ವಿಶ್ವಹಿಂದು ಪರಿಷತ್‌ ಕಾರ್ಯಕರ್ತೆ ಉಮಾ ಉಳ್ಳಾಲ್ ನಿಧನ

6:29 PM, Saturday, May 26th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

Uma Ullalಮಂಗಳೂರು  : ನಗರದ ಕಂಬಳ ರಸ್ತೆಯಲ್ಲಿರುವ ಉಳ್ಳಾಲ್ ನರ್ಸಿಂಗ್ ಹೋಮ್‌ನ ಸ್ಥಾಪಕ ಡಾ. ರಾಮಚಂದ್ರ ಉಳ್ಳಾಲ್ ಅವರ ಪತ್ನಿ ಶ್ರೀಮತಿ ಉಮಾ ಉಳ್ಳಾಲ್ (75 ವರ್ಷ) ಮೇ. 25 ರಂದು ರಾತ್ರಿ ನಿಧನ ಹೊಂದಿದರು.

ಜನಸಂಘ, ಆರ್.ಎಸ್.ಎಸ್. ವಿಶ್ವಹಿಂದು ಪರಿಷತ್‌ನಲ್ಲಿ ಸಕ್ರಿಯ ಕಾರ್ಯಕರ್ತೆಯಾಗಿದ್ದ ಅವರು ಒಂದು ಅವಧಿಗೆ ಗುಲ್ಬರ್ಗದಲ್ಲಿ ಇನ್ನರ್ ವ್ಹೀಲ್ ಕ್ಲಬ್‌ನ ಡಿಸ್ಟ್ರಿಕ್ಟ್ ಚೆಯರ್‌ಮೆನ್ ಕೂಡ ಆಗಿದ್ದರು. ಮಾತ್ರವಲ್ಲಿ ಗುಲ್ಬರ್ಗದಲ್ಲಿ ಸ್ಟೀಲ್ ಫ್ಯಾಬ್ರಿಕೇಶನ್ ಯುನಿಟ್ ಸ್ಥಾಪಿಸಿದ್ದರು. ಜಿಲ್ಲಾ ಮೆಡಿಕಲ್ ಆಫೀಸರ್ ಆಗಿದ್ದ ತನ್ನ ಪತಿ ಡಾ. ರಾಮಚಂದ್ರ ಅವರೊಡಗೂಡಿ 1989ರಲ್ಲಿ ಉಳ್ಳಾಲ್ ನರ್ಸಿಂಗ್ ಹೋಮ್ ಸ್ಥಾಪನೆಯಲ್ಲೂ ಪ್ರಮುಖ ಪಾತ್ರವಹಿಸಿದ್ದರು, ಬಳಿಕ 1998 ರಲ್ಲಿ ನರ್ಸಿಂಗ್ ಹೋಮ್ ಇನ್‌ಸ್ಟಿಟ್ಯೂಷನ್ ಸ್ಥಾಪಿಸುವಲ್ಲೂ ಯಶಸ್ವಿಯಾಗಿದ್ದರು 2005ರಲ್ಲಿ ಸಾಧಕ ಪ್ರಶಸ್ತಿಗೆ ಪಾತ್ರರಾಗಿದ್ದ ಉಮಾ ಉಳ್ಳಾಲ್ ಅತ್ಯಂತ ಕ್ರಿಯಾಶೀಲ ಮಹಿಳೆಯೆನಿಸಿದ್ದರಲ್ಲದೆ, ಅಸಹಾಯಕರಿಗೆ ನೆರವು ನೀಡುವುದರಲ್ಲೂ ಮುಂಚೂಣಿಯಲ್ಲಿದ್ದರು.

ದಿವಂಗತರು ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English