ಕಾರ್ಕಳ ಬಳಿ ಭೀಕರ ಅಪಘಾತ:ತಾಯಿ-ಮಗ ಸ್ಥಳದಲ್ಲೇ ಸಾವು

1:26 PM, Monday, April 9th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

karkalaಮಂಗಳೂರು: ಇನ್ನೋವಾ ಹಾಗೂ ಓಮ್ನಿ ಕಾರ್‌ ನಡುವೆ ಡಿಕ್ಕಿ ಸಂಭವಿಸಿ ಇಬ್ಬರು ಸ್ಥಳದಲ್ಲೇ ಸಾವಿಗೀಡಾಗಿರುವ ದಾರುಣ ಘಟನೆ ಕಾರ್ಕಳ ತಾಲೂಕಿನ ನೆಲ್ಲಿಕಾರು ಎಂಬಲ್ಲಿ ನಡೆದಿದೆ.

ತೀರ್ಥಹಳ್ಳಿಯ ಸೋಮಶೇಖರ್ (45) ಹಾಗೂ ತಾಯಿ‌ ರತ್ನಮ್ಮ (70) ಸಾವನಪ್ಪಿದವರು. ಪ್ರವಾಸ ನಿಮಿತ್ತ ತೆರಳುತ್ತಿದ್ದ 9 ಮಂದಿ ಇದ್ದ ಓಮ್ನಿ ಕಾರು ಹಾಗೂ 6 ಮಂದಿ ಪ್ರಯಾಣಿಕರಿದ್ದ ಇನ್ನೋವಾ ಕಾರಿನ ನಡುವೆ ಡಿಕ್ಕಿ ಸಂಭವಿಸಿದೆ.

ದುರ್ಘಟನೆಯಲ್ಲಿ ಇಬ್ಬರು ಮೃತರಾದರೆ ಹಲವರಿಗೆ ಗಾಯವಾಗಿದೆ. ಮೃತದೇಹವನ್ನು ಮೂಡಬಿದ್ರೆ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೂಡಬಿದ್ರೆ ಠಾಣೆಯಲ್ಲಿ ಪ್ರಕರಣ‌ ದಾಖಲಾಗಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English