ಮುಖ್ಯಮಂತ್ರಿಯಾಗಿ ನಿಮಗೆ ಅಮೃತ ಕೊಟ್ಟು ನಾನು ವಿಷ ಕುಡಿಯುತ್ತೇನೆ: ಹೆಚ್.ಡಿ.ಕುಮಾರಸ್ವಾಮಿ

6:23 PM, Saturday, July 14th, 2018
Share
1 Star2 Stars3 Stars4 Stars5 Stars
(No Ratings Yet)
Loading...

kumarswamy-sarkarಬೆಂಗಳೂರು: ಸಮ್ಮಿಶ್ರ ಸರ್ಕಾರದಲ್ಲಿದ್ದೇನೆ. ಸಿದ್ದರಾಮಯ್ಯ ಅವರು ಕೊಟ್ಟಿರುವ ಮಾತನ್ನು ನಾನು ಉಳಿಸಿಕೊಳ್ಳಬೇಕು ಎಂದು ಜೆಡಿಎಸ್ ಕಚೇರಿಯಲ್ಲಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.

ಸಿದ್ದರಾಮಯ್ಯನವರು ಮಾಡಿದ್ದ 50,000 ರೂ.ವರೆಗಿನ ಸಾಲ ಮನ್ನಾದ 8,000 ಕೋಟಿ ಬಾಕಿಯನ್ನೂ ನಾನೇ ತೀರಿಸಬೇಕಾಗಿದೆ. ನಾನು ಚಾಲೆಂಜ್ ಆಗಿ ಸ್ವೀಕರಿಸಿ ರೈತರ ಒಂದು ಲಕ್ಷ ರೂ.ವರೆಗಿನ ಸಾಲ ಮನ್ನಾ ಮಾಡಲು ತೀರ್ಮಾನಿಸಿದ್ದೇನೆ. ಆದರೆ, ರೈತರು ಅನ್ನ ಕೊಡ್ತೀರೋ.. ವಿಷ  ಕೊಡ್ತೀರೋ ತೀರ್ಮಾನಿಸಿ… ನಿಮ್ಮ ತೀರ್ಮಾನದಿಂದ ನನಗೆ ನಷ್ಟವಿಲ್ಲ. ನನಗೆ ಇದು ದೇವರು ಕೊಟ್ಟ ಅಧಿಕಾರ. ಆದರೆ, ಅಧಿಕಾರದಲ್ಲಿ ಇರುವವರೆಗೆ ಜನ ಸೇವೆಯಲ್ಲಿರುತ್ತೇನೆ ಎಂದರು.

ಇವತ್ತು ಉಡುಪಿಯಲ್ಲಿ ಮೀನುಗಾರ ಮಹಿಳೆಯರ ಕೈಯಲ್ಲಿ ಇಂಗ್ಲಿಷ್ ಬೋರ್ಡ್ ಕೊಟ್ಟು ಪ್ರತಿಭಟನೆ ಮಾಡಿಸಿದ್ದರ ಹಿಂದೆ ಬಿಜೆಪಿಯ ಹುನ್ನಾರವಿದೆ. ಆದರೂ ನಾನು ಹೆದರಲ್ಲ. ಇನ್ನು ಹತ್ತು ಹದಿನೈದು ದಿನದಲ್ಲಿ ಮೀನುಗಾರರ ಹಳ್ಳಿಗಳಿಗೆ ತೆರಳುತ್ತೇನೆ. ಮಾಧ್ಯಮದ ಮಿತ್ರರು ನನ್ನ ಕಣ್ತರೆಸಿದ್ದಾರೆ. ನಾನು ಆ ಹೆಣ್ಣುಮಕ್ಕಳನ್ನೇ ಕೇಳುತ್ತೇನೆ. ನನ್ನ ಏಕೆ ದ್ವೇಷಿಸುತ್ತೀರಿ ಎಂದು ಕೇಳುತ್ತೇನೆ ಎಂದು ಭಾವುಕರಾಗಿ ನುಡಿದರು.

ಈ ಸಮ್ಮಿಶ್ರ ಸರ್ಕಾರದಲ್ಲಿ ನಾನು ವಿಶಕಂಠನಾಗಲೇಬೇಕು. ಮುಖ್ಯಮಂತ್ರಿಯಾಗಿ ನಿಮಗೆ ಅಮೃತ ಕೊಟ್ಟು ನಾನು ವಿಶ ಕುಡಿಯುತ್ತೇನೆ. ಬಿಜೆಪಿಯವರು ಕೊಡಗಿನ ಹುಡುಗನ ಮೂಲಕ ಹೇಳಿಕೆ ಕೊಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ. ನಾನು ಆ ಹುಡುಗನ ಮನೆಗೇ ಹೋಗುತ್ತೇನೆ. ಅವರ ಸಮಸ್ಯೆ ಕೇಳುತ್ತೇನೆ ಎಂದರು.

ಕೆಆರ್ಎಸ್ ಜಲಾಶಯ 123 ಅಡಿ ಭರ್ತಿಯಾಗಿದೆ. ಕೆಆರ್ಎಸ್ನಿಂದ 20,000 ಕ್ಯೂಸೆಕ್ ನೀರು ತಮಿಳುನಾಡಿಗೆ ಹೋಗುತ್ತಿದೆ. 35000 ಕ್ಯೂಸೆಕ್ ಒಳ ಹರಿವಿದೆ. ನೀರು ಬಿಡಲೇಬೇಕು. ಮಂಡ್ಯ , ಮೈಸೂರು ಜಿಲ್ಲೆಯ ಎಲ್ಲ ಕೆರೆ ತುಂಬಿಸಲು ಹತ್ತು ದಿನದ ಹಿಂದೆಯೇ ಆದೇಶಿಸಿದ್ದೇನೆ. ತಾಯಿ ಚಾಮುಂಡೇಶ್ವರಿ, ಕಾವೇರಿ ಮಾತೆ ನನ್ನ ಉಳಿಸಿದ್ದಾಳೆ. ಈ ನಾಡಿನ ಜನರಿಗೆ ಏನಾದರೂ ಮಾಡಬೇಕು ಎಂಬ ಹುಚ್ಚಿದೆ ಎಂದರು.

ನಾನು ರಾಜ್ಯದ ಮೂವತ್ತೂ ಜಿಲ್ಲೆಗಳಿಗೂ ಸಿಎಂ. ಉಡುಪಿ, ಕೊಡಗು, ಉತ್ತರ ಕರ್ನಾಟಕಕ್ಕೂ ಸಿಎಂ. ಎರಡು ತಿಂಗಳು ಟೀಕಿಸಿದ್ದು ಸಾಕು. ನನಗೆ ಅವಕಾಶ ಕೊಡಿ. ನನ್ನ ವಿರುದ್ಧ ಜನರನ್ನು ಎತ್ತಿಕಟ್ಟಲು ಪ್ರಯತ್ನಿಸಬೇಡಿ ಎಂದು ಸಿಎಂ ಕುಮಾರಸ್ವಾಮಿ ಸ್ವಾಮಿ ಮಾಧ್ಯಮಗಳಿಗೆ ಮನವಿ ಮಾಡಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English