ಗಂಡನ ವಿರುದ್ಧ ಪತ್ನಿಯ ದೂರು: ಕ್ರಿಕೆಟರ್‌ ಶಮಿಗೆ ಸಮನ್ಸ್‌ ಜಾರಿ ಮಾಡಿದ ಪೊಲೀಸ್‌!

4:21 PM, Tuesday, April 17th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

mohammed-shamiಕೋಲ್ಕತ್ತಾ: ಟೀಂ ಇಂಡಿಯಾ ಕ್ರಿಕೆಟರ್ ಮೊಹಮ್ಮದ್ ಶಮಿ ಆತನ ಪತ್ನಿ ಹಸಿನ್ ಜಹಾನ್‍ರ ನಡುವೆ ಉಂಟಾಗಿರುವ ಕೌಟುಂಬಿಕ ಬಿಕ್ಕಟ್ಟು ಎಲ್ಲರಿಗೂ ಗೊತ್ತಿರುವುದೇ. ಶಮಿ ತನ್ನ ಗರ್ಲ್‌ಫ್ರೆಂಡ್ಸ್ ಜತೆಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಷ್ಟೇ ಅಲ್ಲದೆ, ತನಗೆ ಪ್ರತಿನಿತ್ಯ ಚಿತ್ರಹಿಂಸೆ ನೀಡಿದ್ದಾರೆ ಎಂದು ಕೋಲ್ಕತ್ತಾ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ ಕೋಲ್ಕತ್ತಾ ಪೊಲೀಸರು ಮೊಹಮ್ಮದ್‌ ಶಮಿಗೆ ಸಮನ್ಸ್‌‌ ಜಾರಿ ಮಾಡಿದ್ದು, ನಾಳೆ 2ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದಾರೆ. ಇದರ ಮಧ್ಯೆ ಗಂಡನ ವಿರುದ್ಧ ಪತ್ನಿ ಜಹಾನ್‌ ಫಿಕ್ಸಿಂಗ್‌ ಆರೋಪ ಸಹ ಮಾಡಿದ್ದಳು. ಆದರೆ ಇದರ ವಿಚಾರಣೆ ನಡೆಸಿದ್ದ ಬಿಸಿಸಿಐ ಕ್ಲಿನ್‌ ಚಿಟ್‌‌ ನೀಡಿತ್ತು.

ತಿಂಗಳಿಗೆ 10 ಲಕ್ಷ ರೂ. ಪರಿಹಾರ ಕೇಳಿ ನ್ಯಾಯಾಲಯದ ಮೊರೆ ಹೋದ ಶಮಿ ಪತ್ನಿ

ಇನ್ನು ಪತ್ನಿ ಹಸೀನ್‌ ಜಹಾನ್‌ ಮಧ್ಯಾವಧಿ ಪರಿಹಾರವಾಗಿ ತನಗೆ ತಿಂಗಳಿಗೆ 7 ಲಕ್ಷ ರೂ. ಮತ್ತು ಮಗುವಿಗೆ ತಿಂಗಳಿಗೆ 3 ಲಕ್ಷ ರೂ. ಸೇರಿದಂತೆ ಒಟ್ಟು 10 ಲಕ್ಷ ರೂ. ಮಾಸಿಕ ಪರಿಹಾರವನ್ನು ಕೊಡಿಸಬೇಕೆಂದು ನ್ಯಾಯಾಲಯದ ಮೊರೆ ಹೋಗಿದ್ದಾಳೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English