- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಆರ್​ಎಸ್​ಎಸ್​ನಿಂದ ನಿರ್ಣಾಯಕ ತೀರ್ಮಾನ: ಅಯೋಧ್ಯೆಯಲ್ಲಿ ಕುರಾನ್ ಪಠಣ

RSS [1]ಲಖನೌ: ಇತ್ತೀಚೆಗೆ ಎಲ್ಲ ಮಡಿವಂತಿಕೆಗಳನ್ನು ಬಿಟ್ಟು ಎಲ್ಲರೊಂದಿಗೆ ಬೆರೆಯುವಂತೆ ತೋರುತ್ತಿರುವ ಆರ್ಎಸ್ಎಸ್ ಮತ್ತೊಂದು ಐತಿಹಾಸಿಕ ತೀರ್ಮಾನ ಕೈಗೊಂಡಿದೆ.

ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಎಂಬಂತೆ ಅಯೋಧ್ಯೆ ಪಟ್ಟಣದ ಸರಯೂ ನದಿ ದಂಡೆಯಲ್ಲಿ ಬೃಹತ್ ಸಾಮೂಹಿಕ ನಮಾಜ್ ಹಾಗೂ ಕುರಾನ್ ಪಠಣ ಕಾರ್ಯಕ್ರಮ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ. ಆರ್ಎಸ್ಎಸ್ನ ಈ ನಡೆ ದೇಶಾದ್ಯಂತ ಸಂಚಲನ ಮೂಡಿಸಿದೆ.

ಇದೇ ಜುಲೈ 12 ರಂದು ಆರ್ಎಸ್ಎಸ್ನ ವಿಭಾಗವಾಗಿರುವ ರಾಷ್ಟ್ರೀಯ ಮುಸ್ಲಿಂ ಮಂಚ್ ಈ ಕಾರ್ಯಕ್ರಮ ಆಯೋಜನೆ ಮಾಡಿದೆ. ಹಿಂದೂ ಭಕ್ತರ ಜೊತೆಗೆ ಸುಮಾರು 1,500 ಉಲೇಮಾಗಳು ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿದು ಬಂದಿದೆ. ಇದೇ ವೇಳೆ 200 ಉಲೇಮಾಗಳು ಸೂಪಿ ಸಂತರ ಸಮಾಧಿಗಳಿಗೆ ಭೇಟಿ ನೀಡಲಿದ್ದಾರೆ.

ಈ ಮೂಲಕ, ಶಾಂತಿ ಮತ್ತು ಸಹೋದರತ್ವ ಸಾರುವುದಲ್ಲದೇ, ಆರ್ಎಸ್ಎಸ್ ಹೊಂದಿರುವ ಆ್ಯಂಟಿ ಮುಸ್ಲಿಂ ಇಮೇಜ್ನಿಂದ ಹೊರ ಬರಲು ಈ ಕಾರ್ಯಕ್ರಮ ಆಯೋಜಿಸಿದೆ ಎಂದು ರಾಷ್ಟ್ರೀಯ ಮುಸ್ಲಿಂ ಮಂಚ್ ನ ಕನ್ವೀನರ್ ಮಹಿರಧ್ವಾಜ್ ತಿಳಿಸಿದ್ದಾರೆ. ಆರ್ಎಸ್ಎಸ್ ಮುಸ್ಲಿಂ ಮಂಚ್ನ ಈ ಕಾರ್ಯಕ್ರಮಕ್ಕೆ ಉತ್ತರ ಪ್ರದೇಶ ಸರ್ಕಾರ ಬೆಂಬಲ ಸೂಚಿಸಿದೆ.