ಮಂಗಳೂರು: ನಗರದ ಬಾವುಟಗುಡ್ಡೆ ಬಳಿ ಮಾ. 29 ರಂದು ಪಾರ್ಕ್ ಮಾಡಿದ್ದ ಹೀರೋ ಹೋಂಡಾ ಮೋಟರ್ ಸೈಕಲ್ನ್ನು ಕಳ್ಳತನ ಮಾಡಿಕೊಂಡು ಹೋಗಿದ್ದ ಆರೋಪಿಗಳಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಮಂಗಳೂರು ಪಂಜಿಮೊಗರುವಿನ ಪ್ರವೀಣ್ ಮೋಂತೇರೋ (22) , ಮಂಗಳೂರು ಪದವಿನಂಗಡಿಯ ಬಿಜಿನ್ ಯಾನೆ ವಿಜಯ್ (20) ಬಂಧಿತ ಆರೋಪಿಗಳು.
ಆರೋಪಿ ಪ್ರವೀಣ್ ನಂಬರ್ ಪ್ಲೇಟ್ ಇಲ್ಲದೇ ಚಲಾಯಿಸಿಕೊಂಡು ಬರುತ್ತಿದ್ದ ವಾಹನವನ್ನು ನಿಲ್ಲಿಸಿ ತಪಾಸಣೆ ಮಾಡಿದಾಗ ಕಳವುಗೈದ ವಾಹನವೆಂದು ಖಚಿತಪಡಿಸಿ ವಾಹನವನ್ನು ವಶಪಡಿಸಿ ಆರೋಪಿ ಪ್ರವೀಣ್ ಮಾಂತೇರೋನನ್ನು ಬಂಧಿಸಲಾಯಿತು .
ಆರೋಪಿ ಪ್ರವೀಣ್ ಮಾಂತೇರೋ ನೀಡಿದ ಮಾಹಿತಿಯಂತೆ ಇನ್ನೋರ್ವ ಆರೋಪಿ ಬಿಜಿನ್ ಯಾನೆ ವಿಜಯ್ಯನ್ನು ಮಂಗಳೂರಿನ ಪದವಿನಂಗಡಿ ಬಳಿ ಬಂಧಿಸಲಾಯಿತು.
Click this button or press Ctrl+G to toggle between Kannada and English