌ ಬೌನ್ಸ್ ಆಗುವಂತೆ ನೋಡಿಕೊಳ್ಳಲಾಗಿತ್ತು. ಅಶ್ಬಿನಿ ಗೌಡ ಹೆಸರಿನಲ್ಲಿ ಅಕೌಂಟ್ ಸೃಷ್ಟಿಸಿ ಮತ್ತೆ ಅವರದ್ದೇ ಹೆಸರಿನ ಚೆಕ್ ಅನ್ನು ಬರೆದು ಬೌನ್ಸ್ ಮಾಡಿಸಿ ಉಷಾ ಅವರು ಅಶ್ವಿನಿ ಗೌಡ ವಿರುದ್ಧ 20 ನೇ ಎಸಿಎಂಎಂ ಕೋರ್ಟ್‌ನಲ್ಲಿ ಮೊಕದ್ದಮೆ ಕೂಡ ದಾಖಲಿಸಿದ್ದರು. ಆದ್ರೆ, ಪ್ರಕರಣದ ವಿಚಾರಣೆಗೆ ಉಷಾ ಹಾಜರಾಗದ್ದಕ್ಕೆ ಕೋರ್ಟ್ ಈ ಕೇಸ್ ಅನ್ನು ವಜಾಗೊಳಿಸಿತ್ತು.

ಈ ಹಿನ್ನೆಲೆಯಲ್ಲಿ ತನ್ನ ಹೆಸರನ್ನು ದುರುಪಯೋಗ ಪಡಿಸಿಕೊಂಡು ಬ್ಯಾಂಕ್ ಖಾತೆ ತೆರೆದ ಉಷಾ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ನಟಿ ಅಶ್ವಿನಿ ಗೌಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಈ ಸಂಬಂಧ ಉಷಾ ವಿರುದ್ಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 420, 465,471 ಮತ್ತು 468 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English