2018ರ ಐಪಿಎಲ್‌ ಚಾಂಪಿಯನ್‌ ಆಗಿ ಹೊರಹೊಮ್ಮಿದ ಚೆನ್ನೈ ಸೂಪರ್‌ಕಿಂಗ್ಸ್‌..!

10:14 AM, Monday, May 28th, 2018
Share
1 Star2 Stars3 Stars4 Stars5 Stars
(No Ratings Yet)
Loading...

chennai-super-kingsಮುಂಬೈ: ಶೇನ್‌ ವಾಟ್ಸನ್‌ ಸಿಡಿಲಬ್ಬರದ ಶತಕದ(117) ನೆರವಿನಿಂದ ಚೆನ್ನೈ ಸೂಪರ್‌ಕಿಂಗ್ಸ್‌ ತಂಡ ಸನ್‌ರೈಸರ್ಸ್‌ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿ 2018 ರ ಐಪಿಎಲ್‌ ಚಾಂಪಿಯನ್‌ ಆಗಿ ಹೊರಹೊಮ್ಮಿದೆ.

179 ರನ್‌ಗಳ ಟಾರ್ಗೆಟ್‌ ಪಡೆದ ಚೆನ್ನೈ ನಿಧಾನಗತಿ ಆರಂಭ ಪಡೆಯಿತಲ್ಲದೆ ಆರಂಭಿಕ ಪ್ಲೆಸಿಸ್‌(10) ವಿಕೆಟ್‌ ಕಳೆದುಕೊಂಡು ಆಘಾತಕ್ಕೊಳಗಾಯಿತು.

chennai-super-kings-2ಆದರೆ 5 ಓವರ್‌ನಿಂದ ತಮ್ಮ ನೈಜ ಆಟಕ್ಕೆ ಮರಳಿದ ವಾಟ್ಸನ್‌ ಸಿಡಿಲಬ್ಬರದ ಶತಕ(117) ಸಿಡಿಸಿದರು. ಎರಡನೇ ವಿಕೆಟ್‌ ಜೊತೆಯಾಟದಲ್ಲಿ ಸುರೇಶ್‌ ರೈನಾ ಜೊತೆ 117 ರನ್‌ಗಳ ಜೊತೆಯಾಟ ನೀಡಿದರು. ಈ ಹಂತದಲ್ಲಿ ಸುರೇಶ್‌ ರೈನಾ(32) ಬ್ರಾಥ್‌ವೈಟ್‌ ಬೌಲಿಂಗ್‌ನಲ್ಲಿ ಕೀಪರ್‌ಗೆ ಕ್ಯಾಚ್‌ ನೀಡಿ ಔಟಾದರು.

chennai-super-kings-3ನಂತರ ರಾಯುಡು ಜೊತೆಗೂಡಿದ ವಾಟ್ಸನ್‌ 30 ಎಸೆತಗಳಲ್ಲಿ 48 ರನ್‌ ಗಳ ಜೊತೆಯಾಟ ನೀಡಿ ತಂಂಡವನ್ನು ಕೇವಲ 18.3 ಓವರ್‌ಗಳಲ್ಲಿ ಗೆಲುವಿನ ದಡ ಸೇರಿಸಿದರು. ವಾಟ್ಸನ್‌ 57 ಎಸೆತಗಳಲ್ಲಿ 11 ಬೌಂಡರಿ ಹಾಗೂ ಭರ್ಜರಿ 8 ಸಿಕ್ಸರ್‌ಗಳ ನೆರವಿನಿಂದ 117 ರನ್‌ ಗಳಿಸಿದರು. ರಾಯುಡು 16 ರನ್‌ ಗಳಿಸಿ ಗೆಲುವಿನ ಬೌಂಡರಿ ಬಾರಿಸಿದರು..

ಇದಕ್ಕೂ ಮೊದಲು ಬ್ಯಾಟಿಂಗ್‌ ನಡೆಸಿದ ಸನ್‌ರೈಸರ್ಸ್‌ ತಂಡ ಧವನ್‌(26),ವಿಲಿಯಮ್ಸನ್‌ (47), ಯೂಸೆಫ್‌ ಪಠಾಣ್‌(45), ಬ್ರಾಥ್‌ವೈಟ್‌ (21) ಹಾಗೂ ಶಕಿಭ್‌ ಉಲ್‌ ಹಸನ್‌(21) ರನ್‌ಗಳ ನೆರವಿನಿಂದ 178 ರನ್‌ ಹಾಕಿತು.

ಚೆನ್ನೈ ಪರ ಲುಂಗಿ ಎಂಗಿಡಿ, ಶಾರ್ದೂಲ್‌ ಟಾಕೂರ್‌, ಕರಣ್‌ ಶರ್ಮಾ, ಬ್ರಾವೋ, ಜಡೇಜಾ ತಲಾ ಒಂದೊಂದು ವಿಕೆಟ್‌ ಪಡೆದು ಮಿಂಚಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 

 Click this button or press Ctrl+G to toggle between Kannada and English