ಕಾಮನ್ ವೆಲ್ತ್ ನಲ್ಲಿ ಬೆಳ್ಳಿ ಪದಕ ಜಯಿಸಿದ ಗುರುರಾಜ್ ಪೂಜಾರಿಗೆ ಹುಟ್ಟೂರಿನಲ್ಲಿ ಸಮ್ಮಾನ

1:06 PM, Friday, April 20th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

kundapurಕುಂದಾಪುರ: ಆಸ್ಟ್ರೆಲೀಯಾದಲ್ಲಿ ನಡೆದ ಗೋಲ್ಡ್ಕೋಸ್ಟ್ ಕಾಮನ್ವೆಲ್ತ್’ ಗೇಮ್ಸ್ ನಲ್ಲಿ ಭಾರತದ ಮೊದಲ ಬೆಳ್ಳಿತಾರೆಯಾಗಿ ಮೂಡಿಬಂದ ಕುಂದಾಪುರ ತಾಲೂಕಿನ ಚಿತ್ತೂರಿನ ಗುರುರಾಜ್ ಪೂಜಾರಿ ಅವರಿಗೆ ಕುಂದಾಪುರದ ಹರ್ಕ್ಯುಲಸ್ ಜಿಮ್ ವತಿಯಿಂದ ಗುರುವಾರ ಕುಂದಾಪುರ ಉಪ ವಿಭಾಗದ ಸಹಾಯಕ ಆಯುಕ್ತ ಟಿ. ಭೂಬಾಲನ್ ಅಭಿನಂದನೆ ಸಲ್ಲಿಸಿದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಗುರುರಾಜ್, ನಾನು ಈ ಮಟ್ಟದ ಸಾಧನೆ ಮಾಡಲು ಹೆತ್ತವರು, ಗುರುಗಳು, ಊರವರು, ರಾಜ್ಯದ ಜನರ ಆಶೀರ್ವಾದವೇ ಕಾರಣ. ಎಲ್ಲರ ಪ್ರೋತ್ಸಾಹಕ್ಕೆ ಆಭಾರಿಯಾಗಿದ್ದೇನೆ. ನಿಮ್ಮೆಲ್ಲರ ಆಶೀರ್ವಾದವಿದ್ದರೆ ಮುಂದೆಯೂ ಇನ್ನಷ್ಟು ಪದಕಗಳನ್ನು ದೇಶಕ್ಕಾಗಿ ಗೆದ್ದು ತರುತ್ತೇನೆ ಎಂದವರು ಹೇಳಿದರು.

kundapur-2ಕುಂದಾಪುರ ಉಪ ವಿಭಾಗದ ಸಹಾಯಕ ಆಯುಕ್ತ ಟಿ. ಭೂಬಾಲನ್ ಅಭಿನಂದಿಸಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಬೆಳೆದ ಪ್ರತಿಭೆ, ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೆ ಕೀರ್ತಿ ತಂದಿರುವುದು ಕುಂದಾಪುರದ ಹೆಮ್ಮೆ. ನಿಜಕ್ಕೂ ಇದೊಂದು ಅದ್ಭುತ ಸಾಧನೆ. ನಾವೆಲ್ಲ ಸಂಭ್ರಮಿಸಬೇಕಾದ ಕ್ಷಣ ಎಂದು ಹೇಳಿದರು.

ಕುಂದಾಪುರ ಎಸ್ಐ ಹರೀಶ್ ಆರ್., ರಮೇಶ್ ಕಾಂಚನ್, ವಿಠಲ, ಉದ್ಯಮಿ ಶ್ರೀಶನ್, ಮಹಮ್ಮದ್ ಆರೀಫ್, ಗುರುರಾಜ್ ತಂದೆ ಮಹಾಬಲ ಪೂಜಾರಿ, ಮೊದಲ ದೈಹಿಕ ಶಿಕ್ಷಣ ಶಿಕ್ಷಕ ಸುಕೇಶ್ ಹೆಗ್ಡೆ, ಮತ್ತಿತರರು ಉಪಸ್ಥಿತರಿದ್ದರು. ಹರ್ಕ್ಯುಲಸ್ ಜಿಮ್ನ ಸತೀಶ್ ಕಾರ್ಯಕ್ರಮ ನಿರ್ವಹಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English