ಚಾರ್ ಮಿನಾರ್ ತೆಲುಗು ರಿಮೇಕ್ ನಲ್ಲಿ ನಾಗಾರ್ಜುನ್ ಪುತ್ರ

4:47 PM, Monday, February 18th, 2013
Share
1 Star2 Stars3 Stars4 Stars5 Stars
(No Ratings Yet)
Loading...

Naga Chaithanyaಬೆಂಗಳೂರು :ಆರ್. ಚಂದ್ರು ನಿರ್ದೇಶನದ ‘ಚಾರ್ ಮಿನಾರ್ ‘ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದ್ದು ತೆಲುಗು ಭಾಷೆಗೂ ಈ ಚಿತ್ರ ರಿಮೇಕ್ ಆಗುತ್ತಿದೆ. ಈಗಿರುವ ಸುದ್ಧಿಗಳ ಪ್ರಕಾರ, ತೆಲುಗು ರಿಮೇಕ್ ನಲ್ಲಿ ನಟ ನಾಗಾರ್ಜುನ್ ಅಭಿನಯಿಸಲಿದ್ದಾರೆ ಎನ್ನಲಾಗಿತ್ತು. ಆದರೆ ಚಂದ್ರು ಅವರು ಹಲವರೊಂದಿಗೆ ಚರ್ಚಿಸಿ  ಕೊನೆಗೆ ನಾಗಾರ್ಜುನ್ ರ ಪಡಿಯಚ್ಚಿನಂತಿರುವ ಅವರ ಪುತ್ರ ನಾಗಚೈತನ್ಯ ಅವರನ್ನು ಚಿತ್ರದ ನಾಯಕನನ್ನಾಗಿ ಆಯ್ಕೆ ಮಾಡಲು ಮುಂದಾಗಿದ್ದಾರೆ.

ಕನ್ನಡದಲ್ಲಿ ಲವ್ಲಿ ಸ್ಟಾರ್ ಪ್ರೇಮ್ ಕುಮಾರ್ ಪೋಷಿಸಿದ್ದ ಪಾತ್ರವನ್ನು ತೆಲುಗಿನಲ್ಲಿ ನಾಗಚೈತನ್ಯ ಪೋಷಿಸಲಿದ್ದಾರೆ. ನಟ ನಾಗಾರ್ಜುನ ಅವರಿಗಿಂತಲೂ ನಾಗಚೈತನ್ಯ ಅವರಿಗೆ ಚಿತ್ರದ ಕಥೆ ಹೆಚ್ಚಾಗಿ ಹೊಂದಾಣಿಕೆಯಾಗುತ್ತದೆ ಎಂಬುದು ಚಂದ್ರು  ಅಭಿಪ್ರಾಯ. ಇನ್ನು ನಾಗಚೈತನ್ಯ ಇದುವರೆಗೂ  ‘100% ಲವ್’, ‘ಬೆಜವಾಡ’, ‘ಆಟೋನಗರ್ ಸೂರ್ಯ’ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಬಾಕ್ಸ್ ಆಫೀಸಲ್ಲಿ ಸದ್ದು ಮಾಡಿರುವ ಚಾರ್ ಮಿನಾರ್  ತೆಲುಗಿಗೆ ರೀಮೇಕ್ ಆಗುತ್ತಿರುವುದು ನಿಜಕ್ಕೂ ಒಳ್ಳೆಯ ಸಂಗತಿ. ತೆಲುಗು ರೀಮೇಕ್ ಚಿತ್ರವನ್ನು ಲಗಡಪತಿ ಶ್ರೀಧರ್ ಎಂಬುವವರು ನಿರ್ಮಿಸುತ್ತಿದ್ದಾರೆ. ಆದರೆ ಆಕ್ಷನ್ ಕಟ್ ಆರ್ ಚಂದ್ರು ಅವರೇ ಹೇಳುತ್ತಾರೋ ಅಥವಾ ಬೇರೆ ನಿರ್ದೇಶಕನ ಕೈಗೆ ಕೊಡುತ್ತಾರೋ ಎಂಬ ಬಗ್ಗೆ ಇನ್ನೂ ಖಚಿತ ಮಾಹಿತಿ ಇಲ್ಲ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English