‘ಟಗರು’ ಚಿತ್ರದ ಶತದಿನೋತ್ಸವ..ಸಂತೋಷ್ ಚಿತ್ರಮಂದಿರದಲ್ಲಿ ಸಂಭ್ರಮಾಚರಣೆ..!

1:48 PM, Monday, June 4th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

tagaru-filmಬೆಂಗಳೂರು: ಸೆಂಚೂರಿ ಸ್ಟಾರ್‌ ಶಿವರಾಜಕುಮಾರ್ ಅಭಿನಯದ `ಟಗರು’ ಚಿತ್ರ ಯಶಸ್ವಿಯಾಗಿ 100 ದಿನಗಳನ್ನು ಪೂರೈಸಿದೆ. ಈ ವರ್ಷ ಶತ ದಿನಗಳನ್ನು ಪೂರೈಸಿದ ಮೊದಲ ಚಿತ್ರವಾಗಿ `ಟಗರು’ ಹೊರಹೊಮ್ಮಿದೆ.

ಚಿತ್ರತಂಡವು ಇದೇ ತಿಂಗಳು ದೊಡ್ಡ ಸಮಾರಂಭ ಮಾಡಿ, ಚಿತ್ರಕ್ಕೆ ದುಡಿದ ಕಲಾವಿದರು ಮತ್ತು ತಂತ್ರಜ್ಞರನ್ನು ಗೌರವಿಸಲಿದೆ. ಅದಕ್ಕೂ ಮುನ್ನ ಶಿವರಾಜಕುಮಾರ್ ಅಭಿಮಾನಿಗಳಿಂದ ಅಭಿಮಾನದ 100ನೇ ದಿನದ ಸಂಭ್ರಮಾಚರಣೆ ನಡೆಯಿತು.

tagaru-film-2ಭಾನುವಾರ ಅಖಿಲ ಕರ್ನಾಟಕ ಡಾ. ಶಿವರಾಜಕುಮಾರ್ ಸೇನಾ ಸಮಿತಿ ಮತ್ತು ಗಂಡುಗಲಿ ಡಾ. ಶಿವರಾಜಕುಮಾರ್ ಅಭಿಮಾನಿಗಳ ಸಂಘದ ವತಿಯಿಂದ ಸಂತೋಷ್ ಚಿತ್ರಮಂದಿರದಲ್ಲಿ ಸಂಭ್ರಮಾಚರಣೆ ನಡೆಯಿತು.

ಈ ಸಂದರ್ಭದಲ್ಲಿ ಶಿವರಾಜಕುಮಾರ್, ಧನಂಜಯ್, ಮಾನ್ವಿತಾ ಹರೀಶ್, ನಿರ್ಮಾಪಕ ಕೆ.ಪಿ. ಶ್ರೀಕಾಂತ್ ಮುಂತಾದವರು ಹಾಜರಿದ್ದರು. ಆ ನಂತರ ಸಂಜೆ ವೀರೇಶ್ ಚಿತ್ರಮಂದಿರದಲ್ಲಿ ಅಖಿಲ ಕರ್ನಾಟಕ ಡಾ. ಶಿವರಾಜಕುಮಾರ್ ಅಭಿಮಾನಿಗಳ ವತಿಯಿಂದ ಶಿವರಾಜಕುಮಾರ್ ಅವರಿಗೆ ಸನ್ಮಾನ ಮಾಡಿ, ಸಿಹಿ ಹಂಚಲಾಯಿತು. ಇದಲ್ಲದೆ ಮೈಸೂರಿನ ಶಿವರಾಜಕುಮಾರ್ ಸಂಘದ ವತಿಯಿಂದಲೂ `ಟಗರು’ ಚಿತ್ರದ ಶತದಿನೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.

tagaru-film-3`ಟಗರು’ ಚಿತ್ರವನ್ನು ಸೂರಿ ನಿರ್ದೇಶಿಸಿದ್ದು, ಚಿತ್ರದಲ್ಲಿ ಶಿವರಾಜಕುಮಾರ್ ಅವರೊಂದಿಗೆ ಭಾವನಾ ಮೆನನ್, ಮಾನ್ವಿತಾ ಹರೀಶ್, ಧನಂಜಯ್, ವಸಿಷ್ಠ ಸಿಂಹ, ದೇವರಾಜ್, ಸುಧಿ ಮುಂತಾದವರು ಅಭಿನಯಿಸಿದ್ದಾರೆ. ಚಿತ್ರಕ್ಕೆ ಮಹೇಂದ್ರ ಸಿಂಹ ಛಾಯಾಗ್ರಹಣ ಮಾಡಿದರೆ, ಚರಣ್‍ರಾಜ್ ಸಂಗೀತ ಸಂಯೋಜಿಸಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 

 Click this button or press Ctrl+G to toggle between Kannada and English