ವೀಲ್ ಲಾಕ್ ಹಾಕಿದ್ದ ಕಾರು ಕ್ಷಣದಲ್ಲಿ ಮಾಯ… ಚಾಲಕನ ಕರಾಮತ್ತಿಗೆ ಬೆಚ್ಚಿದ ಪೊಲೀಸರು

4:44 PM, Monday, April 23rd, 2018
Share
1 Star2 Stars3 Stars4 Stars5 Stars
(No Ratings Yet)
Loading...

meel-laakಮಂಗಳೂರು: ಟ್ರಾಫಿಕ್ ನಿಯಮವನ್ನು ಉಲ್ಲಂಘಿಸಿ ನೋ ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ್ದ ಕಾರಿಗೆ ಟ್ರಾಫಿಕ್ ಪೊಲೀಸರು ವೀಲ್ ಲಾಕ್ ಹಾಕಿದರೆ, ಕಾರಿನ ಮಾಲಕ ವೀಲ್ ಲಾಕ್‌ ಅನ್ನು ತೆಗೆದು ಬೇರೆ ಚಕ್ರವನ್ನು ಹಾಕಿ ಪರಾರಿಯಾದ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಲೈಟ್ ಹೌಸ್ ಹಿಲ್ ರಸ್ತೆಯಲ್ಲಿ ಎ.17 ರಂದು ಮಧ್ಯಾಹ್ನ 1.30 ಕ್ಕೆ ಕಾರೊಂದನ್ನು ನೋ ಪಾರ್ಕಿಂಗ್ ಜಾಗದಲ್ಲಿ ನಿಲ್ಲಿಸಲಾಗಿತ್ತು. ಇದಕ್ಕೆ ಸಂಚಾರ ಪೊಲೀಸರು ವೀಲ್ ಲಾಕ್ ಮಾಡಿ ತೆರಳಿದ್ದರು. ಆ ಬಳಿಕ ಅಲ್ಲಿಗೆ ಬಂದ ಚಾಲಕ ವೀಲ್ ಲಾಕ್ ಸಹಿತ ಟೈರ್ ತೆಗೆದು ಅದಕ್ಕೆ ಬೇರೆ ಟಯರ್ ಹಾಕಿ ಪರಾರಿಯಾಗಿದ್ದಾನೆ.

ಪೊಲೀಸರು ಮತ್ತೆ ಅದೇ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದಾಗ ಕಾರು ನಾಪತ್ತೆಯಾಗಿತ್ತು. ಈ ಬಗ್ಗೆ ನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English