ಮುರಿದುಬಿದ್ದ ನಟಿ ಪೂಜಾಗಾಂಧಿ ಮದುವೆ ನಿಶ್ಚಿತಾರ್ಥ

5:18 PM, Thursday, December 20th, 2012
Share
1 Star2 Stars3 Stars4 Stars5 Stars
(No Ratings Yet)
Loading...

Pooja Gandhiಬೆಂಗಳೂರು :ಮಳೆ ಹುಡುಗಿಯಾಗಿ ಮಿಂಚಿ, ರಾಜಕಾರಣದಲ್ಲಿಯೂ ಛಾಪು ಮೂಡಿಸುತ್ತಿರುವ ನಟಿ ಪೂಜಾ ಗಾಂಧಿ ಮದುವೆ ನಿಶ್ಚಿತಾರ್ಥ ನವೆಂಬರ್ 15ರಂದು ರಿಯಲ್ ಎಸ್ಟೇಟ್ ಉದ್ಯಮಿ ಆನಂದ್ ಗೌಡ ಅವರೊಂದಿಗೆ ನೆರವೇರಿತ್ತು ಆದರೆ ಇದೀಗ ಮದುವೆ ನಿಶ್ಚಿತಾರ್ಥ ಒಂದೇ ತಿಂಗಳಲ್ಲಿ ಮುರಿದುಬಿದ್ದಿದೆ. ನಿಶ್ಚಿತಾರ್ಥ ಮುರಿದು ಬೀಳಲು ಕಾರಣಗಳೇನೆಂಬುದು ಇನ್ನೂ ಖಚಿತವಾಗಿಲ್ಲ. ಆದರೆ ಪೂಜಾ ಗಾಂಧಿ ತಾಯಿಗೆ ಹಣದಾಸೆ ಜಾಸ್ತಿ, ಹೀಗಾಗಿ ತಾನು ದೂರ ಸರಿದಿರುವುದಾಗಿ ಆನಂದ ಗೌಡ ಅವರು ಮಾಧ್ಯಮಗಳಿಗೆ ಹೇಳಿರುವುದು ಒಂದು ಕಡೆಯಾದರೆ,
ಇದೇ ವೇಳೆ, ಈ ಕುರಿತು ಪ್ರತಿಕ್ರಿಯಿಸಿರುವ ಪೂಜಾ ಗಾಂಧಿ, ‘ನಮ್ಮಿಬ್ಬರ ಮಧ್ಯೆ ಹೊಂದಾಣಿಕೆಯಾಗುತ್ತಿಲ್ಲ ಎಂದಿದ್ದಾರೆ.

ಇನ್ನೊಂದು ಮೂಲದ ಪ್ರಕಾರ ಇತ್ತೀಚೆಗೆ ಪೂಜಾಗಾಂಧಿ ಅವರು ಜೆಡಿಎಸ್ ತೊರೆದು ಕೆಜೆಪಿಗೆ ಸೇರಿದ್ದೂ ಮದುವೆ ಸಂಬಂಧ ಮುರಿದುಬೀಳಲು ಮತ್ತೊಂದು ಕಾರಣ ಎನ್ನಲಾಗಿದೆ. ಆನಂದಗೌಡ ಅವರು ಜೆಡಿಎಸ್ ಪಕ್ಷಕ್ಕೆ ಸೇರಿವರಾಗಿದ್ದು ಪೂಜಾಗಾಂಧಿ ಪಕ್ಷಾಂತರವನ್ನು ಅವರು ಒಪ್ಪುತ್ತಿಲ್ಲ ಎನ್ನುತ್ತವೆ ಮೂಲಗಳು. ಇಷ್ಟಕ್ಕೂ ಆನಂದಗೌಡ ಜೊತೆಗಿನ ಪೂಜಾಗಾಂಧಿ ಮದುವೆ ಮುರಿದುಬೀಳಲು ಸೂಕ್ತ ಕಾರಣ ಏನಿರಬಹುದು ಎಂಬುದು ಇನ್ನಷ್ಟೇ ಗೊತ್ತಾಗಬೇಕು. ಹೆಚ್ಚಿನ ವಿವರಗಳು ಇನ್ನಷ್ಟೇ ಹೊರಬೀಳಬೇಕು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English