ಎಟಿಎಂಯೊಂದರಲ್ಲಿ ಇಲಿಗಳು ಸರ್ಜಿಕಲ್‌‌ ಸ್ಟ್ರೈಕ್ಸ್‌‌‌..ಸುಮಾರು 12 ಲಕ್ಷ ರೂಪಾಯಿ ಮೌಲ್ಯದ ನೋಟುಗಳು ಹಾನಿ!

11:14 AM, Tuesday, June 19th, 2018
Share
1 Star2 Stars3 Stars4 Stars5 Stars
(5 rating, 1 votes)
Loading...

SBI-ATMಗುವಾಹತಿ: ಒಂದು ಸಾವಿರ ಮತ್ತು ಐನೂರು ನೋಟುಗಳ ಬ್ಯಾನ್‌ ಬಳಿಕ ಜನತೆಗೆ ಎಟಿಎಂಗಳಲ್ಲಿ ಇನ್ನೂ ಸರಿಯಾಗಿ ಹಣ ಸಿಗುತ್ತಿಲ್ಲ. ದೇಶದ ಅನೇಕ ಕಡೆ ಟಿಎಂಟಿಗಳ ಮುಂದೆ ನಾಗರಿಕರು ಸಾಲುಗಟ್ಟಿ ನಿಲ್ಲುವ ಪರಿಸ್ಥಿತಿ ಇದೆ. ಆದರೆ, ಈ ನಡುವೆ ಅಸ್ಸೋಂನ ಎಟಿಎಂಯೊಂದರಲ್ಲಿ ಇಲಿಗಳು ಸರ್ಜಿಕಲ್‌‌ ಸ್ಟ್ರೈಕ್ಸ್‌‌‌ ನಡೆಸಿವೆ.

ಹೌದು, ತಿನ್ಸುಕಿಯಾ ಜಿಲ್ಲೆಯಲ್ಲಿ ಎಸ್‌ಬಿಐಗೆ ಸೇರಿದ ಎಟಿಎಂನಲ್ಲಿದ್ದ ಸುಮಾರು 12 ಲಕ್ಷ ರೂಪಾಯಿ ಮೌಲ್ಯದ ನೋಟುಗಳನ್ನು ಇಲಿಗಳು ಹಾನಿ ಮಾಡಿವೆ. ಎಲ್ಲಾ ನೋಟುಗಳ ಹೊಸ ಐನೂರು ಹಾಗೂ ಎರಡು ಸಾವಿರ ನೋಟುಗಳಾಗಿದ್ದು, ಇಲಿಗಳ ಬಾಯಿಗೆ ಬಿದ್ದು ಎಲ್ಲವೂ ಪೀಸ್‌-ಪೀಸ್‌ ಆಗಿವೆ.

ಇಲ್ಲಿನ ಲೈಪುಲಿ ಪ್ರದೇಶದಲ್ಲಿ ಈ ಎಟಿಎಂ ಇದ್ದು, ಕಳೆದ ಒಂದು ತಿಂಗಳಿಂದ ಲಾಕ್‌ ಆಗಿತ್ತು ಎಂದು ಎಸ್‌‌ಬಿಐ ಬ್ಯಾಂಕ್‌ ಮೂಲಗಳು ತಿಳಿಸಿವೆ.

ಮೇ 19ರಂದು 12,38,000 ರೂಪಾಯಿ ಹಣವನ್ನು ಗುವಾಹತಿಯ ಖಾಸಗಿ ಸಂಸ್ಥೆ ಮೂಲಕ ಎಟಿಎಂಗೆ ತುಂಬಿಸಲಾಗಿತ್ತು. ಸುಮಾರು 29 ಲಕ್ಷ ರೂಪಾಯಿ ಹಣ ಮಾತ್ರ ಎಟಿಎಂ ವಿತ್‌ಡ್ರಾ ಆಗಿತ್ತು. ಆದರೆ, ಮರುದಿನವೇ ತಾಂತ್ರಿಕ ತೊಂದರೆಯಿಂದ ಎಟಿಎಂ ಸ್ಥಗಿತಗೊಂಡಿತ್ತು. ಅಂದಿನಿಂದ ಈ ಎಟಿಎಂ ಬಳಕೆಯಲ್ಲಿ ಇರಲಿಲ್ಲ.

ಇದೇ 11ರಂದು ಎಟಿಎಂ ದುರಸ್ತಿ ಮಾಡಿಸಲು ಮೆಕ್ಯಾನಿಕ್‌ನನ್ನು ನೇಮಿಸಲಾಗಿತ್ತು. ಅಂತೆಯೇ ಮೆಕ್ಯಾನಿಕ್‌ ಎಟಿಎಂಗೆ ಹೋಗಿ ಅದನ್ನು ಓಪನ್‌ ಮಾಡಿದಾಗ ಇಲಿಗಳ ಈ ‘ಬೃಹತ್‌ ಕಾರ್ಯಾಚರಣೆ’ ಬೆಳಕಿಗೆ ಬಂದಿದೆ. ಇದನ್ನು ಕಂಡ ಮೆಕ್ಯಾಕಾನಿಕ್‌ ತಬ್ಬಿಬ್ಬಾಗಿದ್ದ.

ಸದ್ಯ ಈ ಬಗ್ಗೆ ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುಮಾರು ಒಂದು ತಿಂಗಳಿಂದ ಎಟಿಎಂ ದುರಸ್ತಿ ಇರುವುದು ಗೊತ್ತಿದ್ದರೂ, ಅದನ್ನು ಸರಿಪಡಿಸಲು ಬ್ಯಾಂಕ್‌ ಅಧಿಕಾರಿಗಳು ತೋರಿದ ಅಸಡ್ಡೆಯಿಂದ ಲಕ್ಷಾಂತರ ನೋಟುಗಳು ಇಲಿಗಳ ಪಾಲಾಗಿವೆ ಎಂದು ಸಾರ್ವಜನಿಕರು ಕಿಡಿಕಾರುತ್ತಿದ್ದಾರೆ. ಜೊತೆಗೆ ಎಟಿಎಂನಲ್ಲಿ ನೋಟುಗಳು ತುಂಡು-ತುಂಡಾಗಿ ಬಿದ್ದಿರುವ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English