ರಾಜ್ಯದಲ್ಲಿ ‘ಕಾಲ’ ಪ್ರದರ್ಶನವಾದ್ರೆ ದಂಗೆ ಏಳುತ್ತೇವೆ: ಮುಖ್ಯಮಂತ್ರಿ ಚಂದ್ರು

2:49 PM, Tuesday, June 5th, 2018
Share
1 Star2 Stars3 Stars4 Stars5 Stars
(No Ratings Yet)
Loading...

chandruತುಮಕೂರು: ಭಾಷೆಗೆ ಧಕ್ಕೆ ಬಂದರೆ ರಜನಿಕಾಂತ್, ಕಮಲ್ ಹಾಸನ್, ಪ್ರಕಾಶ್ ರೈಗೂ ಧಿಕ್ಕರಿಸುತ್ತೇವೆ ಎಂದು ಮುಖ್ಯಮಂತ್ರಿ ಚಂದ್ರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಜನಿಕಾಂತ್ ಅಭಿನಯದ ‘ಕಾಲ’ ಸಿನಿಮಾಕ್ಕೆ ವಿರೋಧ ವಿಚಾರಕ್ಕೆ ಸಂಬಂಧಿಸಿದಂತೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ನಾಡು, ನುಡಿ, ಗಡಿ ವಿಚಾರ ಬಂದಾಗ ನಾನು ಕಠಿಣ ಹೃದಯಿಯಾಗಿರುತ್ತೇನೆ. ಒಕ್ಕೂಟ ವ್ಯವಸ್ಥೆಗೆ ಪ್ರಾದೇಶಿಕ ಭಾಷೆಗಳಿಗೂ ಗೌರವ ಕೊಡುತ್ತೇನೆ. ರಾಜ್ಯದ ಭಾಷೆಗೆ ಧಕ್ಕೆ ಬಂದರೆ ಎಂತಹ ಸ್ನೇಹಿತರಾದರೂ ಕೂಡ ಅವರ ವಿರುದ್ಧ ಧ್ವನಿ ಎತ್ತುತ್ತೇನೆ ಎಂದರು.

‘ಕಾಲ’ ಸಿನಿಮಾ ಬಿಡುಗಡೆ ಮಾಡದಂತೆ ಕಾನೂನು ಪ್ರಕಾರ ಹೇಳಲಿಕ್ಕೆ ಆಗದಿದ್ದರೂ, ವಿತರಿಕರಿಗೆ ಮತ್ತು ಪ್ರದರ್ಶಕರಿಗೆ ಅರಿವು ಮೂಡಿಸುತ್ತೇವೆ. ಆಕಸ್ಮಾತ್ ಪ್ರದರ್ಶನ ಮಾಡಿದರೆ ನಾವು ದಂಗೆ ಏಳುತ್ತೇವೆ. ವಿತರಕರು ಸಹ ರಾಜ್ಯದ ಹಿತದೃಷ್ಟಿಯನ್ನು ಗಮನಿಸಬೇಕು. ರಾಜ್ಯದ ಹಿತ ಮುಖ್ಯವಾದರೆ ಪ್ರದರ್ಶಕರು, ವಿತರಕರು ಈ ಸಿನಿಮಾ ತೆಗೆದುಕೊಳ್ಳಬಾರದು. ತೆಗೆದುಕೊಂಡರೆ ಅನಾಹುತಕ್ಕೆ ತಯಾರಾಗುವಂತೆ ಎಚ್ಚರಿಕೆ ನೀಡಿದರು.

ಪ್ರಕಾಶ್ ರೈ ಕೂಡ ಪ್ರಚಾರ ಗಿಟ್ಟಿಸಿಕೊಳ್ಳಲು ಸಂದರ್ಭಕ್ಕೆ ಅನುಗುಣವಾಗಿ ಮಾತನಾಡ್ತಾರೆ. ಆದ್ರೆ ಕನ್ನಡ ಭಾಷೆ ವಿರುದ್ಧವಾಗಿ ಯಾರೇ ಮಾತನಾಡಿದ್ರೂ ಅವರ ಬಾಯಿ ಬಚ್ಚಲು ಎಂದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English