ಯುದ್ಧ ವಿಮಾನದ ಮೊದಲ ಮಹಿಳಾ ಪೈಲಟ್‌‌ ಮೇಘನಾ ಶ್ಯಾನ್‍ಬೋಗ್‍ಗೆ ಸನ್ಮಾನ..!

5:09 PM, Friday, June 22nd, 2018
Share
1 Star2 Stars3 Stars4 Stars5 Stars
(5 rating, 1 votes)
Loading...

woman-pilotಚಿಕ್ಕಮಗಳೂರು: ದಕ್ಷಿಣ ಭಾರತದ ಮೊದಲ ಯುದ್ಧ ವಿಮಾನದ ಮಹಿಳಾ ಪೈಲಟ್ ಮೇಘನಾ ಶ್ಯಾನ್‍ಬೋಗ್‍ಗೆ ಕಾಫಿನಾಡು ಚಿಕ್ಕಮಗಳೂರಿನಲ್ಲಿ ಬ್ರಾಹ್ಮಣ ಸಮಾಜದ ವತಿಯಿಂದ ಸನ್ಮಾನಿಸಲಾಯ್ತು.

ಇಂದು ಹುಟ್ಟೂರಿಗೆ ಬಂದಿದ್ದ ಮೇಘನಾಗೆ ನಗರದ ರಂಗಣ್ಣ ಛತ್ರದಲ್ಲಿ ಅಭಿನಂದನಾ ಕಾರ್ಯಕ್ರಮ ನಡೆಯಿತು. ಈ ವೇಳೆ ಮಾತನಾಡಿದ ಮೇಘನಾ, ತನ್ನ ಬಾಲ್ಯ, ಕಾಲೇಜು, ಅಡ್ವೆಂಚರಸ್ ಸಾಧನೆ, ಯುದ್ಧ ವಿಮಾನದ ಪೈಲಟ್ ಆಗಲು ಪಡೆದ ಟ್ರೈನಿಂಗ್, ಸೆಲೆಕ್ಷನ್ ಹಾಗೂ ಪಟ್ಟ ಪರಿಶ್ರಮದ ಹಾದಿಯನ್ನ ಮೆಲುಕು ಹಾಕಿದ್ರು.

ಇದೇ ವೇಳೆ ನನ್ನ ಅಪ್ಪ-ಅಮ್ಮ ಇಬ್ಬರೂ ಲಾಯರ್ಸ್. ನಮ್ಮ ಮನೆಯಲ್ಲಿ ದಿನವೂ ಕೋರ್ಟ್ ಸೀನ್ ನಡೆಯುತ್ತಿತ್ತು. ನೀವು ಮುಕ್ತ ಧಾರಾವಾಹಿಯಲ್ಲಿ ನೋಡೋದು ನಮ್ಮ ಮನೆಯಲ್ಲಿ ದಿನವೂ ಇರ್ತಿತ್ತು ಎಂದು ನಕ್ಕರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English