ಏಷ್ಯಾ ಪೆಸಿಫಿಕ್​ ಪ್ರಿನ್ಸೆಸ್ 2018..ಮಂಗಳೂರಿನ ವಿದ್ಯಾರ್ಥಿನಿ ರನ್ನರ್ ಅಪ್!

12:54 PM, Thursday, July 12th, 2018
Share
1 Star2 Stars3 Stars4 Stars5 Stars
(No Ratings Yet)
Loading...

diya-mangaloreಮಂಗಳೂರು:  ಯೆನೆಪೋಯ ಶಾಲೆಯ ವಿದ್ಯಾರ್ಥಿನಿ ಬ್ಯಾಂಕಾಕ್ನಲ್ಲಿ ನಡೆದ ಏಷ್ಯಾ ಪೆಸಿಫಿಕ್ ಪ್ರಿನ್ಸೆಸ್ 2018 ರಲ್ಲಿ ಸೆಕೆಂಡ್ ರನ್ನರ್ಸ್ ಅಪ್ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ.

ಥೈಲ್ಯಾಂಡ್ ನ ಬ್ಯಾಂಕಾಕ್ ನಲ್ಲಿ ನಡೆದ ಏಷ್ಯಾ ಪೆಸಿಫಿಕ್ ಪ್ರಿನ್ಸೆಸ್ ಸ್ಪರ್ಧೆಯಲ್ಲಿ ಈ ವಿದ್ಯಾರ್ಥಿನಿ ದಿಯಾ ಸೆಕೆಂಡ್ ರನ್ನರ್ಸ್ ಅಪ್ ಸೇರಿದಂತೆ ನಾಲ್ಕು ಸ್ಪರ್ಧೆಗಳಲ್ಲಿ ಬಹುಮಾನ ಗಿಟ್ಟಿಸಿಕೊಂಡಿದ್ದಾರೆ.

ಈಕೆ ಮಂಗಳೂರಿನ ಜೆಪ್ಪಿನಮೊಗರುವಿನಲ್ಲಿರುವ ಯೆನಪೋಯ ಶಾಲೆಯ 9 ನೇ ತರಗತಿ ವಿದ್ಯಾರ್ಥಿನಿ. ರವಿಕುಮಾರ್ ಮತ್ತು ವಾಣಿ ಅವರ ಪುತ್ರಿ 13 ವರ್ಷದ ಪುತ್ರಿ ದಿಯಾ ರವಿಕುಮಾರ್ ಈ ಸಾಧನೆ ಮಾಡಿದವರು.

ಜುಲೈ 6 ರಂದು ಬ್ಯಾಂಕಾಕ್ ನಲ್ಲಿ ನಡೆದ ಏಷ್ಯಾ ಪೆಸಿಫಿಕ್ ಪ್ರಿನ್ಸೆಸ್ 2018 ರಲ್ಲಿ ಭಾಗವಹಿಸುವ ಮುಂಚೆ ಇತರ ಯಾವುದೇ ಸ್ಪರ್ಧೆಗಳಲ್ಲಿ ಭಾಗವಹಿಸಿದ ಅನುಭವವಿಲ್ಲದಿದ್ದರೂ ದಿಯಾ ರವಿಕುಮಾರ್ ತಮ್ಮ ಮೊದಲ ಪ್ರಯತ್ನದಲ್ಲಿಯೇ ಸೆಕೆಂಡ್ ರನ್ನರ್ಸ್ ಅಪ್ ಸೇರಿದಂತೆ ನಾಲ್ಕು ಪದವಿಗಳನ್ನು ಗೆದ್ದು ಮಂಗಳೂರಿಗೆ ಗೌರವ ತಂದಿದ್ದಾರೆ.

ಏಷಿಯ ಪೆಸಿಫಿಕ್ ಪ್ರಿನ್ಸೆಸ್ 2018ರ ರನ್ನರ್ಸ್ ಅಪ್ ಆಗಿರುವ ಈ ಚೆಲುವೆಗೆ ಮೊದಲು ಸಿಕ್ಕಿದ್ದು, ಬೆಸ್ಟ್ ಇವ್ನಿಂಗ್ ವೇರ್ ಪ್ರಶಸ್ತಿ. ಮಂಗಳೂರಿನ ಡಿಸೈನರ್ ಮಾಂತ್ರಿಕ ಜೀವನ್ ಗಟ್ಟಿ ವಿನ್ಯಾಸಗೊಳಿಸಿದ ಆಕರ್ಷಕ ಉಡುಗೆಯನ್ನು ತೊಟ್ಟಿದ್ದ ದಿಯಾ ರವಿಕುಮಾರ್ ಬೆಸ್ಟ್ ಇವ್ನಿಂಗ್ ವೇರ್ ಪ್ರಶಸ್ತಿಯನ್ನು ಗಳಿಸಿದರು.

ಟ್ಯಾಲೆಂಟ್ ರೌಂಡ್ನಲ್ಲಿ ಈಕೆಯ ಲಾವಣಿ ನೃತ್ಯ ಎರಡನೇ ಸ್ಥಾನ ಪಡೆದುಕೊಂಡಿದೆ. ದಿಯಾ ಬೆಸ್ಟ್ ಟ್ಯಾಲೆಂಟ್ ಓವರ್ ಆಲ್ ಪ್ರಶಸ್ತಿಯನ್ನು ಸಹ ಮುಡಿಗೇರಿಸಿಕೊಂಡಿದ್ದಾಳೆ.

ನಾಲ್ಕು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡು ಮಂಗಳೂರಿಗೆ ಬಂದಿರುವ ದಿಯಾ ರವಿಕುಮಾರ್ ಸಾಧನೆಗೆ ಈಕೆಯ ತಾಯಿ ವಾಣಿ ಅವರು ಮಗಳು ಕಿರೀಟ ಮುಡಿಗೇರಿಸಿಕೊಂಡು ಬರುತ್ತಾಳೆ ಎಂಬ ವಿಶ್ವಾಸವಿತ್ತು. ಸ್ಪರ್ಧೆಗಾಗಿ ಹೋಗಲು ಸಿಟಿ ಫ್ಯಾಷನ್ ಏಜೆನ್ಸಿ ಫ್ಯಾಷನ್ ಎಬಿಸಿಡಿ ಮತ್ತು ಯೆನೆಪೋಯ ಶಾಲೆಯ ಪ್ರೋತ್ಸಾಹ ಆಕೆಯ ಗೆಲುವಿಗೆ ಕಾರಣವಾಗಿದೆ ಎಂದು ಹೇಳುತ್ತಾರೆ.

ಕಲಿಕೆಯೊಂದಿಗೆ ಇದೇ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡುವ ಇಚ್ಛೆಯನ್ನು ದಿಯಾ ರವಿಕುಮಾರ್ ಹೊಂದಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 

 Click this button or press Ctrl+G to toggle between Kannada and English